ನವದೆಹಲಿ: ಇತ್ತೀಚಿನ ದಿನಗಳಲ್ಲಿ ಒಂದು ಬ್ಯಾಂಕ್ ಖಾತೆ (Bank Account)ಯಿಂದ ಇನ್ನೊಂದಕ್ಕೆ ಹಣವನ್ನು ವರ್ಗಾವಣೆ ಮಾಡುವುದು ತುಂಬಾ ಸುಲಭವಾಗಿದೆ. ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್ ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದ ಹಲವು ತೊಂದರೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿದೆ. ಸಾಮಾನ್ಯವಾಗಿ ಒಂದು ಖಾತೆಯಿಂದ ಇನ್ನೊಂದು ಖಾತೆಯಲ್ಲಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಗೆ ಸುತ್ತಾಡಬೇಕಾಗುತ್ತಿತ್ತು. ಆದರೆ, ಇದು ಅದರ ಅಗತ್ಯವಿಲ್ಲ ಇದನ್ನು ನೀವು ನಿಮ್ಮ ಮೊಬೈಲ್ ಮೂಲಕ ಕೂಡ ಚಿಟಿಕೆಹೊಡೆಯುವುದರಲ್ಲಿ ಮಾಡಬಹುದಾಗಿದೆ.
ಒಂದೆಡೆ ತಂತ್ರಜ್ಞಾನ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಸುಲಭಗೊಳಿಸಿ, ಜನರ ಹತ್ತಿರಕ್ಕೆ ಕೊಂದೊಯ್ದಿವೆ. ಆದರೆ, ಇನ್ನೊಂದೆಡೆ ತೊಂದರೆಗಳೂ ಕೂಡ ಎದುರಾಗಿವೆ. ಉದಾಹರಣೆಗೆ ತಪ್ಪಾಗಿ ಒಂದು ವೇಳೆ ಹಣ ವರ್ಗಾವಣೆಯ ವೇಳೆ ನಾವು ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಏನು ಮಾಡಬೇಕು? ನಮ್ಮ ಹಣವನ್ನು ಹೇಗೆ ವಾಪಸ್ ಪಡೆಯಬೇಕು.? ಹಾಗಾದರೆ ಬನ್ನಿ ನಮ್ಮ ಹಣವನ್ನು ನಾವು ಹೇಗೆ ವಾಪಸ್ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮೊದಲು ಈ ಕುರಿತು ನಿಮ್ಮ ಬ್ಯಾಂಕ್ ಗೆ ಮಾಹಿತಿ ನೀಡಿ
ಒಂದು ವೇಳೆ ನೀವು ತಪ್ಪಾಗಿ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದೀರಾ ಎಂಬುದು ನಿಮಗೆ ತಿಳಿದರೆ, ತಕ್ಷಣ ಈ ಕುರಿತು ನಿಮ್ಮ ಬ್ಯಾಂಕ್ ಗೆ ಮಾಹಿತಿ ನೀಡಿ. ಕಸ್ಟಮರ್ ಕೇರ್ ಗೆ ಕರೆ ಮಾಡಿ ಗ್ರಾಹಕ ಪ್ರತಿನಿಧಿಗೆ ಸಂಪೂರ್ಣ ಮಾಹಿತಿ ನೀಡಿ. ಒಂದು ವೇಳೆ ಬ್ಯಾಂಕ್ ನಿಮಗೆ ಇ-ಮೇಲ್ ಮೂಲಕ ಎಲ್ಲ ಮಾಹಿತಿ ನೀಡುವಂತೆ ಕೇಳಿದರೆ, ಇ-ಮೇಲ್ ನಲ್ಲಿ ನೀವು ನಿಮ್ಮ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಿ. ಈ ಮಾಹಿತಿಯಲ್ಲಿ ವ್ಯವಹಾರದ ದಿನಾಂಕ ಹಾಗೂ ಸಮಯ ಶಾಮೀಲಾಗಿರಲಿ. ಇದರೊಂದಿಗೆ ನಿಮ್ಮ ಖಾತೆ ಸಂಖ್ಯೆ ಹಾಗೂ ತಪ್ಪಾಗಿ ಹಣ ವರ್ಗಾವಣೆಗೊಂಡ ಖಾತೆ ಸಂಖ್ಯೆಯ ಕುರಿತು ಕೂಡ ಉಲ್ಲೇಖ ಮಾಡಿ.
