ನವದೆಹಲಿ : ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ರಫ್ತು ಹೆಚ್ಚಿಸಲು 10 ಪ್ರಮುಖ ಕ್ಷೇತ್ರಗಳಿಗೆ 1.46 ಲಕ್ಷ ಕೋಟಿ ರೂ.ಗಳ ಮೌಲ್ಯದ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಯೋಜನೆಯು ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ, ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ರಫ್ತನ್ನು ಹೆಚ್ಚಿಸುತ್ತದೆ.
ಸಂಪುಟದ ಈ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ (Prakash Javadekar) ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಕ್ಯಾಬಿನೆಟ್ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ , ಬಿಳಿ ಸರಕುಗಳ ಉತ್ಪಾದನೆ, ಔಷಧೀಯ, ವಿಶೇಷ ಉಕ್ಕು, ವಾಹನಗಳು, ಟೆಲಿಕಾಂ, ಜವಳಿ, ಆಹಾರ ಉತ್ಪನ್ನಗಳು, ಸೌರ ದ್ಯುತಿವಿದ್ಯುಜ್ಜನಕ ಮತ್ತು ಸೆಲ್ ಬ್ಯಾಟರಿ ಮುಂತಾದ ಕ್ಷೇತ್ರಗಳಿಗೆ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹ ಧನ ನೀಡಲಾಗುವುದು ಎಂದು ವಿವರಿಸಿದರು.
#Cabinet approves Production-Linked Incentive (PLI) scheme for 10 key sectors which will enhance India's manufacturing capabilities, exports and employment - Union Minister @PrakashJavdekar #CabinetDecisions
Details: https://t.co/8diJbywkbj pic.twitter.com/6cDENyNh6O
— PIB India (@PIB_India) November 11, 2020
ನಾವು ಪಿಎಲ್ಐನಲ್ಲಿ ತೆಗೆದುಕೊಳ್ಳುತ್ತಿರುವ ನೀತಿಯು, ಅದರ ಮೂಲಕ ತಯಾರಕರು ಭಾರತಕ್ಕೆ ಬರಬೇಕೆಂದು ನಾವು ಬಯಸುತ್ತೇವೆ, ನಮ್ಮ ಶಕ್ತಿಯನ್ನು ನಿರ್ಮಿಸಲು ನಾವು ಬಯಸುತ್ತೇವೆ. ಆದರೆ ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂದು ಸ್ಪಷ್ಟವಾಗಿ ಹೇಳುವುದಾಗಿದೆ. ಭಾರತವು ಉತ್ಪಾದನಾ ಕೇಂದ್ರವಾಗಬೇಕು ಎಂಬುದು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದರು.
ರೈತರಿಗೊಂದು ಮಾಹಿತಿ: ಸರ್ಕಾರದಿಂದ ಸಬ್ಸಿಡಿದರದಲ್ಲಿ ಕೃಷಿ ಉಪಕರಣ ಖರೀದಿಸಲು ಹೀಗೆ ಮಾಡಿ
ಪ್ರೊಡಕ್ಷನ್-ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದರು. ಇದು ಭಾರತದ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಮತ್ತು ‘ಆತ್ಮನಿರ್ಭಾರ ಭಾರತ್’ ಸಾಕಾರಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
Cabinet decision of PLI scheme for 10 sectors will boost manufacturing, give opportunities to youth while making India a preferred investment destination. This is an important step towards improving our competitiveness & realising an Aatmanirbhar Bharat. https://t.co/KDQvMEBubJ
— Narendra Modi (@narendramodi) November 11, 2020
ಈ ಕ್ಷೇತ್ರಗಳಲ್ಲಿ ಆಟೋಮೊಬೈಲ್ಸ್ ಮತ್ತು ಆಟೋ ಕಾಂಪೊನೆಂಟ್ಗಳು ಗರಿಷ್ಠ 57,042 ಕೋಟಿ ರೂ., ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ (ACC) ಬ್ಯಾಟರಿಯು 18,100 ಕೋಟಿ ರೂ.ಗಳ ಪ್ರೋತ್ಸಾಹವನ್ನು ಪಡೆದಿದೆ ಎಂದು ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೋದಿ ಸರ್ಕಾರದ ಭರ್ಜರಿ ತಯಾರಿ: ನಿಮ್ಮೂರ ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಸಿಗಲಿದೆ ಕರೋನಾ ಲಸಿಕೆ