ಬಿಎಸ್ಪಿಯಲ್ಲಿ ಬುಗಿಲೆದ್ದ ಬಂಡಾಯ, ಐವರು ಶಾಸಕರು ಎಸ್ಪಿಗೆ ಸೇರ್ಪಡೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಬಹುಜನ ಸಮಾಜ ಪಕ್ಷದ ಐವರು ಶಾಸಕರು ರಾಜ್ಯಸಭೆಯ ಉಪ ಚುನಾವಣೆಗೆ ಬಿಎಸ್ಪಿಯ ಅಧಿಕೃತ ಅಭ್ಯರ್ಥಿ ರಾಮ್ಜಿ ಗೌತಮ್ ಅವರ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.ಗೌತಮ್ ಅವರ ಪ್ರಸ್ತಾಪಕರಾಗಿ ಅವರ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಐವರು ಶಾಸಕರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

Last Updated : Oct 28, 2020, 01:57 PM IST
ಬಿಎಸ್ಪಿಯಲ್ಲಿ ಬುಗಿಲೆದ್ದ ಬಂಡಾಯ, ಐವರು ಶಾಸಕರು ಎಸ್ಪಿಗೆ ಸೇರ್ಪಡೆ title=
file photo

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಹುಜನ ಸಮಾಜ ಪಕ್ಷದ ಐವರು ಶಾಸಕರು ರಾಜ್ಯಸಭೆಯ ಉಪ ಚುನಾವಣೆಗೆ ಬಿಎಸ್ಪಿಯ ಅಧಿಕೃತ ಅಭ್ಯರ್ಥಿ ರಾಮ್ಜಿ ಗೌತಮ್ ಅವರ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.ಗೌತಮ್ ಅವರ ಪ್ರಸ್ತಾಪಕರಾಗಿ ಅವರ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಐವರು ಶಾಸಕರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ, ಅಸ್ಲಂ ಚೌಧರಿ, ಅಸ್ಲಂ ರೈನಿ, ಮುಜ್ತಾಬಾ ಸಿದ್ದಿಕಿ, ಹಕಮ್ ಲಾಲ್ ಬೈಂಡ್ ಮತ್ತು ಗೋವಿಂದ್ ಜಾತವ್ ನೇರವಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು ಸಮಾಜವಾದಿ ಪಕ್ಷದ ಕಚೇರಿಗೆ ತೆರಳಿದರು.

ಕಾಂಗ್ರೆಸ್‌ಗೆ ಬಿಎಸ್​ಪಿ ಶಾಸಕರ ಸೇರ್ಪಡೆ: ಕಾಂಗ್ರೆಸ್ ದಲಿತ ವಿರೋಧಿ ಪಕ್ಷ ಎಂದ ಮಾಯಾವತಿ

ಬಿಎಸ್ಪಿ ಇಂತಹ ದೊಡ್ಡ ಹಿನ್ನಡೆ ಎದುರಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಈಗಿನ ರಾಜಕೀಯ ಬೆಳವಣಿಗೆಗಳು ಮುಂಬರುವ 2022 ರಲ್ಲಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎನ್ನಲಾಗಿದೆ.ಮಂಗಳವಾರ, ಸ್ವತಂತ್ರ ಅಭ್ಯರ್ಥಿ, ಪ್ರಕಾಶ್ ಬಜಾಜ್, ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ, ನಾಮಪತ್ರ ಸಲ್ಲಿಸಿದ್ದು, ಬುಧವಾರದ ಘಟನೆಗಳ ಮೂಲಕ ಸ್ಪಷ್ಟ ಸೂಚನೆಯನ್ನು ನೀಡಿದೆ.

ರಾಜಸ್ಥಾನ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಎಲ್ಲಾ 6 ಬಿಎಸ್​ಪಿ ಶಾಸಕರು ಕಾಂಗ್ರೆಸ್‌ಗೆ!

ಇನ್ನೊಂದೆಡೆಗೆ ಪಕ್ಷದ ವಿರುದ್ಧ ದಂಗೆ ಎದ್ದ ಐದು ಶಾಸಕರಿಗೆ ಹಣದ ಚೀಲದ 'ಸವಲತ್ತು'ಗಳನ್ನು ನೀಡಲಾಗುತ್ತಿದೆ ಮತ್ತು ದಲಿತ ನಾಯಕ ರಾಮ್ಜಿ ಗೌತಮ್ ಅವರನ್ನು ರಾಜ್ಯಸಭೆಗೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಬಿಎಸ್ಪಿ ಶಾಸಕ ಉಮಾಶಂಕರ್ ಸಿಂಗ್ ಆರೋಪಿಸಿದ್ದಾರೆ.

Trending News