ಒಂದು ವೇಳೆ ನೀವು ಹಣ ವರ್ಗಾವಣೆ ಮಾಡಿದ ಖಾತೆ ಸಂಖ್ಯೆಯೇ ತಪ್ಪಾಗಿದ್ದರೆ ಅಥವಾ IFSC ಕೋಡ್ ತಪ್ಪಾಗಿದ್ದರೆ, ನೀವು ವರ್ಗಾವಣೆ ಮಾಡಿರುವ ಹಣ ಸ್ವಯಂಚಾಲಿತವಾಗಿ ನಿಮ್ಮ ಖಾತೆಗೆ ಬರಲಿದೆ. ಒಂದು ವೇಳೆ ಹೀಗೆ ನಡೆಯದೆ ಹೋದಲ್ಲಿ ಬ್ಯಾಂಕ್ ಗೆ ಭೇಟಿ ನೀಡಿ, ಬ್ಯಾಂಕ್ ಮ್ಯಾನೇಜರ್ ಜೊತೆಗೆ ಭೇಟಿ ಮಾಡಿ. ಅವರಿಗೆ ನೀವು ನಡೆಸಿರುವ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ, ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಒಂದು ವೇಳೆ ನಿಮ್ಮದೇ ಬ್ಯಾಂಕ್ ನ ಬೇರೆ ಖಾತೆಗೆ ನೀವು ಹಣ ವರ್ಗಾವಣೆ ಮಾಡಿದ್ದರೆ, ನಿಮ್ಮ ಖಾತೆಗೆ ಹಣ ವಾಪಸ್ ಬರುವುದು ಸ್ವಲ್ಪ ಸುಲಭವಾಗಲಿದೆ.
ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಗೊಂಡಿದ್ದರೆ ಎಂದು ಮಾಡಬೇಕು?
ಹಣ ತಪ್ಪಾಗಿ ಮತ್ತೊಂದು ಬ್ಯಾಂಕಿನ ಖಾತೆಗೆ ವರ್ಗಾವನೆಯಾಗಿದ್ದರೆ, ಹಣವನ್ನು ಹಿಂಪಡೆಯಲು ಹೆಚ್ಚು ಸಮಯಾವಕಾಶ ಬೇಕಾಗಲಿದೆ. ಇಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಅನೇಕ ಬಾರಿ ಬ್ಯಾಂಕುಗಳು 2 ತಿಂಗಳವರೆಗೆ ಸಮಯಾವಕಾಶ ತೆಗೆದುಕೊಳ್ಳಬಹುದು. ನಿಮ್ಮ ಬ್ಯಾಂಕಿನಿಂದ ಯಾವ ಹಣವನ್ನು ಯಾವ ನಗರದ ಯಾವ ಶಾಖೆಗೆ ವರ್ಗಾಯಿಸಲಾಗಿದೆ ಎಂಬುದನ್ನು ನೀವು ಕಂಡುಹಿಡಿಯಬಹುದು. ಆ ಶಾಖೆಯಲ್ಲಿ ಮಾತನಾಡುವ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯಲು ನೀವು ಸಹ ಪ್ರಯತ್ನಿಸಬಹುದು. ನಿಮ್ಮ ಮಾಹಿತಿಯ ಆಧಾರದ ಮೇಲೆ, ಖಾತೆಯಲ್ಲಿ ಹಣವನ್ನು ತಪ್ಪಾಗಿ ವರ್ಗಾಯಿಸಿದ ವ್ಯಕ್ತಿಯ ಬ್ಯಾಂಕ್ ಅನ್ನು ಬ್ಯಾಂಕ್ ತಿಳಿಸುತ್ತದೆ. ತಪ್ಪಾಗಿ ವರ್ಗಾವಣೆಗೊಂಡ ಹಣವನ್ನು ಹಿಂದಿರುಗಿಸಲು ಬ್ಯಾಂಕ್ ವ್ಯಕ್ತಿಯ ಅನುಮತಿ ಪಡೆಯಬೇಕು.
