ಹೃದಯಾಘಾತದಿಂದ ಫುಟ್ಬಾಲ್ ದಂತಕಥೆ ಮರಡೋನಾ ಸಾವು

Last Updated : Nov 25, 2020, 10:42 PM IST
ಹೃದಯಾಘಾತದಿಂದ ಫುಟ್ಬಾಲ್ ದಂತಕಥೆ ಮರಡೋನಾ ಸಾವು  title=
file photo

ನವದೆಹಲಿ: ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಹೃದಯಾಘಾತದಿಂದ ಬುಧವಾರ ನಿಧನರಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.

60 ರ ಹರೆಯದ ಮರಡೋನಾ ಈ ಹಿಂದೆ ಸಬ್ಡ್ಯೂರಲ್ ಹೆಮಟೋಮಾಗೆ ಆಪರೇಶನ್ ಗೆ ಒಳಗಾಗಿದ್ದರು, ಇದು ಪೊರೆಯ ಮತ್ತು ಅವನ ಮೆದುಳಿನ ನಡುವೆ ರಕ್ತದ ಸಂಗ್ರಹವಾಗಿದ್ದರಿಂದಾಗಿ ಅವರಿಗೆ ಆಪರೇಶನ್ ಮಾಡಲಾಗಿತ್ತು.

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮರಡೋನಾ, 1986 ರಲ್ಲಿ ಅರ್ಜೆಂಟೀನಾ ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದರು, ಅವರು ಬೊಕಾ ಜೂನಿಯರ್ಸ್, ನಾಪೋಲಿ ಮತ್ತು ಬಾರ್ಸಿಲೋನಾ ಪರ ಕ್ಲಬ್ ಫುಟ್ಬಾಲ್ ಆಡಿದರು ಮತ್ತು ಅವರ ಅದ್ಭುತ ಕೌಶಲ್ಯಕ್ಕಾಗಿ ಲಕ್ಷಾಂತರ ಜನರು ಅವರನ್ನು ಆರಾಧಿಸಿಸುತ್ತಿದ್ದರು.

1986 ರ ಪಂದ್ಯಾವಳಿಯಿಂದ ಇಂಗ್ಲೆಂಡ್ ಅನ್ನು ಹೊರಹಾಕಿದ ಕುಖ್ಯಾತ 'ಹ್ಯಾಂಡ್ ಆಫ್ ಗಾಡ್'ಗೆ ಮರಡೋನಾ ಕಾರಣಕರ್ತರಾಗಿದ್ದರು.

Trending News