Diego Maradona Death:ಮರಡೋನಾಗೆ ಶೃದ್ಧಾಂಜಲಿ ಅರ್ಪಿಸಿದ Lionel Messiಗೆ ದಂಡ, ಕಾರಣ ಇಲ್ಲಿದೆ

ಮೈದಾನದಲ್ಲಿ ಗೋಲ್ ಬಾರಿಸಿದ ಲಿಯೋನೆಲ್ ಮೆಸ್ಸಿ ತನ್ನ ಜರ್ಸಿಯನ್ನು ತೆಗೆದು ಡಿಯಾಗೋ ಮರಡೋನಾಗೆ ಶೃದ್ಧಾಂಜಲಿ ಅರ್ಪಿಸಿದ್ದಾರೆ. ಇದಕ್ಕಾಗಿ ಅವರಿಗೆ 600 ಯುರೋ (ಅಂದರೆ 720 ಡಾಲರ್) ದಂಡ ವಿಧಿಸಲಾಗಿದೆ.  

Last Updated : Dec 3, 2020, 08:13 PM IST
  • ಡಿಯಾಗೋ ಮರಡೋನಾಗೆ ಶ್ರದ್ಧಾಂಜಲಿ ಅರ್ಪಿಸಿದ ಲಿಯೋನೆಲ್ ಮೆಸ್ಸಿ.
  • ಗೋಲ್ ಬಾರಿಸಿದ ಬಳಿಕ ಜರ್ಸಿ ಕಳಚಿದ ಲಿಯೋನೆಲ್ ಮೆಸ್ಸಿ.
  • ಇದಕ್ಕಾಗಿ ಮೆಸ್ಸಿಗೆ 720 ಡಾಲರ್ ದಂಡ ವಿಧಿಸಲಾಗಿದೆ.
Diego Maradona Death:ಮರಡೋನಾಗೆ ಶೃದ್ಧಾಂಜಲಿ ಅರ್ಪಿಸಿದ Lionel Messiಗೆ ದಂಡ, ಕಾರಣ ಇಲ್ಲಿದೆ title=

ಬಾರ್ಸಿಲೋನಾ: ಫುಟ್ ಬಾಲ ದಂತಕಥೆ ಡಿಯಾಗೋ ಮರಡೋನಾ (Diego Armando Maradona) ಅವರಿಗೆ ಶೃದ್ಧಾಂಜಲಿ ಅರ್ಪಿಸಲು ತನ್ನ ಜರ್ಸಿ ಕಳಚಿದ ಲಿಯೋನೆಲ್ ಮೆಸ್ಸಿಗೆ (Lionel Messi) 600 ಯುರೋ ಅಂದರೆ ಒಟ್ಟು 720 ಡಾಲರ್ ಡಾಲರ್ ದಂಡವಿಧಿಸಲಾಗಿದೆ.

ಸ್ಪ್ಯಾನಿಷ್ ಲೀಗ್‌ನಲ್ಲಿ ಒಸಾಸುನಾ ವಿರುದ್ಧ ಬಾರ್ಸಿಲೋನಾ 4-0 ಗೋಲುಗಳಿಂದ ಜಯಗಳಿಸಿದ ನಂತರ ಸ್ಪ್ಯಾನಿಷ್ ಫುಟ್‌ಬಾಲ್ ಫೆಡರೇಶನ್‌ನ ಸ್ಪರ್ಧಾ ಸಮಿತಿ ದಂಡವನ್ನು ವಿಧಿಸಿದೆ.

ಇದನ್ನು ಓದಿ- ಹೃದಯಾಘಾತದಿಂದ ಫುಟ್ಬಾಲ್ ದಂತಕಥೆ ಮರಡೋನಾ ಸಾವು

ಅರ್ಜೆಂಟೀನಾದ ಫೂಟ್ಬಾಲ್ ತಾರೆ ಮೆಸ್ಸಿ (Lionel Messi) ಗೋಲು ಬಾರಿಸಿದ ನಂತರ ಬಾರ್ಸಿಲೋನಾದ ಜರ್ಸಿಯನ್ನು ಕಳಚಿ ಹಳೆಯ ಕ್ಲಬ್ ಡಿಯಾಗೋ ಅರ್ಮಾಂಡೋ ಮರಡೋನಾ (Diego Maradona) ವೇಲ್ಸ್ ಓಲ್ಡ್ ಬಾಯ್ಸ್ ಜರ್ಸಿಯನ್ನು ಧರಿಸಿದ್ದಾರೆ. ಜೊತೆಗೆ  ಎರಡೂ ಕೈಗಳಿಂದ ಆಕಾಶದೆಡೆಗೆ ಚಾಚಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.

ಪಂದ್ಯ ಮುಕ್ತಾಯದ ಬಳಿಕ ಲಿಯೋನೆಲ್ ಮೆಸ್ಸಿ ತನ್ನ ಈ ಭಾವಚಿತ್ರದ ಜೊತೆಗೆ ಮರಡೋನಾ ಅವರ ಭಾವಚಿತ್ರ ಸೇರಿಸಿ ಹಂಚಿಕೊಂಡು, 'ಫೆಯರ್ ವೆಲ್ ಡಿಯಾಗೋ' ಎಂದು ಅಡಿಬರಹ ಬರೆದುಕೊಂಡಿದ್ದಾರೆ.

ಇದನ್ನು ಓದಿ- ಒಂದು ದಿನ ನಾವು ಆಕಾಶದಲ್ಲಿ ಒಟ್ಟಿಗೆ ಸಾಕರ್ ಆಡುತ್ತೇವೆ-ಮರಡೋನಾ ಬಗ್ಗೆ ಪಿಲೆ ಭಾವುಕ ನುಡಿ ನಮನ

ಇದನ್ನು ಗಂಭೀರವಾಗಿ ಪರಿಗಣಿಸಿರುವ ಫುಟ್ಬಾಲ್ ಮಹಾಸಂಘ ಬಾರ್ಸಿಲೋನಾ ತಂಡಕ್ಕೂ ಕೂಡ 180 ಯುರೋ ದಂಡ ವಿಧಿಸಿದೆ. ಇದಕ್ಕಾಗಿ ಮೆಸ್ಸಿ ಹಳದಿ ಕಾರ್ಡ್  ನೋಡಬೇಕಾಯಿತು. ಮೆಸ್ಸಿ ಹಾಗೂ ಅವರ ಫುಟ್ಬಾಲ್ ಕ್ಲಬ್ ಇದರ ವಿರುದ್ಧ ನ್ಯಾಯಾಲಯ ಕದ ತಟ್ಟುವ ಸಾಧ್ಯತೆ ವರ್ತಿಸಲಾಗುತ್ತಿದೆ.

ಇತ್ತೀಚೆಗಷ್ಟೇ ಅರ್ಜೆಂಟಿನಾದ ಮಹಾನ್ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ (Diego Maradona) ತನ್ನ 60ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ. ಎರಡು ವಾರಗಳ ಹಿಂದೆಯಷ್ಟೇ ಮೆದುಳಿನ ಶಸ್ತ್ರಚಿಕಿತ್ಸೆಯ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

Trending News