Shaheen Bagh ಕುರಿತು ದೊಡ್ಡ ತೀರ್ಪು ಪ್ರಕಟಿಸಿದ ಸುಪ್ರೀಂ, ಝೀ ನ್ಯೂಸ್ ಅಭಿಯಾನಕ್ಕೆ ಮೊಹರು

ಝೀ ನ್ಯೂಸ್ ಅಭಿಯಾನದ ಮೇಲೆ ಇಂದು ತನ್ನ ಮೊಹರು ಒತ್ತಿರುವ ಸುಪ್ರೀಂ ಕೋರ್ಟ್ ಶಾಹೀನ್ ಬಾಗ್ ನಲ್ಲಿ ರಸ್ತೆ ತಡೆ ನಡೆಸಿರುವ ಘಟನೆಯನ್ನು ತಪ್ಪು ಎಂದು ಹೇಳಿದೆ. ಜೊತೆಗೆ ಯಾವುದೇ ಸಾರ್ವಜನಿಕ ಸ್ಥಳವನ್ನು ಅನಿರ್ಧಿಷ್ಟ ಕಾಲದ ಬರೆಗೆ ಬ್ಲಾಕ್ ಮಾಡಬಾರದು ಎಂದು ಹೇಳಿದೆ.  

Last Updated : Oct 7, 2020, 01:36 PM IST
  • ಸಾರ್ವಜನಿಕ ಸ್ಥಳವನ್ನು ಅನಿರ್ಧಿಷ್ಟ ಅವಧಿಗೆ ಬಂದ್ ಮಾಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್.
  • CAA ವಿರೋಧಿಸಿ ಶಾಹೀನ ಬಾಗ್ ನಲ್ಲಿ 100 ದಿನಗಳಿಗೂ ಅಧಿಕ ಕಾಲ ಪ್ರತಿಭಟನೆ ನಡೆಸಲಾಗಿತ್ತು.
  • ಈ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ರಸ್ತೆ ತಡೆ ಹಿಡಿದಿದ್ದರು.
Shaheen Bagh ಕುರಿತು ದೊಡ್ಡ ತೀರ್ಪು ಪ್ರಕಟಿಸಿದ ಸುಪ್ರೀಂ, ಝೀ ನ್ಯೂಸ್ ಅಭಿಯಾನಕ್ಕೆ ಮೊಹರು title=

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (CAA) ಯನ್ನು ವಿರೋಧಿಸಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬುಧವಾರ ಸುಪ್ರೀಂ ಕೋರ್ಟ್ ದೊಡ್ಡ ತೀರ್ಪು ನೀಡಿದೆ ಮತ್ತು ಯಾವುದೇ ವ್ಯಕ್ತಿ ಅಥವಾ ಗುಂಪು ಸಾರ್ವಜನಿಕ ಸ್ಥಳಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಝೀ ನ್ಯೂಸ್ ಅಭಿಯಾನದ ಮೇಲೆ ಇಂದು ತನ್ನ ಮೊಹರು ಒತ್ತಿರುವ ಸುಪ್ರೀಂ ಕೋರ್ಟ್ ಶಾಹೀನ್ ಬಾಗ್ ನಲ್ಲಿ ರಸ್ತೆ ತಡೆ ನಡೆಸಿರುವ ಘಟನೆಯನ್ನು ತಪ್ಪು ಎಂದು ಹೇಳಿದೆ.

ಇದನ್ನು ಓದಿ- ಶಾಹೀನ್ ಬಾಗ್ ಪ್ರತಿಭಟನೆಯನ್ನು ಪ್ರಶ್ನಿಸಿದ ಸರ್ವೋಚ್ಛ ನ್ಯಾಯಾಲಯ

ಸಿಎಎ ವಿರುದ್ಧ ಪ್ರತಿಭಟನೆಯ ವೇಳೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿ ದಾರಿ ನಿರ್ಬಂಧಿಸಿದ್ದಾರೆ ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್ ಹೇಳಿದ್ದಾರೆ. ಆದರೆ, ಸಿಎಎ ವಿರುದ್ಧ ಹಲವು ಅರ್ಜಿಗಳನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದು, ಅದು ಇನ್ನೂ ಬಾಕಿ ಉಳಿದಿದೆ. ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯದಿಂದ ಬೇರೆ ತೀರ್ಪು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಇದನ್ನು ಓದಿ- CAA: ಶಾಹೀನ್ ಬಾಗ್ ನಲ್ಲಿ ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ ಬೀದಿಗಿಳಿದ ಸ್ಥಳೀಯರು

ವಿರೋಧದ ಜೊತೆಗೆ ಕರ್ತವ್ಯ ಕೂಡ ಪ್ರಮುಖವಾದುದು ಎಂದ ನ್ಯಾಯಪೀಠ
ಸಾರಿಗೆಯ ಹಕ್ಕನ್ನು ಅನಿರ್ದಿಷ್ಟ ಅವಧಿಗೆ ನಿಲ್ಲಿಸುವುದು ತಪ್ಪು  ಎಂದು ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯ ಕುರಿತು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನವು ಪ್ರತಿಭಟಿಸುವ ಹಕ್ಕನ್ನು ನೀಡುತ್ತದೆ, ಆದರೆ ಅದನ್ನು ಸಮಾನ ಕರ್ತವ್ಯಗಳೊಂದಿಗೆ ಸಂಯೋಜಿಸಬೇಕು. ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗುವುದಿಲ್ಲ, ಆದರೆ ಅವು ಗೊತ್ತುಪಡಿಸಿದ ಪ್ರದೇಶಗಳಲ್ಲಿರಬೇಕು. ಶಹೀನ್ ಬಾಗ್‌ನಲ್ಲಿ ಮಧ್ಯಸ್ಥಿಕೆ ವಹಿಸುವ ಪ್ರಯತ್ನಗಳು ಯಶಸ್ವಿಯಾಗಲಿಲ್ಲ, ಆದರೆ ನಮಗೆ ಆ ಕುರಿತು ಯಾವುದೇ ಪಶ್ಚಾತ್ತಾಪವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನು ಓದಿ-CAA-NRC ವಿರುದ್ಧ PFI ಮಾಡಿದೆ ಈ ಪ್ಲಾನ್

100 ದಿನಕ್ಕೂ ಅಧಿಕ ಕಾಲದವರೆಗೆ ಪ್ರತಿಭಟನೆ ನಡೆದಿದ್ದು
ಪೌರತ್ವ ತಿದ್ದುಪಡಿ ಕಾಯ್ದೆ CAAಯನ್ನು ವಿರೋಧಿಸಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ 100 ದಿನಗಳಿಗೂ ಅಧಿಕ ಕಾಲ ಧರಣಿ ಪ್ರತಿಭಟನೆ ನಡೆಸಿದ್ದ ಜನರು ರಸ್ತೆ ತಡೆ ನಡೆಸಿದ್ದರು. ಆದರೆ ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು ದೆಹಲಿಯಲ್ಲಿ ಸೆಕ್ಷನ್ 144 ಹೇರಿದ ನಂತರ ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಿದ್ದರು. ಪ್ರತಿಭಟನಾಕಾರರನ್ನು ಶಾಹೀನ್ ಬಾಗ್‌ನಿಂದ ಚದುರಿಸಿ ರಸ್ತೆ ತೆರೆಯುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಯಿತು, ಏಕೆಂದರೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ವಾದಿಸಲಾಗಿತ್ತು.

Trending News