ಜೈಪುರ: ಕರ್ನಾಟಕದಲ್ಲಿ ಖ್ಯಾತಿ ಪಡೆದಿದ್ದ ಇಂದಿರಾ ಕ್ಯಾಂಟೀನ್ (Indira Canteen) ಅನ್ನು ತೆರೆಯುವುದಾಗಿ ರಾಜಸ್ಥಾನ ಸರ್ಕಾರ ಘೋಷಿಸಿದೆ. ರಾಜಸ್ಥಾನದಲ್ಲಿ ಬಡವರಿಗೆ ಎರಡು ಬಾರಿ ಆಹಾರವನ್ನು ಒದಗಿಸುವ ಉದ್ದೇಶದಿಂದ ರಾಜಸ್ಥಾನ ಸರ್ಕಾರ (Rajastan Government) ರಾಜ್ಯಾದ್ಯಂತ 'ಇಂದಿರಾ ರಸೋಯಿ ಯೋಜನೆ'ಯನ್ನು ಪ್ರಾರಂಭಿಸಲಿದೆ. ಈ ಯೋಜನೆಯಡಿ ಬಡ ಜನರಿಗೆ ಕೇವಲ 8 ರೂಪಾಯಿಯಲ್ಲಿ ಆಹಾರವನ್ನು ನೀಡಲಾಗುವುದು.
ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ಮಾಡಿದ ಸಿದ್ದರಾಮಯ್ಯ
ಈ ಸಂಕಲ್ಪವು ಪ್ರತಿ ಬಡ ವ್ಯಕ್ತಿಗಳಿಗೆ ಆಹಾರವನ್ನು ತಲುಪುವಂತೆ ಮಾಡಲು 'ಗೆಹ್ಲೋಟ್ ಸರ್ಕಾರ ಆಗಸ್ಟ್ 20 ರಂದು ಇಂದಿರಾ ಕಿಚನ್ ಯೋಜನೆಯನ್ನು ಪ್ರಾರಂಭಿಸಲಿದೆ. ರಾಜ್ಯದ ನಗರ ಪ್ರದೇಶಗಳಲ್ಲಿನ ಬಡ ಜನರಿಗೆ ಈಗ ಎರಡು ಬಾರಿ ರಿಯಾಯಿತಿ ದರದಲ್ಲಿ ಆಹಾರವನ್ನು ಒದಗಿಸಲಿದ್ದಾರೆ.
Rajasthan government will launch 'Indira Kitchen Scheme' in urban areas of the state on August 20. Under the scheme, 358 kitchens will be operationalized wherein people will get food in Rs 8: State government
— ANI (@ANI) August 2, 2020
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ಇಂದಿರಾ ರಸೋಯಿ ಯೋಜನೆಯನ್ನು ರಾಜ್ಯದಾದ್ಯಂತ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ ಅಗತ್ಯವಿರುವವರಿಗೆ ರಿಯಾಯಿತಿ ದರದಲ್ಲಿ ಶುದ್ಧ ಮತ್ತು ಪೌಷ್ಠಿಕ ಉಪಹಾರ ಮತ್ತು ಆಹಾರವನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಯೋಜನೆಗೆ ವಾರ್ಷಿಕವಾಗಿ ಸುಮಾರು 100 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಯೋಜನೆಯಡಿ ವ್ಯಾನ್ ರೈಲುಗಳ ಬದಲು ಶಾಶ್ವತ ಅಂಗಡಿಗಳಲ್ಲಿ ಆಹಾರವನ್ನು ನೀಡಲಾಗುವುದು.
ಇಂದಿರಾ ಕ್ಯಾಂಟೀನ್ನಲ್ಲಿಉಚಿತವಾಗಿ ಊಟ, ತಿಂಡಿ ಕೊಡುವ ವಿಷಯ: ಸಿದ್ದು ಜೊತೆ ಬಿಎಸ್ವೈ ಚರ್ಚೆ
ಯಾವುದೇ ಒಂದು ಸಂಸ್ಥೆಗೆ ಟೆಂಡರ್ ನೀಡದ ಮೂಲಕ ಎನ್ಜಿಒಗಳ ಸಹಾಯದಿಂದ ಈ ಯೋಜನೆಯನ್ನು ನಡೆಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ.
ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಜನರು ಹೆಚ್ಚು ಇರುವ ಆಸ್ಪತ್ರೆಗಳಲ್ಲಿ ಈ ಅಡಿಗೆಮನೆಗಳನ್ನು ತೆರೆಯಲಾಗುವುದು. 100 ಗ್ರಾಂ ಬೇಳೆ, 100 ಗ್ರಾಂ ತರಕಾರಿಗಳು, 250 ಗ್ರಾಂ ಚಪಾತಿ ಮತ್ತು ಹೆಚ್ಚಿನದನ್ನು ಆಹಾರದಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ.