Rakul Preet Singh ಅರ್ಜಿ ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್

ರಕುಲ್ ಪ್ರೀತ್ ಗೆ ಸಂಬಂಧಿಸಿದಂತೆ ನಕಾರಾತ್ಮಕ ವರದಿಗಾರಿಕೆಯನ್ನು ಆಧರಿಸಿ ಈ ನೋಟಿಸ್ ನೀಡಲಾಗಿದೆ.

Last Updated : Sep 29, 2020, 04:18 PM IST
  • ರಕುಲ್ ಅರ್ಜಿ ಆಧರಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿದ ದೆಹಲಿ ಹೈ ಕೋರ್ಟ್
  • ರಕುಲ್ ಪ್ರೀತ್ ಗೆ ಸಂಬಂಧಿಸಿದಂತೆ ನಕಾರಾತ್ಮಕ ವರದಿಗಾರಿಕೆಯನ್ನು ಆಧರಿಸಿ ಈ ನೋಟಿಸ್ ನೀಡಲಾಗಿದೆ.
  • ಕೆಲ ಮಾಧ್ಯಮಗಳ ವರದಿಗಾರಿಕೆಯಿಂದ ತನ್ನ ಇಮೇಜ್ ಗೆ ಧಕ್ಕೆಯಾಗುತ್ತಿದೆ ಎಂದ ರಕುಲ್.
Rakul Preet Singh ಅರ್ಜಿ ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್  title=

ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರನ್ನೂ ಕೂಡ  ಪ್ರಶ್ನಿಸಲಾಗುತ್ತಿದೆ. ಇದೆ ವೇಳೆ, ರಕುಲ್ ಅವರು ಸಲ್ಲಿಸಿರುವ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ಸೂಚನೆ ರಕುಲ್ ಬಗ್ಗೆ ನಕಾರಾತ್ಮಕ ಸುದ್ದಿಗಳಿಗೆ ಸಂಬಂಧಿಸಿದ್ದಾಗಿದೆ. ಮಾಧ್ಯಮಗಳ ತಪ್ಪು ವರದಿಗಾರಿಕೆಯಿಂದ ಅವರ ಇಮೇಜ್ ಹಾಳಾಗುತ್ತಿದೆ ಎಂದು ರಕುಲ್ ಆರೋಪಿಸಿದ್ದರು.

ರಕುಲ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾದರೂ ಏನು?
"ಮಾಧ್ಯಮಗಳ ತಪ್ಪು ವರದಿಗಾರಿಕೆಯಿಂದ ನನ್ನ ಸಾಮಾಜಿಕ ಚಿತ್ರಣ ಹಾಳಾಗುತ್ತಿದೆ" ಎಂದು ರಕುಲ್ ತಮ್ಮ ವಕೀಲರ ಮೂಲಕ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಅಲ್ಲದೆ, "ಕುಟುಂಬ ಮತ್ತು ಸ್ನೇಹಿತರ ಮೇಲೆ ಇದು ಪರಿಣಾಮ ಬೀರುತ್ತಿದೆ. ಆದ್ದರಿಂದ ಮಾಧ್ಯಮಗಳು ನನಗೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ತೋರಿಸದಂತೆ ನಿಷೇಧಿಸಬೇಕು. ಮಾಧ್ಯಮಗಳಲ್ಲಿ ತೋರಿಸಲಾಗುತ್ತಿರುವ ವರದಿಯು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವಿಚಾರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಎನ್‌ಸಿಬಿ ನನಗೆ ಹಾಜರಾಗುವಂತೆ ಆದೇಶಿಸಿತ್ತು, ನಾನು ಅವರ ಮುಂದೆ ಹಾಜರಾಗಿದ್ದೆ. ಆದರೆ ನನ್ನ ಹಾಜರಾಗುವಿಕೆಗೂ ಮುನ್ನ  ಮಾಧ್ಯಮದವರು ನನ್ನ ಮನೆಯನ್ನು ಸುತ್ತುವರೆದಿದ್ದರು. ನಾನು ಆಗ ಹೈದರಾಬಾದ್ ನಲ್ಲಿದ್ದೆ ಹಾಗೂ ಅದುವರೆಗೆ ನೋಟಿಸ್ ಕೂಡ ಸಿಕ್ಕಿರಲಿಲ್ಲ" ಎಂದು ಆರೋಪಿಸಿದ್ದಾರೆ.

ಇದನ್ನು ಓದಿ- ರಿಯಾ ಚಕ್ರವರ್ತಿ ಜೊತೆಗೆ ಡ್ರಗ್ಸ್ ಚಾಟ್ ಮಾಡಿರುವುದಾಗಿ ಒಪ್ಪಿಕೊಂಡ Rakul Preet ಸಿಂಗ್, ಆದರೆ..?

