ತಪ್ಪದೆ ಓದಿ: 2021 ರಲ್ಲಿ ರಜಾ ದಿನಗಳ ಭಡಿಮಾರ, ಇಲ್ಲಿದೆ Holidays List 2021

ಇನ್ನು ಕೆಲವೇ ದಿನಗಳಲ್ಲಿ 2020ರ ವರ್ಷ ಗುಡ್ ಬೈ ಹೇಳಲಿದ್ದು,  2021 ರ ಆಗಮನವಾಗಲಿದೆ. ಕಳೆದ ಒಂದು ವರ್ಷ ಕೊರೊನಾ ವೈರಸ್ ಮಹಾಮಾರಿಯ ಕಾರಣ ಹಲವು ಏರಿಳಿತಗಳಿಂದ ಕೂಡಿತ್ತು. 

Last Updated : Dec 6, 2020, 03:48 PM IST
  • ಕೊರೊನಾ ಮಹಾಮಾರಿಯ ಕಾರಣ 2020 ವರ್ಷ ಹಲವು ಏರಿಳಿತಗಳಿಂದ ಕೂಡಿತ್ತು.
  • ಹೀಗಾಗಿ ಜನರು 2021 ರ ಆಗಮನಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ.
  • 2021ರ ರಜಾ ದಿನಗಳಲ್ಲಿ ಮಜಾ ಮಾಡಲು ವರ್ಷದ ರಜಾ ದಿನಗಳ ಪಟ್ಟಿ ಇಲ್ಲಿದೆ.
ತಪ್ಪದೆ ಓದಿ: 2021 ರಲ್ಲಿ ರಜಾ ದಿನಗಳ ಭಡಿಮಾರ, ಇಲ್ಲಿದೆ  Holidays List 2021 title=

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ 2020ರ ವರ್ಷ ಗುಡ್ ಬೈ ಹೇಳಲಿದ್ದು,  2021 ರ ಆಗಮನವಾಗಲಿದೆ. ಕಳೆದ ಒಂದು ವರ್ಷ ಕೊರೊನಾ ವೈರಸ್ ಮಹಾಮಾರಿಯ ಕಾರಣ ಹಲವು ಏರಿಳಿತಗಳಿಂದ ಕೂಡಿತ್ತು. ಕಚೇರಿ/ಕಾರ್ಯಸ್ಥಳಗಳು ಬಂದ್ ಇದ್ದ ಕಾರಣ ರಜಾದಿನಗಳಿದ್ದರು ಕೂಡ ಜನರು ತಮ್ಮ ಹಾಲಿ ಡೇಗಳನ್ನು ಆನಂದಿಸಲು ವಿಫಲರಾಗಿದ್ದರು. ಇಂತಹುದರಲ್ಲಿ ಕೊರೊನಾ ವ್ಯಾಕ್ಸಿನ್ ಜೊತೆಗೆ ಹತ್ತಿರಕ್ಕೆ ಬರುತ್ತಿರುವ ನೂತನ ವರ್ಷ ಹೊಸ ಆಸೆ ಆಕಾಂಕ್ಷೆಗಳಿಂದ ತುಂಬಿದೆ. 2021ರ ಆಗಮನಕ್ಕಾಗಿ ಜನರು ತುಂಬಾ ಕಾತರದಿಂದ ಕಾಯುತ್ತಿದ್ದಾರೆ. ಜನರು 2021 ರಲ್ಲಿ ಮನೆಯಿಂದ ಹೊರಬಂದು ರಜಾದಿನಗಳಲ್ಲಿ ಮಜಾ ಮಾಡುವ ಪ್ಲಾನ್ ಕೂಡ ಸಿದ್ಧಪಡಿಸುತ್ತಿದ್ದಾರೆ. ಯಾವುದೇ ಒಂದು ತಿಂಗಳಿನಲ್ಲಿ ರಜಾದಿನಗಳು ಕಡಿಮೆ ಇದ್ದರೂ ಕೂಡ, ಅವುಗಳ ಮಾಹಿತಿ ಮೊದಲೇ ಗೊತ್ತಿದ್ದರೆ, ಮಜಾ ದ್ವಿಗುಣಗೊಳಿಸಲು ಮತ್ತಷ್ಟು ಉತ್ತಮ ರೀತಿಯಲ್ಲಿ ಯೋಜನೆ ರೂಪಿಸಬಹುದು. ಇದನ್ನೇ ಗಮನದಲ್ಲಿಟ್ಟುಕೊಂದು ನಾವು ವರ್ಷ 2021ರಲ್ಲಿ ಬರುವ ರಜಾದಿನಗಳ (gazetted holidays 2021 and restricted holidays 2021) ಕುರಿತು ನಿಮಗೆ ಮಾಹಿತಿ ನೀಡಲಿದ್ದು, ಅವುಗಳನ್ನು ತಿಳಿದು ನೀವೂ ಕೂಡ ನಿಮ್ಮ ರೈಲು ಟಿಕೆಟ್ ಗಳನ್ನು ಅಥವಾ ಟೂರಿಸ್ಟ್ ಡೆಸ್ಟಿನೇಷನ್ ಪ್ಯಾಕೇಜ್ ಗಳನ್ನು ಮುಂಗಡವಾಗಿ ಬುಕ್ ಮಾಡಬಹುದು.

ಇದನ್ನು ಓದಿ- ಭಾರತದ ಈ ಸ್ಥಳಗಳಲ್ಲಿ ಅಡಗಿವೆ ಶತಮಾನಗಳಷ್ಟು ಹಳೆ ರಹಸ್ಯಗಳು, ನೀವು ನಂಬಲಸಾಧ್ಯ

2021 ರಲ್ಲಿ ಬರುವ ರಜಾದಿನಗಳು ಹಾಗೂ ಪ್ರಮುಖ ಭಾರತೀಯ ಹಬ್ಬಗಳು
1. ಜನವರಿ

ಈ ತಿಂಗಳಿನಲ್ಲಿ ಒಂದೇ ಒಂದು ಸಾರ್ವತ್ರಿಕ ರಜಾ ದಿನವಿದೆ. ಜನವರಿ 26 ರಂದು ಮಂಗಳವಾರವಿದೆ. ಶನಿವಾರ ಹಾಗೂ ರವಿವಾರ ರಜಾ ದಿನಗಳು ಇರುವ ಕಾರಣ ಸೋಮವಾರ ಒಂದು ದಿನ ಕಚೇರಿಗೆ ರಜೆ ಹಾಕಿ ನೀವು ಒಟ್ಟು ನಾಲ್ಕು ದಿನಗಳ ಪ್ರವಾಸ ಕೈಗೊಳ್ಳಬಹುದಾಗಿದೆ
Restricted  Holidays in January
01 ಜನವರಿ 2021 (ಶುಕ್ರವಾರ) ಹೊಸ ವರ್ಷದ ಮೊದಲ ದಿನ.
13 ಜನವರಿ 2021 (ಬುಧವಾರ) ಲೋಹ್ರಿ ಹಬ್ಬ
14 ಜನವರಿ 2021 (ಗುರುವಾರ) ಪೊಂಗಲ್ ಹಾಗೂ ಮಕರ ಸಂಕ್ರಾಂತಿ.
20 ಜನವರಿ 2021 (ಬುಧವಾರ) ಗುರು ಗೋವಿಂದ್ ಸಿಂಗ್ ಜಯಂತಿ.

2.ಫೆಬ್ರವರಿ 
ಫೆಬ್ರುವರಿಯಲ್ಲಿ ಯಾವುದೇ ಗ್ಯಾಜಿಟೆಡ್ ರಜಾದಿನಗಳಿಲ್ಲ. ಒಂದು ವೇಳೆ ನೀವು ಸರ್ಕಾರಿ ನೌಕರರಾಗಿದ್ದರೆ, Restricted  Holidays ನಿಮ್ಮ ಕೆಲಸಕ್ಕೆ ಬರಲಿವೆ.
Restricted  Holidays in February
16 ಫೆಬ್ರುವರಿ 2021 (ಮಂಗಳವಾರ) ವಸಂತ ಪಂಚಮಿ
19ಫೆಬ್ರುವರಿ 2021 (ಶುಕ್ರವಾರ) ಶಿವಾಜಿ ಜಯಂತಿ.
26 ಫೆಬ್ರುವರಿ 2021 (ಶುಕ್ರವಾರ) ಹಜರತ್ ಅಲಿ ಜನ್ಮದಿನ
27ಫೆಬ್ರುವರಿ 2021 (ಶನಿವಾರ) ಗುರು ರವಿದಾಸ ಜಯಂತಿ

