ನವದೆಹಲಿ: ಭಾರತೀಯ ಜನತಾ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಬಿಹಾರ ಮತ್ತು ಕರ್ನಾಟಕದ ಒಂಬತ್ತು ವಿಧಾನ ಪರಿಷತ್ತು (MLC) ಸ್ಥಾನಗಳಿಗೆ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಬಿಹಾರದಲ್ಲಿ ಐದು ಮತ್ತು ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆ ಪಕ್ಷ ನಿರ್ಧರಿಸಿದೆ.
ಪಕ್ಷವು ಬಿಹಾರದ (Bihar) ಕೋಶಿ ಪದವೀಧರ ಸ್ಥಾನದಿಂದ ಎನ್.ಕೆ. ಯಾದವ್, ಪಾಟ್ನಾ ಶಿಕ್ಷಕರ ಎಂ.ಎಲ್.ಸಿ ಸ್ಥಾನದಿಂದ ನೇವಲ್ ಕಿಶೋರ್ ಯಾದವ್, ದರ್ಭಂಗಾ ಶಿಕ್ಷಕರ ಎಂ.ಎಲ್.ಸಿ ಸ್ಥಾನದಿಂದ ಸುರೇಶ್ ರಾಯ್, ಪಕ್ಷವು ಕ್ರಮವಾಗಿ ಬಿಹಾರದ ತಿರ್ಹುತ್ ಮತ್ತು ಸರನ್ ಟೀಚರ್ಸ್ ಸ್ಥಾನಗಳಿಂದ ನರೇಂದ್ರ ಸಿಂಗ್ ಮತ್ತು ಚಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ ದೇವೇಂದ್ರ ಫಡ್ನವೀಸ್ ನೇಮಕ
ಅದೇ ರೀತಿ ಕರ್ನಾಟಕದ (Karnataka) ನಾಲ್ಕು ವಿಧಾನ ಪರಿಷತ್ತು ಸ್ಥಾನಗಳಲ್ಲಿ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಘೋಷಿಸಿದೆ.
* ಆಗ್ನೇಯ ಪದವೀಧರ ಸ್ಥಾನದಿಂದ ಚಿದಾನಂದ್ ಎಂ ಗೌಡ
* ಪಶ್ಚಿಮ ಪದವಿ ಸ್ಥಾನದಿಂದ ಎಸ್.ವಿ.ಸಂಕನೂರು
* ಈಶಾನ್ಯ ಶಿಕ್ಷಕ ಸ್ಥಾನದಿಂದ ಶಶೀಲ್ ಜಿ.ನಮೋಶಿ ಮತ್ತು
* ಬೆಂಗಳೂರು ಶಿಕ್ಷಕ ಎಂಎಲ್ಸಿ ಸ್ಥಾನದಿಂದ ಪುಟ್ಟಣ್ಣ ಅವರನ್ನು ಪಕ್ಷದಿಂದ ಕಣಕ್ಕಿಳಿಸಲಾಗಿದೆ.
List of BJP candidates for biennial election to Legislative Council of Bihar and Karnataka. pic.twitter.com/qS2BDfbkFn
— BJP (@BJP4India) October 3, 2020
ಈ ಮಾಹಿತಿಯನ್ನು ಭಾರತೀಯ ಜನತಾ ಪಕ್ಷದ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬಿಡುಗಡೆ ಮಾಡಿದ್ದಾರೆ.