ನ್ಯಾಯಾಲಯ ನೀಡಿರುವ ಸಲಹೆ ಏನು?
ಪ್ರಕರಣದಲ್ಲಿ ರಕುಲ್ ಪರ ವಕೀಲರ ವಾದ ಆಲಿಸಿರುವ ನ್ಯಾಯಪೀಠ, ಒಂದು ವೇಳೆ ಮಾಧ್ಯಮದವರು ತಪ್ಪಾಗಿ ವರದಿ ಮಾಡುತ್ತಿದ್ದಾರೆ ಎಂದು ನಿಮಗೆ ಅನ್ನಿಸಿದ್ದರೆ, ನೀವು ಐ ಮತ್ತು ಬಿ ಸಚಿವಾಲಯಕ್ಕೆ ದೂರು ನೀಡಬಹುದು. ಅಥವಾ ನೀವು ಆರೋಪಿಸುತ್ತಿರುವ ಮಾಧ್ಯಮ ಚಾನೆಲ್ ಗಳ ಮೇಲೆ ನೀವು ಸಿವಿಲ್ ಮೊಕದ್ದಮೆ ದಾಖಲಿಸಬಹುದು ಎಂದು ನ್ಯಾಯಾಲಯ ಸಲಹೆ ನೀಡಿದೆ. 

ತಮ್ಮ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ದೂರಿರುವ ರಕುಲ್, "ನಾನು ಸ್ಮೋಕಿಂಗ್ ಮಾಡುವುದಿಲ್ಲ, ಮಧ್ಯಪಾನ ಮಾಡುವುದಿಲ್ಲ ಆದರೆ ನಾನು ಡ್ರಗ್ಸ್ ಸೇವನೆ ಮಾಡುತ್ತೇನೆ ಮತ್ತು ಇತರರಿಗೂ ನೀಡುತ್ತೇನೆ ಎಂಬ ಸುಳ್ಳು ಸುದ್ದಿಗಳು ಮಾಧ್ಯಮದಲ್ಲಿ ಬಿತ್ತರಗೊಳಿಸಲಾಗುತ್ತಿದೆ. ಇದರಿಂದ ನನ್ನ ಇಮೇಜ್ ಹಾಳು ಮಾಡಲಾಗುತ್ತಿದೆ. ನಾನು ಎಲ್ಲಿ ಹೋಗಲಿ? ಎಂದು ಮಾಡಲಿ?" ಎಂದಿದ್ದಾರೆ.

ಇದನ್ನು ಓದಿ- ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡಿದ್ದನ್ನು ಒಪ್ಪಿಕೊಂಡ ನಟಿ ಸಾರಾ ಅಲಿ ಖಾನ್

ತನಿಖೆಯ ಮೇಲೆ ನೇರ ಪರಿಣಾಮ
ಇಂತಹ ಸಮಯದಲ್ಲಿ  ಹೈಕೋರ್ಟ್‌ ನೀಡುವ ಯಾವುದೇ ಆದೇಶವು ಸಿಬಿಐ ನಡೆಸುತ್ತಿರುವ ತನಿಖೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಕೇಂದ್ರದ ಪರವಾಗಿ ಹೈಕೋರ್ಟ್‌ನಲ್ಲಿ ತಿಳಿಸಲಾಗಿದೆ. ರಕುಲ್ ಪ್ರೀತ್ ಅವರ 19 ನೇ ಆರ್ಟಿಕಲ್ ನಲ್ಲಿ ಸಮತೋಲನಸಾಧಿಸುವ  ಅವಶ್ಯಕತೆಯಿದೆ. ಹೀಗಾಗಿ ಹೈಕೋರ್ಟ್ ಕೇಂದ್ರ ಸರ್ಕಾರ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ನೋಟಿಸ್ ಜಾರಿಗೊಳಿಸಿದೆ.

ಇದನ್ನು ಓದಿ- ಡ್ರಗ್ಸ್ ಪ್ರಕರಣದಲ್ಲಿ ಹೆಸರು ಹೊರಬಂದ ಬಳಿಕ ದೆಹಲಿ ಹೈಕೋರ್ಟ್ ಕದಬಡಿದ ರಕುಲ್ ಪ್ರೀತ್ ಸಿಂಗ್

ಪ್ರಸಾರ ಭಾರತಿ ಹೇಳಿದ್ದೇನು?
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ಪ್ರಸಾರ ಭಾರತಿ, " ಈ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಮತ್ತು ಖಾಸಗಿ ಚಾನೆಲ್‌ಗಳ ಮೇಲೆ ತನ್ನ ಯಾವುದೇ ರೀತಿಯ ನಿಯಂತ್ರಣವಿಲ್ಲ. ಆದ್ದರಿಂದ ಅದನ್ನು ಪಕ್ಷಕಾರರನ್ನಾಗಿಸಬಾರದು.  ಏಕೆಂದರೆ ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ಪರವಾಗಿ ನ್ಯಾಯಾಲಯವು ಅದರಲ್ಲಿ ಸದಸ್ಯರಲ್ಲದ ಚಾನೆಲ್ ಎಂದು ಹೇಳಿದೆ. ಹೀಗಾಗಿ ಆ ಚಾನಲ್ ಗೆ ಏನನ್ನು ಹೇಳಲು ಸಾಧ್ಯವಿಲ್ಲ" ಎಂದಿದೆ.

Trending News