ಬೆಂಗಳೂರು: ಲವ್ ಜಿಹಾದ್ ಮಟ್ಟ ಹಾಕುವ ವಿಷಯದಲ್ಲಿ ಕರ್ನಾಟಕ ರಾಜ್ಯ ಕೂಡಾ ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳ ಹೆಜ್ಜೆ ಅನುಸರಿಸುತ್ತಿದೆ. ಕೇವಲ ಮದುವೆಗಾಗಿ ಮತಾಂತರವಾಗುವುದನ್ನು (conversions) ತಡೆಯಲು ರಾಜ್ಯದಲ್ಲೂ ಕಠಿಣ ಕಾನೂನು ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ (C T Ravi) ಘೋಷಿಸಿದ್ದಾರೆ.
ಈ ವಿಚಾರವನ್ನು ಟ್ವೀಟ್ ಮಾಡಿರುವ ಅವರು ಕೇವಲ ಮದುವೆಯಾಗುವ ಉದ್ದೇಶದಿಂದ ಮತಾಂತರಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಅವರು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದಾರೆ. ಜಿಹಾದಿ ಶಕ್ತಿಗಳು ನಮ್ಮ ಸಹೋದರಿಯರ ಘನತೆ ಹರಣ ಮಾಡುವಾಗ ಮೂಕ ಪ್ರೇಕ್ಷರಂತೆ ಸುಮ್ಮನಿರಲು ಸಾಧ್ಯವಿಲ್ಲ.ಮತಾಂತರದಲ್ಲಿ ತೊಡಗುವ ವ್ಯಕ್ತಿ ಎಂಥವರೇ ಇರಲಿ. ಅವರಿಗೆ ಕಡಿಮೆ ಸಮಯದಲ್ಲಿಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ರವಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಪ್ರವಾಹದ ವಿಷಯದಲ್ಲೂ ರಾಜ್ಯ ಬಿಜೆಪಿಯಲ್ಲಿ ಶೀತಲ ಸಮರ: ಸಿಎಂ ಆದೇಶಕ್ಕೆ ಡೋಂಟ್ ಕೇರ್ ಎಂದಿರುವ ಸಿ.ಟಿ. ರವಿ
ಇತ್ತೀಚೆಗೆ ದೆಹಲಿ ಸಮೀಪದ ಫರೀದಾಬಾದ್ ನಲ್ಲಿ ಯುವಕನೊಬ್ಬ ಹಾಡಹಗಲೇ ಕಾಲೇಜು ವಿದ್ಯಾರ್ಥಿನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದನು. ಈ ಹತ್ಯೆಗೆ ಲವ್ ಜಿಹಾದ್ (Love Jihad) ಕಾರಣ ಎಂದು ಆರೋಪಿಸಿರುವ ಸಂಘ ಸಂಸ್ಥೆಗಳು, ಲವ್ ಜಿಹಾದ್ ಮಟ್ಟ ಹಾಕಲು ಒತ್ತಾಯಿಸಿದ್ದವು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ, ಲವ್ ಜಿಹಾದ್ ತಪ್ಪಿಸಲು ರಾಜ್ಯದಲ್ಲಿ ಅತ್ಯಂತ ಕಠಿಣ ಕಾನೂನು ತರಲಾಗುವುದು. ಮತಾಂತರ ಬಿಟ್ಟು ಬಿಡಿ, ಅಥವಾ “ರಾಮ್ ನಾಮ್ ಸತ್ಯ ಹೇ” ಎನ್ನುವುದಕ್ಕೆ ತಯಾರಾಗಿ ಎಂದು ಯೋಗಿ ಎಚ್ಚರಿಕೆ ನೀಡಿದ್ದರು.
ಸಚಿವ ಸಿ.ಟಿ ರವಿ ಅವರು ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ
ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ತರುವ ಇಂಗಿತವನ್ನು ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ ಹರಿಯಾಣದಲ್ಲಿರುವ ಬಿಜೆಪಿ ಸರ್ಕಾರ ಕೂಡಾ ಅದೇ ಮಾರ್ಗದಲ್ಲಿ ಮುನ್ನಡೆದಿದೆ. ಲವ್ ಜಿಹಾದ್ ತಡೆಯಲು ಕಠಿಣ ಕಾನೂನು ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ಯೋಚಿಸಲಾಗುತ್ತಿದೆ ಎಂದು ಹರಿಯಾಣದ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಕೇವಲ ಮದುವೆಗಾಗಿ ಮತಾಂತರವಾಗುವುದು ತಪ್ಪು ಎಂದು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು.