ನವದೆಹಲಿ: ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಯೋಜನೆಯಡಿ ಪ್ರತಿ ವರ್ಷ ರೈತರಿಗೆ 6 ಸಾವಿರ ರೂಪಾಯಿ ಸಿಗುತ್ತದೆ. ಈ ಯೋಜನೆಯನ್ನು 2019ರಲ್ಲಿ ಪ್ರಾರಂಭಿಸಲಾಯಿತು. ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳು ಕೃಷಿ ಭೂಮಿಯ ಜೊತೆಗೆ ಆದಾಯ ಪ್ರಮಾಣ ಪತ್ರವನ್ನು ನೀಡಬೇಕಾಗಿದೆ. ಈ ಯೋಜನೆಯಡಿ 6000 ರೂ.ಗಳನ್ನು ತಲಾ 2000 ರೂ.ಗಳ ಮೂರು ಕಂತುಗಳ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ಬರಲಿದೆ 2000 ರೂ.! ಇಲ್ಲಿದೆ ಫುಲ್ ಡೀಟೇಲ್ಸ್
ಈಗ ದೇಶದ 14.5 ಕೋಟಿ ರೈತರಿಗೆ ಯೋಜನೆಯ ಪ್ರಯೋಜನ:
ಆರಂಭದಲ್ಲಿ ಕೇವಲ ಎರಡು ಹೆಕ್ಟೇರ್ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರ (Farmers) ಕುಟುಂಬಗಳನ್ನು ಮಾತ್ರ ಈ ಯೋಜನೆಯ ವ್ಯಾಪ್ತಿಗೆ ತರಲಾಯಿತು. ಈಗ ಈ ನಿಯಮವನ್ನು ಪರಿಷ್ಕರಿಸುತ್ತಾ, ಈ ಯೋಜನೆಯನ್ನು ಎಲ್ಲಾ ರೈತರಿಗೂ ಜಾರಿಗೆ ತರಲಾಗಿದೆ. ಆದರೆ ಈ ಯೋಜನೆಯಲ್ಲಿ ಕೆಲವು ರೈತರನ್ನು ಸೇರಿಸಲಾಗಿಲ್ಲ. ಪ್ರಸ್ತುತ ದೇಶದ 14.5 ಕೋಟಿ ರೈತರು ಈ ಯೋಜನೆಯಡಿ ಬರುತ್ತಾರೆ.
PM Kisan: ನೀವು ನವೆಂಬರ್ ಕಂತನ್ನು ಪಡೆಯುವ ಮೊದಲು ಈ ಕೆಲಸ ಮಾಡಿ, ಇಲ್ಲವೇ...
ಈ ರೈತರನ್ನು ಯೋಜನೆಗೆ ಸೇರಿಸಲಾಗಿಲ್ಲ:
ಪಿಎಂ-ಕಿಸಾನ್ (PM Kisan) ಯೋಜನೆಯಿಂದ ಹೊರಗಿಡಲ್ಪಟ್ಟವರಲ್ಲಿ ಸಾಂಸ್ಥಿಕ ಭೂಮಾಲೀಕರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಸೇರಿದ್ದಾರೆ. ವೈದ್ಯರು, ಎಂಜಿನಿಯರ್ಗಳು ಮತ್ತು ವಕೀಲರು ಹಾಗೂ ಮಾಸಿಕ 10,000 ರೂ.ಗಿಂತ ಹೆಚ್ಚಿನ ಪಿಂಚಣಿ ಪಡೆಯುವ ನಿವೃತ್ತ ಪಿಂಚಣಿದಾರರು ಮತ್ತು ಕಳೆದ ವಿತ್ತೀಯ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿರುವ ವೃತ್ತಿಪರರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ.
PM Kisan: ಯಾವುದೇ ಕಾರಣದಿಂದ ರೈತರ ಖಾತೆಗೆ ರೂ.2000 ಬರದಿದ್ದರೆ ಚಿಂತೆ ಬಿಟ್ಟು ಈ ಕೆಲಸ ಮಾಡಿ..
ಎಲ್ಲಾ ಭೂರಹಿತ ರೈತ ಕುಟುಂಬಗಳು, ಯಾರ ಹೆಸರಿನಲ್ಲಿ ಕೃಷಿ ಯೋಗ್ಯ ಭೂಮಿ ಇದೆಯೋ ಅಂತಹ ರೈತರು ಈ ಯೋಜನೆಯಡಿ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.