ಕಾಂಗ್ರೆಸ್ ಗೆ ಪ್ರಜಾಪ್ರಭುತ್ವದ ಪಾಠ ಹೇಳುವ ಯಾವುದೇ ಹಕ್ಕಿಲ್ಲ - ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದವರ ವಿರುದ್ಧ ವಾಗ್ದಾಳಿ ನಡೆಸಿದರು.

Last Updated : Feb 7, 2018, 03:34 PM IST
ಕಾಂಗ್ರೆಸ್ ಗೆ ಪ್ರಜಾಪ್ರಭುತ್ವದ ಪಾಠ ಹೇಳುವ ಯಾವುದೇ ಹಕ್ಕಿಲ್ಲ - ಪ್ರಧಾನಿ ಮೋದಿ ವಾಗ್ದಾಳಿ title=

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದವರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಕಾಂಗ್ರೆಸ್ ಮಾಜಿ ನಾಯಕರು ಮತ್ತು ಪ್ರಸ್ತುತ ನಾಯಕ  ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನಿಸಿದರು. 

ಕಾಂಗ್ರೆಸ್ ಪಕ್ಷದ ಮೂಲಭೂತ ಸಿದ್ಧಾಂತದ ಮೇಲೆ ದಾಳಿ ಮಾಡಿದ ಬಿಜೆಪಿಯ ಮೋದಿ ಅವರು, ಭಾರತದ ಮೊದಲ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಅವರ ನೇಮಕವನ್ನು ಪ್ರಶ್ನಿಸಿದರು. ದೇಶದಲ್ಲಿ ಪ್ರತಿಯೊಬ್ಬರನ್ನು ಬಾಯಿಮುಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಹೇಳಿದರು.

ದೇಶದ ಪ್ರಗತಿಯ ಕುರಿತು ಮಾತನಾಡಿದ ಪ್ರಧಾನಿ, ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದರೆ, ಅವರು ಸರಿಯಾದ ನಿರ್ದೇಶನಗಳನ್ನು ಸರಿಯಾದ ಉದ್ದೇಶಗಳೊಂದಿಗೆ ಇಟ್ಟುಕೊಂಡಿದ್ದರೆ, ಇಂದು ದೇಶವು ಬಹಳ ಉನ್ನತ ಸ್ಥಾನದಲ್ಲಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು. 

ಇನ್ನು, ಜವಾಹರಲಾಲ್ ನೆಹರೂ ಅವರು ಭಾರತಕ್ಕೆ ಪ್ರಜಾಪ್ರಭುತ್ವವನ್ನು ತಂದುಕೊಟ್ಟರು ಎಂದು ಹೇಳಿದ್ದನ್ನು ಅತಿ ಅಭಿಮಾನ ಎನ್ನಬೇಕೋ ಅಥವಾ ಅಜ್ಞಾನ ಎಂದು ಕರೆಯಬೇಕೋ ನನಗೆ ಗೊತ್ತಿಲ್ಲ. ಲಿಖ್ವಿ ಸಾಮ್ರಾಜ್ಯ ಮತ್ತು ಗೌತಮ್ ಬುದ್ಧರ ಕಾಲದಲ್ಲಿ ಸಹ ಭಾರತದಲ್ಲಿ ಪ್ರಜಾಪ್ರಭುತ್ವ ಇತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಧಿಕ ಮತಗಳನ್ನು ಪಡೆಯಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಅವರು ಭಾರತದ ಪ್ರಧಾನಿಯಾಗುವುದನ್ನು ತಡೆದದ್ದು ಎಂಥಾ ಪ್ರಜಾಪ್ರಭುತ್ವ? ಸರ್ದಾರ್ ನಮ್ಮ ಮೊದಲ ಪ್ರಧಾನ ಮಂತ್ರಿಯಾಗಿದ್ದರೂ, ಪಾಕಿಸ್ತಾನದೊಂದಿಗೆ ಕಾಶ್ಮೀರದ ಒಂದು ಭಾಗ ಭಾರತದ ಭಾಗವಾಗಿತ್ತು ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಮುಂದುವರೆದು ಮಾತನಾಡಿದ ಮೋದಿ, ಯಾವ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ? ತಮ್ಮ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರು ಹೈದರಾಬಾದ್ನಲ್ಲಿ ಬಂದಿಳಿದಾಗ ಅವರನ್ನು ಸ್ವಾಗತಿಸಲು ಮುಂದಾದ ದಲಿತ ನಾಯಕನನ್ನು ಅವರು ಸಾರ್ವಜನಿಕವಾಗಿ ಅವಮಾನಿಸಿದರು. ಈ ರೀತಿಯ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ಮಾತಾಡುತ್ತದೆಯೇ?ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡರೊಬ್ಬರು ಪ್ರಧಾನ ಮಂತ್ರಿಯವರು ಹೊರಡಿಸಿದ ಆದೇಶವನ್ನು ಹರಿದು ಹಾಕಿದ್ದರು. ಹಾಗಾಗಿ, ಅವರಿಗೆ ನಮಗೆ ಪ್ರಜಾಪ್ರಭುತ್ವದ ಪಾಠ ಮಾಡುವ ಯಾವುದೇ ಹಕ್ಕಿಲ್ಲ. ಅದು ಅವರಿಗೆ ಸರಿಹೊಂದುವುದೂ ಇಲ್ಲ ಎಂದು ಹೇಳಿದರಲ್ಲದೆ, ಕೇರಳದಲ್ಲಿ ಕಾಂಗ್ರೆಸ್ ಹೇಗೆ ಕಾರ್ಯನಿರ್ವಹಿಸಿತು, ಅವರು ಪಂಜಾಬ್ನಲ್ಲಿ ಅಕಾಲಿ ದಳವನ್ನು ಹೇಗೆ ನಡೆಸಿಕೊಂಡರು, ತಮಿಳುನಾಡಿನಲ್ಲಿ ಹೇಗೆ ವರ್ತಿಸಿದರು? ಕಾಂಗ್ರೆಸ್ ಹಲವು ರಾಜ್ಯ ಸರ್ಕಾರಗಳನ್ನು ಅವರ ಇಚ್ಛೆಯಂತೆ ಏಕೆ ವಜಾ ಮಾಡಿದೆ? ಇದು ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವಕ್ಕೆ ಯಾವುದೇ ಬದ್ಧತೆ ಇಲ್ಲ ಎಂಬುದನ್ನು ತೋರ್ಪಡಿಸುತ್ತದೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

Trending News