ನವದೆಹಲಿ: ನೇಪಾಳದಂತೆಯೇ, ಪಾಕಿಸ್ತಾನ (Pakistan)ವೂ ಕೂಡ ತನ್ನ ನೂತನ ರಾಜಕೀಯ ನಕ್ಷೆಯನ್ನು ಬಿಡುಗಡೆಗೊಳಿಸಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಗುಜರಾತ್ ನ ಜುನಾಗಢ ಅನ್ನು ತನ್ನ ನೂತನ ನಕ್ಷೆಯಲ್ಲಿ ಸೇರಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮಂಗಳವಾರ ದೇಶದ ಹೊಸ ರಾಜಕೀಯ ನಕ್ಷೆಯನ್ನು ಮುದ್ರಿಸಿದೆ. ಕಳೆದ ವರ್ಷ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ಮೊದಲ ವಾರ್ಷಿಕೋತ್ಸವದ ಮುನ್ನಾ ದಿನದಂದು ಪಾಕಿಸ್ತಾನ ಸರ್ಕಾರ ಈ ಕ್ರಮ ಕೈಗೊಂಡಿದೆ. ಪಾಕಿಸ್ತಾನ ತನ್ನ ನಕ್ಷೆಯಲ್ಲಿ ಈ ಪ್ರದೇಶಗಳನ್ನು ತೋರಿಸುತ್ತಿರುವುದು ಇದೇ ಮೊದಲು.
ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ಪ್ರಕಟಿಸಿರುವ ವರದಿಯ ಪ್ರಕಾರ, ಈ ನಿರ್ಧಾರದ ಬಳಿಕ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಯೊಂದಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದು ಪಾಕಿಸ್ತಾನದ ಐತಿಹಾಸಿಕ ದಿನ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಇಮ್ರಾನ್ "ಇಂದು ಕ್ಯಾಬಿನೆಟ್ ಪರವಾಗಿ ಈ ನಕ್ಷೆಗೆ ಅನುಮೋದನೆ ನೀಡಿದ ಬಳಿಕ ಇದು ಪಾಕಿಸ್ತಾನದ ಅಧಿಕೃತ ನಕ್ಷೆಯಾಗಿದ್ದು. ಇದನ್ನು ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಸಲಾಗುವುದು" ಎಂದಿದ್ದಾರೆ "ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ಸಂಪೂರ್ಣ ಲಡಾಖ್ ಅನ್ನು ತನ್ನ ನಕ್ಷೆಯಲ್ಲಿ ತೋರಿಸಿ, ಇದೊಂದು ವಿವಾದಿತ ಪ್ರದೇಶವಾಗಿದೆ ಮತ್ತು ಯುಎನ್ ನಿರ್ಣಯಗಳ ಅಡಿಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು" ಎಂದು ಹೇಳಿದೆ.
ಇದಕ್ಕೂ ಮೊದಲು ನೇಪಾಳ ಕೂಡ ತನ್ನ ನೂತನ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿ , ಭಾರತೀಯ ಪ್ರದೇಶಗಳಾದ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಧಾರ್ಚುಲಾಗಳನ್ನೂ ತನ್ನ ನಕ್ಷೆಯಲ್ಲಿ ತೋರಿಸಿತ್ತು. ಕಾಶ್ಮೀರದ ವಿಷಯವು ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯಗಳ ಅಡಿಯಲ್ಲಿ ಮಾತ್ರ ಸಂಭವವಿದೆ ಎಂದಿರುವ ಇಮ್ರಾನ್ ಖಾನ್, ಇದು ಕಾಶ್ಮೀರಿ ಜನರಿಗೆ ಸ್ವ-ನಿರ್ಣಯದ ಹಕ್ಕನ್ನು ನೀಡಲಿದೆ. ಈ ಹಕ್ಕನ್ನು ವಿಶ್ವ ಸಮುದಾಯ ಇನ್ನೂ ಅವರಿಗೆ ಈ ಹಕ್ಕನ್ನು ನೀಡಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಇಮ್ರಾನ್ ಹೇಳಿದ್ದಾರೆ.