ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ!

    

Last Updated : Feb 22, 2018, 08:58 PM IST
ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ!   title=

ಬೆಂಗಳೂರು: ಯುಜಿಸಿ ಮಾನ್ಯತೆ ರದ್ದಾದ ಹಿನ್ನಲೆ ಭಾರಿ ಸಂಕಷ್ಟ ಎದುರಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೊಸದಾಗಿ ಸಿಹಿ ಸುದ್ದಿಯೊಂದು ಬಂದಿದೆ. 

ಅದೇನಪ್ಪಾ ಅಂದರೆ, ಸದ್ಯ ಮುಕ್ತ ವಿವಿಗೆ ಇರುವ ಮಾನ್ಯತೆಯ ರದ್ದನ್ನು ಪರಿಶೀಲಿಸಿ ಅದಕ್ಕೆ ಅಂತಿಮ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತಾಗಿ ಪ್ರತಿಕ್ರಯಿಸಿರುವ ಕೇಂದ್ರ ಮಾನವ ಸಂಪನ್ಮೂಲ  ಅಭಿವೃದ್ದಿ ಸಚಿವ ಪ್ರಕಾಶ್ ಜಾವಡೇಕರ್ "ಮುಂದಿನ ವಾರ ದೆಹಲಿಯಲ್ಲಿ ಮುಕ್ತ ವಿವಿ ಬಿಕ್ಕಟ್ಟನ್ನು ಪರಿಹರಿಸಲು ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಖಾಸಗಿವಾಹಿನಿಗೆ ತಿಳಿಸಿದ್ದಾರೆ. ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರ ಹೊಸದಾಗಿ ಮಾರ್ಗಸೂಚಿಗಳನ್ನು ರೂಪಿಸಲು ಮುಂದಾಗಿದೆ ಮತ್ತು ವಿವಿ ಪ್ರಕರಣದಲ್ಲಿ ಯಾರೆ ತಪ್ಪಿತಸ್ಥರಿದ್ದರು ಸಹಿತ ಅಂತವರಿಗೆ ಸರ್ಕಾರ ಶಿಕ್ಷೆ ವಿಧಿಸಲಿದೆ ಎಂದರು. ಮುಕ್ತ ವಿವಿಯ ಬಿಕ್ಕಟ್ಟು ಬಗೆ ಹರಿದ ನಂತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

Trending News