ನವದೆಹಲಿ : ಉತ್ತರ ಪ್ರದೇಶದಲ್ಲಿ 86 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಒಟ್ಟಿಗೆ 3 ತಿಂಗಳ ಪಿಂಚಣಿ ಕಳುಹಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರ ಪ್ರಕಾರ ಈ ಜನರಲ್ಲಿ ಹಿರಿಯ ನಾಗರಿಕ, ದಿವ್ಯಾಂಗ್ಜನ್ ಮತ್ತು ಕುಷ್ಠರೋಗಿಗಳ ಪಿಂಚಣಿಯ 86,95,027 ಫಲಾನುಭವಿಗಳು ಸೇರಿದ್ದಾರೆ. ಮೂರು ತಿಂಗಳ ಪಿಂಚಣಿಯ (Pension) ಕಂತು 1,311.05 ಕೋಟಿ ರೂ.ಗಳನ್ನು ಅವರ ಖಾತೆಗೆ ಆನ್ಲೈನ್ನಲ್ಲಿ ಕಳುಹಿಸಲಾಗಿದೆ.
ಕೇವಲ 42 ರೂಪಾಯಿಗಳ ಪ್ರೀಮಿಯಂನಲ್ಲಿ ಈ ಪಿಂಚಣಿ ಯೋಜನೆಯ ಲಾಭ ಪಡೆಯಿರಿ
ಬುಧವಾರ 49,87,054 ಹಿರಿಯ ನಾಗರಿಕರ ಖಾತೆಗೆ 748.06 ಕೋಟಿ ರೂ.ಗಳನ್ನು ಕಳುಹಿಸಲಾಗಿದ್ದು, ಪಿಡಬ್ಲ್ಯುಡಿಯ 10,90,436 ಲಕ್ಷ ಫಲಾನುಭವಿಗಳಿಗೆ 163.57 ಕೋಟಿ ರೂ. ಮತ್ತು 26,06213 ನಿರ್ಗತಿಕ ಮಹಿಳೆಯರಿಗೆ 390.93 ಕೋಟಿ, ಕುಷ್ಠರೋಗ ಪಿಂಚಣಿ ಯೋಜನೆಯ 11,324 ಫಲಾನುಭವಿಗಳಿಗೆ 8.49 ಕೋಟಿ ರೂ. ನೀಡಲಾಗಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ಗಳಿಗೆ ಪಿಂಚಣಿ ನೀಡಲಾಗಿದೆ. ಪ್ರತಿ ಫಲಾನುಭವಿಯ ಖಾತೆಗೆ 1500–1500 ರೂಪಾಯಿಗಳನ್ನು ಕಳುಹಿಸಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
OMG..! ನಿತ್ಯ ಕೇವಲ 10 ರೂ. ಹೂಡಿಕೆ ಮಾಡಿ, 60 ಸಾವಿರ ರೂ. ಪಿಂಚಣಿ ಪಡೆಯಿರಿ
ಸರ್ಕಾರ ಈ ಜನರಿಗೆ ಅವರ ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆಗಾಗಿ ಈ ಹಣವನ್ನು ನೀಡುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಒಂದು ಭಾಗವಾಗಿದೆ. ನಾವು ಪ್ರಧಾನ ಮಂತ್ರಿಗೆ ನಮ್ಮ ಕೃತಜ್ಞತೆಯನ್ನು ತೋರಿಸಬೇಕು, ಈ ಕಾರಣದಿಂದಾಗಿ ಪ್ರತಿ ಬ್ಯಾಂಕ್ ಖಾತೆಯು ನೇರವಾಗಿ ಹಣವನ್ನು ಪಡೆಯುತ್ತಿದೆ ಮತ್ತು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಆಡಳಿತದ ಯೋಜನೆಗಳಿಂದ ಲಾಭ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ನುಡಿದರು.
ಇದಕ್ಕೂ ಮುನ್ನ ಉತ್ತರಪ್ರದೇಶ (Uttar pradesh) ಸರ್ಕಾರ ಈ ಪಿಂಚಣಿದಾರರಿಗೆ ಮುಂಗಡ ಮೊತ್ತವನ್ನು ನೀಡಿತು. ಈ ಮೊತ್ತವನ್ನು ನೇರವಾಗಿ ಡಿಬಿಟಿಯಿಂದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಂಚಣಿದಾರರು ಬ್ಯಾಂಕ್ ಪಾಸ್ಬುಕ್ ಅಥವಾ ಎಟಿಎಂ ಮೂಲಕ ಬಾಕಿ ಮೊತ್ತವನ್ನು ಪರಿಶೀಲಿಸಬಹುದು.