ನವದೆಹಲಿ: ಮನುಷ್ಯರ ಜೀವನದಲ್ಲಿ ಎದುರಾಗುವ ಕೆಲ ಪರಿಸ್ಥಿತಿಗಳು ಮನುಷ್ಯನನ್ನು ಆರ್ಥಿಕ ಸಂಕಷ್ಟಕ್ಕೆ ಈಡು ಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಸ್ಥ ದೂರ ಮಾಡಲು ಮನುಷ್ಯರು ನಿರಂತರ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೂ ಕೂಡ ಸಮಸ್ಯೆ ಬಗೆಹರಿಯುವುದಿಲ್ಲ. ವಾಸ್ತುಶಾಸ್ತ್ರದ ಪ್ರಕಾರ ಜನರು ಮಾಡುವ ಕೆಲ ತಪ್ಪುಗಳ ಕಾರಣ ಈ ಸಮಸ್ಯೆ ಬಗೆಹರಿಯುವುದಿಲ್ಲ ಎನ್ನಲಾಗಿದೆ. ಹೀಗಾಗಿ ಇಂದು ನಾವು ನಿಮಗೆ ಅಂತಹ ಕೆಲ ತಪ್ಪುಗಳ ಕುರಿತು ಮಾಹಿತಿಯನ್ನು ನೀಡಲಿದ್ದೇವೆ.
-ಮನೆಯ ಮೇಲ್ಛಾವಣಿಯ ಮೇಲೆ ಕಸ ಅಥವಾ ಕೊಳಕನ್ನು ಎಂದಿಗೂ ಅನುಮತಿಸಬೇಡಿ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮೇಲ್ಛಾವಣಿಯ ಮೇಲೆ ಕಸ ಸಂಗ್ರಹ ಆರ್ಥಿಕ ಸಮಸ್ಯೆಯನ್ನು ತಂದೊಡ್ಡುತ್ತದೆ. ಜೊತೆಗೆ ಮಾನಸಿಕ ತೊಂದರೆಗಳನ್ನು ಕೂಡ ನೀಡುತ್ತದೆ.
- ಒಂದು ವೇಳೆ ನೀವು ಹಣ ಸಂಗ್ರಹಣೆ ಮಾಡಲು ಬಯಸುತ್ತಿದ್ದರೆ. ಅದಕ್ಕಾಗಿ ಸರಿಯಾದ ದಿಕ್ಕು ಹೊಂದಿರುವುದು ಆವಶ್ಯಕ ಎಂಬುದನ್ನು ನೆನಪಿನಲ್ಲಿಡಿ. ಅಲಮೇರಾ ಅಥವಾ ತಿಜೋರಿಯಲ್ಲಿ ಹಣವನ್ನು ಇರಿಸುವಾಗ ತಿಜೋರಿಯ ಬಾಗಿಲು ಪೂರ್ವ ದಿಕ್ಕಿನೆಡೆ ತೆರೆಯುವ ಹಾಗೆ ಇರಲಿ. ಹಣ ಇರಿಸುವ ಜಾಗದ ಸ್ವಚ್ಚತೆಯ ಕುರಿತು ಗಮನ ನೀಡಲು ಮರೆಯದಿರಿ.
- ಮನೆಯಲ್ಲಿ ಅಲಂಕಾರಕ್ಕಾಗಿ ನೀವು ನೀರಿನಿಂದ ತುಂಬಿದ ಯಾವುದನ್ನಾದರೂ ವಸ್ತುವನ್ನು ಇರಿಸುತ್ತಿದ್ದರೆ, ಅದನ್ನು ಯಾವಾಗಲೂ ಉತ್ತರದ ಕಡೆಗೆ ಇರಿಸಿ, ಅದರಿಂದ ನೀರಿನ ಸೋರಿಕೆಯಾಗುತ್ತಿಲ್ಲ ಎಂಬುದನ್ನು ಎಚ್ಚರಿಕೆವಹಿಸಿ. ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ನೀರನ್ನು ಈ ದಿಕ್ಕಿನಲ್ಲಿ ಇಡುವುದು ಸರಿಯಾಗಿದೆ.
- ಮನೆಯಲ್ಲಿರುವ ಯಾವುದೇ ನೀರಿನ ತೊಟ್ಟಿ ಅಥವಾ ಟ್ಯಾಪ್ ನಿಂದ ನೀರು ಸೋರಿಕೆಯಾಗುತ್ತಿಲ್ಲ ಎಂಬುದನ್ನು ಎಚ್ಚರಿಕೆ ವಹಿಸಿ. ವಾಸ್ತುಶಾಸ್ತ್ರದ ಮಾನ್ಯತೆಗಳ ಪ್ರಕಾರ ಮನೆಯಲ್ಲಿನ ನೀರಿನ ಹರಿವು ಧನಹಾನಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಎಂದಿಗೂ ಕೂಡ ಮನೆಯಲ್ಲಿ ನೀರಿನ ತೊಟ್ಟಿ ಹಾಳಾದರೆ ಕೂಡಲೇ ಅದನ್ನು ಸರಿಪಡಿಸಿ.