ಪ್ರಕರಣ ದಾಖಲಿಸಬಹುದು
ನಿಮ್ಮ ಹಣವನ್ನು ಮರಳಿ ಪಡೆಯುವ ಇನ್ನೊಂದು ಮಾರ್ಗವೆಂದರೆ ಕಾನೂನು ಮಾರ್ಗ. ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ವ್ಯಕ್ತಿ ಒಂದು ವೇಳೆ ನಿಮ್ಮ ಹಣವನ್ನು ಹಿಂದಿರುಗಿಸಲು ಒಪ್ಪದೇ ಇದ್ದರೆ, ನೀವು ಆತನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವನ್ನು ಸಹ ದಾಖಲಿಸಬಹುದು. ಆದರೆ, ಹಣವನ್ನು ಮರುಪಾವತಿಸದಿದ್ದಲ್ಲಿ, ಈ ಹಕ್ಕು ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಪ್ರಕಾರ, ಫಲಾನುಭವಿಗಳ ಖಾತೆಯ ಸರಿಯಾದ ಮಾಹಿತಿಯನ್ನು ನೀಡುವುದು ಲಿಂಕ್ ಮಾಡಿರುವವರ ಜವಾಬ್ದಾರಿಯಾಗಿದೆ. ಕೆಲವು ಕಾರಣಗಳಿಗಾಗಿ, ಲಿಂಕ್ ಮಾಡಿದವರು ತಪ್ಪು ಮಾಡಿದ್ದರೆ, ಅದಕ್ಕೆ ಬ್ಯಾಂಕ್ ಜವಾಬ್ದಾರಿ ಹೊರುವುದಿಲ್ಲ.
ಬ್ಯಾಂಕ್ ಗಳಿಗೆ RBI ನಿರ್ದೇಶನಗಳು
ಇತ್ತೀಚಿಗೆ ನೀವು ಬ್ಯಾಂಕ್ ಖಾತೆಯಿಂದ ಬೇರೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ನಿಮಗೆ ಬ್ಯಾಂಕ್ ಸಂದೇಶವೊಂದು ಬರುತ್ತದೆ. ಆ ಸಂದೇಶದಲ್ಲಿಯೂ ಕೂಡ ಒಂದು ವೇಳೆ ತಪ್ಪು ವ್ಯವಹಾರ ನಡೆದಿದ್ದರೆ, ಕೆಳಗೆ ನೀಡಲಾದ ಸಖ್ಯೆಗೆ ಸಂದೇಶ ಕಳುಹಿಸುವಂತೆ ಸೂಚಿಸಲಾಗಿರುತ್ತದೆ. ಈ ಕುರಿತು ನಿರ್ದೇಶನಗಳನ್ನು ಜಾರಿಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ತಪ್ಪು ವ್ಯವಹಾರ ನಡೆದ ಸಂದರ್ಭಗಳಲ್ಲಿ ಸಂಬಂಧಪಟ್ಟ ಬ್ಯಾಂಕ್ ಕೂಡಲೇ ಹೆಜ್ಜೆಯನ್ನು ಇಡಬೇಕು. ಏಕೆಂದರೆ, ತಪ್ಪಾಗಿರುವ ಖಾತೆಯಿಂದ ಸರಿಯಾಗಿರುವ ಖಾತೆಗೆ ಹಣ ವರ್ಗಾವಣೆ ಮಾಡಿಕೊಡುವುದು ಬ್ಯಾಂಕ್ ನ ಜವಾಬ್ದಾರಿಯಾಗಿದೆ.