ನವದೆಹಲಿ: ಏರ್ ಇಂಡಿಯಾ ವಿಮಾನ ಕೇರಳದ ರನ್‌ವೇಯಲ್ಲಿ ಜಾರಿಬಿದ್ದಿದೆ. ದುಬೈನಿಂದ ಕೋಜಿಕೋಡ್‌ಗೆ (Kozhikode) ಬರುತ್ತಿದ್ದ ವಿಮಾನ ಕೇರಳದ ಕೋಜಿಕೋಡ್‌ನಲ್ಲಿ ರನ್‌ವೇಯಲ್ಲಿ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ ಒಟ್ಟು 191 ಜನರು ಇದ್ದರು. ವಿಮಾನ ಅಪಘಾತದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ದುಃಖ ವ್ಯಕ್ತಪಡಿಸಿದ್ದಾರೆ.
ಕೇರಳ ಸಿಎಂ ಜೊತೆ ಪಿಎಂ ಮೋದಿ ಮಾತು:
ಈ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು ಕೋಜಿಕೋಡ್‌ನಲ್ಲಿನ ವಿಮಾನ ಅಪಘಾತದಿಂದ ನನಗೆ ನೋವಾಗಿದೆ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ದುಃಖದಲ್ಲಿ ನಾವೂ ಇದ್ದೇವೆ. ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲೆಂದು ಆಶಿಸುತ್ತೇನೆ. ನಾನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದೇನೆ. ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಾಯ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.
Pained by the plane accident in Kozhikode. My thoughts are with those who lost their loved ones. May the injured recover at the earliest. Spoke to Kerala CM @vijayanpinarayi Ji regarding the situation. Authorities are at the spot, providing all assistance to the affected.
— Narendra Modi (@narendramodi) August 7, 2020
ಅಮಿತ್ ಶಾ ಕೂಡ ದುಃಖ ವ್ಯಕ್ತಪಡಿಸಿದರು:
ಘಟನೆ ನಡೆದ ಕೂಡಲೇ ದೇಶದ ಗೃಹ ಸಚಿವ ಅಮಿತ್ ಷಾ (Amit Shah) ಅವರ ಪ್ರತಿಕ್ರಿಯೆ ಬಂದಿತು. ಕೇರಳದ ಕೋಜಿಕೋಡ್‌ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ದುರಂತ ಅಪಘಾತದ ಬಗ್ಗೆ ತಿಳಿದು ನನಗೆ ಬಹಳ ದುಃಖವಾಗಿದೆ. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ರಕ್ಷಿಸುವಂತೆ ಎನ್‌ಡಿಆರ್‌ಎಫ್‌ಗೆ ನಿರ್ದೇಶಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Distressed to learn about the tragic accident of Air India Express aircraft in Kozhikode, Kerala.
Have instructed NDRF to reach the site at the earliest and assist with the rescue operations.
— Amit Shah (@AmitShah) August 7, 2020
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ನಂತರ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ವಿವರವಾದ ವರದಿಗಾಗಿ ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
Deeply distressed to hear about the Air India Express tragedy at Kozhikode. Prayers are with the bereaved families and those injured. We are ascertaining further details.
— Dr. S. Jaishankar (@DrSJaishankar) August 7, 2020
ಅದೇ ಸಮಯದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಮಾನ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ, ಕೇರಳದಲ್ಲಿ ವಿಮಾನ ಅಪಘಾತವು ದುಃಖಕರವಾಗಿದೆ ಎಂದು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅನೇಕ ಜನರು ಏರ್ ಇಂಡಿಯಾ ವಿಮಾನದಲ್ಲಿದ್ದರು, ಮೃತರ ಸಂಬಂಧಿಕರಿಗೆ ನನ್ನ ಸಂತಾಪಗಳು. ಗಾಯಗೊಂಡವರಿಗೆ ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಶುಭ ಹಾರೈಸುತ್ತೇನೆ ಎಂದು ಬರೆದಿದ್ದಾರೆ.
Devastating news from Kozhikode, Kerala. I am deeply anguished by the loss of lives due to an accident carrying several passengers on Air India flight.
In this hour of grief, my thoughts are with the bereaved families. I pray for the speedy recovery of the injured.
— Rajnath Singh (@rajnathsingh) August 7, 2020
ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಕೋಜಿಕೋಡ್‌ನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ಐಎಕ್ಸ್ 1344 ರ ದುರಂತದಿಂದ ತೀವ್ರ ದುಃಖಿತರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಕೋಜಿಕೋಡ್ ವಿಮಾನ ನಿಲ್ದಾಣದ ರನ್‌ವೇ ರೀತಿಯೇ ಅಪಾಯಕಾರಿ ಈ ರನ್‌ವೇಗಳು
MEA ಸಹಾಯವಾಣಿ 24x7 ಮುಕ್ತವಾಗಿದೆ:
1800 118 797
+91 11 23012113
+91 11 23014104
+91 11 23017905
Fax: +91 11 23018158
Email: covid19@mea.gov.in
We are deeply saddened by the tragedy of Air India Express Flight No IX 1344 at Kozhikode.
MEA helplines are open 24x7:
📞 1800 118 797
📞 +91 11 23012113
📞+91 11 23014104
📞+91 11 23017905
Fax: +91 11 23018158
Email: covid19@mea.gov.in— Anurag Srivastava (@MEAIndia) August 7, 2020
ಇದಲ್ಲದೆ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ (Rahul Gandhi) ಕೂಡ ಈ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೋಜಿಕೋಡ್ನಲ್ಲಿ ವಿಮಾನ ಅಪಘಾತದ ವಿನಾಶಕಾರಿ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ. ಅಪಘಾತದಲ್ಲಿ ಮೃತಪಟ್ಟವರ ಸ್ನೇಹಿತರು ಮತ್ತು ಕುಟುಂಬಕ್ಕೆ ತೀವ್ರ ಸಂತಾಪ. ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆ ಎಂದು ಬರೆದಿದ್ದಾರೆ.
Shocked at the devastating news of the plane mishap in Kozhikode. Deepest condolences to the friends and family of those who died in this accident. Prayers for the speedy recovery of the injured.
— Rahul Gandhi (@RahulGandhi) August 7, 2020