ನವದೆಹಲಿ: ವರ್ಷ 2020 ದೇಶ ಮತ್ತು ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಯಾಗಿರುವುದು ನಿಮ್ಮೆಲ್ಲರಿಗೂ ತಿಳಿದ ವಿಷಯವೆ. ಆದ್ರೆ ಇದನ್ನೆಲ್ಲಾ ಪಕ್ಕಕ್ಕಿಟ್ಟು, ವಿಜ್ಞಾನದ ಕುರಿತು ಹೇಳುವುದಾದರೆ, ವರ್ಷ 2020ರಲ್ಲಿ ಖಗೋಳದಲ್ಲಿಯೂ ಕೂಡ ಕೋಲಾಹಲವೇ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಈ ಕುರಿತು ನಾಸಾ ನಿರಂತರವಾಗಿ ತನ್ನ ಫ್ಯಾಕ್ಟ್ ಹಾಗೂ ಎಚ್ಚರಿಕೆಯನ್ನು ಜಾರಿಗೊಳಿಸುತ್ತಲೇ ಇದೆ. ಈ ವರ್ಷ ಖಗೋಳದಲ್ಲಿ ಹಲವು ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಗಳ ಜೊತೆಗೆ, ಬಾಹ್ಯಾಕಾಶದಲ್ಲಿ ಸಾಕಷ್ಟು ಹಲ್-ಚಲ್ ಸೃಷ್ಟಿಯಾಗಿದೆ. ದಿನನಿತ್ಯ ಹಲವು ಚಿತ್ರ ವಿಚಿತ್ರ ಸಂಗತಿಗಳು ಬಾಹ್ಯಾಕಾಶದಿಂದ ವರದಿಯಾಗುತ್ತಲೇ ಇವೆ.
NASA ನೀಡಿರುವ ನೂತನ ಎಚ್ಚರಿಕೆ ಏನು?
ಬಾಹ್ಯಾಕಾಶ ಸಂಸ್ಥೆ ನಾಸಾ ಜಗತ್ತಿಗೆ ಹೊಸ ಎಚ್ಚರಿಕೆ ನೀಡಿದೆ. ನಾಸಾ ಪ್ರಕಾರ, ಬೃಹದಾಕಾರದ ಕ್ಷುದ್ರಗ್ರಹವೊಂದು ಶರವೇಗದಲ್ಲಿ ಭೂಮಿಯೆಡೆಗೆ ಬರುತ್ತಿದೆ. ಈ ಕ್ಷುದ್ರಗ್ರಹವು ಲಂಡನ್ ಐಗಿಂತ ಗಾತ್ರದಲ್ಲಿ ಒಂದೂವರೆ ಪಟ್ಟು ದೊಡ್ಡದಾಗಿದೆ. ಯುನೈಟೆಡ್ ಕಿಂಗ್‌ಡಂನ ಹೆಗ್ಗುರುತು ಲಂಡನ್ ಐನ ಎತ್ತರವು ಸುಮಾರು 443 ಅಡಿಗಳಷ್ಟಿದೆ ಮತ್ತು ಭೂಮಿಯೆಡೆಗೆ ಧಾವಿಸುತ್ತಿರುವ ಕ್ಷುದ್ರಗ್ರಹದ ಆಕರ ಅದಕ್ಕಿಂತ ಶೇ 50 ರಷ್ಟು ದೊಡ್ಡದಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಈ ಕ್ಷುದ್ರಗ್ರಹಕ್ಕೆ Asteroid2020ND ಎಂದು ಹೆಸರಿಸಿದೆ ಹಾಗೂ ಭೂಯಲ್ಲಿರುವ ಜೀವರಾಶಿಗೆ ಇದು ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ ಎಂದು ನಾಸಾ ಎಚ್ಚರಿಕೆ ನೀಡಿದೆ. ಜುಲೈ 24, 2020 ಈ ಕ್ಷುದ್ರಗ್ರಹ ಭೂಮಿಯ ಅತ್ಯಂತ ಸನೀಹಕ್ಕೆ ಬರಲಿದೆ ಎಂದು ಸಂಸ್ಥೆ ಹೇಳಿದೆ. NASA ನೀಡಿರುವ ಎಚ್ಚರಿಕೆಯ ಪ್ರಕಾರ ಈ ಕ್ಷುದ್ರಗ್ರಹ ಭೂಮಿಯ 0.034 AU (Astronomical unit) ರೇಂಜ್ ನ ಒಳಗಡೆ ಬರಲಿದೆ. ಒಂದು ಆಸ್ಟ್ರೋನೋಮಿಕಲ್ ಯುನಿಟ್, 150 ಮಿಲಿಯನ್ ಕಿ.ಮೀ ಸಮನಾಗಿರುತ್ತದೆ ಅಂದರೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರಕ್ಕೆ ಇದು ಸಮನಾಗಿರುತ್ತದೆ.
ಈ ಖಗೋಳ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಸ್ವಾರಸ್ಯಕರ ಪ್ರತಿಕ್ರಿಯೆಗಳು ಕಂಡುಬರುತ್ತಿವೆ.