ಚಂಡೀಗಢ: ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕರೋನವೈರಸ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh) ಅವರು ಬುಧವಾರ ರಾಜ್ಯದ ಎಲ್ಲಾ ನಗರಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲು ಆದೇಶಿಸಿದ್ದಾರೆ.
Punjab Chief Minister Captain Amarinder Singh orders night curfew in all towns and cities from 10 pm to 5 am and doubles fine for flouting #COVID19 appropriate behaviour to Rs 1000, with effect from December 1. pic.twitter.com/VHe6yzdiSB
— ANI (@ANI) November 25, 2020
ಇದೇ ವೇಳೆ ಕೋವಿಡ್ -19 (Covid 19) ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುವ ದಂಡವನ್ನು ದ್ವಿಗುಣಗೊಳಿಸಿ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈ ನಿಯಮ ಡಿಸೆಂಬರ್ 1 ರಿಂದ ಅನ್ವಯವಾಗುತ್ತದೆ. ಇದಲ್ಲದೆ ಡಿಸೆಂಬರ್ 1 ರಿಂದ ಎಲ್ಲಾ ಹೋಟೆಲ್ ರೆಸ್ಟೋರೆಂಟ್‌ಗಳು ಮತ್ತು ಸಭೆ-ಸಮಾರಂಭಗಳನ್ನು ರಾತ್ರಿ 9.30 ಕ್ಕೆ ಮುಚ್ಚುವಂತೆ ನಿರ್ದೇಶನ ನೀಡಲಾಗಿದೆ.
All hotels, restaurants and wedding venues to close at 9.30 pm, starting December 1. Curbs to be reviewed on December 15.#COVID19 https://t.co/TAVEiiohcp
— ANI (@ANI) November 25, 2020
ಪಂಜಾಬ್ (Punjab) ಇದುವರೆಗೆ 147,665 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದರಲ್ಲಿ 6,834 ಸಕ್ರಿಯ ಪ್ರಕರಣಗಳು, 136,000 ಕ್ಕೂ ಹೆಚ್ಚು ಕರೋನಾ ರೋಗಿಗಳು ಗುಣಮುಖರಾಗಿದ್ದರೆ, 4,653 ಸಾವುಗಳು ಸಂಭವಿಸಿವೆ. ನವೆಂಬರ್ 24ರಂದು 614 ಹೊಸ ಕರೋನಾವೈರಸ್ ಪ್ರಕರಣಗಳು ವರದಿಯಾಗಿದ್ದರೆ, 22 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದೆಹಲಿಯಲ್ಲಿ ಮತ್ತೆ ಶಾಲೆಗಳು ತೆರೆಯಲಿವೆಯೇ? ಮನೀಶ್ ಸಿಸೋಡಿಯಾ ಮಹತ್ವದ ಘೋಷಣೆ
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಗರಿಷ್ಠ ಪ್ರಕರಣಗಳು ಲುಧಿಯಾನ (103), ಜಲಂಧರ್ (94) ಮತ್ತು ಪಟಿಯಾಲ (82) ದಲ್ಲಿ ವರದಿಯಾಗಿವೆ. ರಾಜ್ಯವು ಈವರೆಗೆ 3.5 ದಶಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಿದೆ.
ಯಾವಾಗ ಬೇಕಾದರೂ ಕೊರೊನಾ ಲಸಿಕೆ ಬರಬಹುದು: ಪ್ರಧಾನ ಮಂತ್ರಿ ನರೇಂದ್ರ ಮೋದಿ
ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅನಾರೋಗ್ಯದ ಕಾರಣ ನವೆಂಬರ್ 24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಕೋವಿಡ್ -19 ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿಲ್ಲ ಎಂಬುದು ಗಮನಾರ್ಹ.