ನವದೆಹಲಿ: ಕಳೆದ ಹಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ನಿರ್ದೇಶಕ ನಿಶಿಕಾಂತ್ ಕಾಮತ್ ನಿಧನ ಹೊಂದಿದ್ದಾರೆ. ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಅವರು ಟ್ವೀಟ್ ಮಾಡುವ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ರಿತೇಶ್ ದೇಶ್ಮುಖ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ
I will miss you my friend. #NishikantKamat Rest In Peace. 🙏🏽 pic.twitter.com/cqEeLbKJPM
— Riteish Deshmukh (@Riteishd) August 17, 2020
ಇದಕ್ಕೂ ಮೊದಲು ನಿಶಿಕಾಂತ್ ಕಾಮ ಅವರ ಬಗ್ಗೆ ಆರೋಗ್ಯ ಬುಲೆಟಿನ್ ಹೊರಡಿಸಿದ್ದ ಆಸ್ಪತ್ರೆ, ಅವರ ಆರೋಗ್ಯ ಸ್ಥಿತಿ ಸ್ಥಿರ ಗಂಭೀರವಾಗಿದೆ ಮತ್ತು ಅವರನ್ನು ಲೈಫ್ ಸಪೋರ್ಟ್ ಸಿಸ್ಟಮ್ ಮೇಲೆ ಇಡಲಾಗಿದೆ ಎಂದು ತಿಳಿಸಿತ್ತು. ನಿಶಿಕಾಂತ್ ಕಾಮತ್ ಲಿವರ್ ಸಿರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದಾಗಿ ಅವರು ಕಳೆದ ಹಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸ್ತೆ ಪಡೆಯುತ್ತಿದ್ದರು.
ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಆಸ್ಪತ್ರೆ, " ಮಿಸ್ಟರ್ ನಿಶಿಕಾಂತ್ ಕಾಮತ್ (50 ವರ್ಷ, ಪುರುಷ) ಅವರನ್ನು ಕಾಮಾಲೆರೋಗ ಹಾಗೂ ಹೊಟ್ಟೆ ನೋವಿನ ತೊಂದರೆಯ ಕಾರಣ ಹೈದರಾಬಾದ್ ನ ಗಚ್ಚಿಬೌಲಿಯಲ್ಲಿರುವ AIG ಆಸ್ಪತ್ರೆಗೆ ಭರ್ತಿ ಮಾಡಲಾಗಿತ್ತು, ಅಲ್ಲಿ ಕಾಮತ್ ಅವರಿಗೆ ಕ್ರಾನಿಕ್ ಲಿವರ್ ಡಿಸೀಜ್ ಹಾಗೂ ಇತರ ಸೋಂಕು ಇರುವ ಕುರಿತು ಪತ್ತೆಯಾಗಿದೆ" ಎಂದಿತ್ತು.
ಅಜಯ್ ದೇವಗನ್ ಹಾಗೂ ಟಬೂ ಅಭಿನಯದ 'ದೃಶ್ಯಂ', ಇರ್ಫಾನ್ ಖಾನ್ ಅಭಿನಯದ 'ಮದಾರಿ' ಗಳಂತಹ ಚಿತ್ರಗಳ ನಿರ್ದೇಶನ ಮಾಡಿದ್ದಾರೆ. ಇದಲ್ಲದೆ ಅವರು ಜಾನ್ ಅಬ್ರಾಹಂ ಜೊತೆಗೆ 'ಫೋರ್ಸ್' ಹಾಗೂ 'ರಾಕಿ ಹ್ಯಾಂಡ್ ಸಮ್' ನಂತಹ ಚಿತ್ರಗಳನ್ನು ಮಾಡಿದ್ದರು. ಮಹಾರಾಷ್ಟ್ರದಲ್ಲಿ ಜನಿಸಿದ್ದ ನಿಶಿಕಾಂತ್ ಕಾಮತ್ 2005 ರಲ್ಲಿ ಬಿಡುಗಡೆಯಾಗಿದ್ದ ಮರಾಠಿ ಚಿತ್ರ 'ಡೊಂಬಿವಿಲಿ ಫಾಸ್ಟ್' ಚಿತ್ರದ ಮೂಲಕ ಚಿತ್ರ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದರು. ಮೊಟ್ಟಮೊದಲ ಚಿತ್ರಕ್ಕಾಗಿಯೇ ಅವರು ಬೆಸ್ಟ್ ಮರಾಠಿ ಚಿತ್ರ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದರು. 2015 ರಲ್ಲಿ ಬಿಡುಗಡೆಯಾದ ಅಜಯ್ ದೇವಗನ್, ಟಬು ಹಾಗೂ ಶ್ರೇಯಾ ಸರನ್ ಅಭಿನಯದ 'ದೃಶ್ಯಮ್' ಚಿತ್ರದ ಮೂಲಕ ಅಪಾರ ಖ್ಯಾತಿಗೆ ಪಾತ್ರರಾಗಿದ್ದರು.
'ಹಾತ್ ಆನೆ ದೇ' ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಪದಾರ್ಪಣೆ
ನಿಶಿಕಾಂತ್ ಕಾಮತ್ ಓರ್ವ ಉತ್ತಮ ನಿರ್ದೇಶಕನಾಗುವ ಜೊತೆಗೆ ಉತ್ತಮ ನಟ ಕೂಡ ಆಗಿದ್ದರು. 'ಹಾತ್ ಆನೆ ದೇ', 'ಸಾತ್ ಚ್ಯಾ ಆತ್ ಘರಾತ್(ಮರಾಠಿ ಚಿತ್ರ) , '404 ಎರರ್ ನಾಟ್ ಫೌಂಡ್', 'ರಾಕಿ ಹ್ಯಾಂಡ್ಸಮ್', 'ಫುಗೆ (ಮರಾಠಿ ಚಿತ್ರ), ಡ್ಯಾಡಿ, ಜೂಲಿ-2, ಭಾವೇಶ್ ಜೋಷಿ ಗಳಂತಹ ಹಲವು ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದರು. 2016 ರಲ್ಲಿ ಮೂಡಿ ಬಂದ 'ರಾಕಿ ಹ್ಯಾಂಡ್ಸಮ್' ಚಿತ್ರದಲ್ಲಿ ಅವರು ಖಳನಟನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಸಹ ಅವರೇ ಹೊತ್ತಿದ್ದರು. ಮುಂದೆ ಅವರು 'ದರ್ ಬದರ್' ಹೆಸರಿನ ಹಿಂದಿ ಚಿತ್ರದ ಸಿದ್ಧತೆ ನಡೆಸುತ್ತಿದ್ದರು. ಈ ಚಿತ್ರ 2022 ಬಿಡುಗಡೆಗೊಳಿಸಲು ಯೋಜಿಸಲಾಗಿದೆ.