3.ಮಾರ್ಚ್
ಮಾರ್ಚ್ ತಿಂಗಳಿನಲ್ಲಿ ಎರಡು ಗ್ಯಾಜಿಟೆಡ್ ರಜಾದಿನಗಳಿವೆ. ಮಾರ್ಚ್ 11-ಗುರುವಾರ ಮಹಾಶಿವರಾತ್ರಿಯ ಅಂಗವಾಗಿ ರಜೆ ಇದ್ದರೆ, ಮಾರ್ಚ್ 28 ರವಿವಾರ ಹೋಳಿ ಹಬ್ಬದ ಪ್ರಯುಕ್ತ ರಜಾದಿನವಿದೆ.
Restricted Holidays in March
08 ಮಾರ್ಚ್ 2021 (ಸೋಮವಾರ ) ಮಹರ್ಷಿ ದಯಾನಂದ್ ಸರಸ್ವತಿ ಜಯಂತಿ.
28 ಮಾರ್ಚ್ 2021 (ರವಿವಾರ ) ಹೋಳಿ ದಹನ

4.ಏಪ್ರಿಲ್ 
ಏಪ್ರಿಲ್ ತಿಂಗಳಿನಲ್ಲಿ ನಿಮಗೆ ಹಲವು ರಜಾದಿನಗಳು ಸಿಗಲಿವೆ. ಏಪ್ರಿಲ್ 2 ರಂದು ಗುಡ್ ಫ್ರೈಡೇ , 14 ಏಪ್ರಿಲ್-ಬುಧವಾರ -ಅಂಬೇಡ್ಕರ್ ಜಯಂತಿ ಹಾಗೂ 21 ಏಪ್ರಿಲ್- ಬುಧವಾರ ರಾಮನವಮಿ ಇದೆ.
Restricted  Holidays in April
4 ಏಪ್ರಿಲ್ 2021 (ರವಿವಾರ ) ಈಸ್ಟರ್ ಡೇ
13 ಏಪ್ರಿಲ್ 2021 ( ಮಂಗಳವಾರ) ಚಿತ್ರ ಸುಖಳದಿ
14 ಏಪ್ರಿಲ್ 2021 (ಬುಧವಾರ )को ಬೈಸಾಖಿ

5.ಮೇ 
ಈ ತಿಂಗಳಿನಲ್ಲಿ ಎರಡು ರಜಾದಿನಗಳಿವೆ. ಮೇ 12 ರಂದು ಇದು ಬುಧವಾರ ಈದ್-ಉಲ್-ಫಿತರ್ ಆಗಿದ್ದರೆ, ಮೇ 26 ರಂದು ಬುಧವಾರ ಬುದ್ಧ ಪೂರ್ಣಿಮಾ ಇದೆ.

6. ಜೂನ್ 
ಜೂನ್ ತಿಂಗಳಲ್ಲಿ ಯಾವುದೇ ಗೆಜೆಟೆಡ್ ರಜಾದಿನಗಳಿಲ್ಲ ಆದರೆ ಈ ತಿಂಗಳ ಪ್ರಿವಿಲೇಜ್ ಅಥವಾ ಕ್ಯಾಶುಯಲ್ ರಜೆಯೊಂದಿಗೆ ನೀವು ಪ್ಲಾನ್ ಮಾಡಬಹುದು.

ಇದನ್ನು ಓದಿ- ಪ್ರಪಂಚದ ಈ 5 ದೇಶಗಳ ಜನರಿಗೆ ಕತ್ತಲೆ ಗೊತ್ತೇ ಇಲ್ವಂತೆ, 24 ಗಂಟೆ ಇಲ್ಲಿ ಸೂರ್ಯ ಬೆಳಗುತ್ತಾನಂತೆ

7. ಜುಲೈ
ಜುಲೈ ತಿಂಗಳಲ್ಲಿ ಕೇವಲ ಒಂದು ರಜಾದಿನವಿದೆ. ಜುಲೈ 21 ರಂದು (ಬುಧವಾರ), ಈದ್-ಉಲ್ ಜುಹಾ (ಬಕ್ರಿಡ್) ಹಬ್ಬವಾಗಿದೆ. ಈ ತಿಂಗಳ Restricted  Holidays ಇನ್ನೂ ಘೋಷಿಸಲಾಗಿಲ್ಲ.

8  ಆಗಸ್ಟ್ 
ಆಗಸ್ಟ್ ತಿಂಗಳು ಹಬ್ಬಗಳು ಮತ್ತು ರಜಾದಿನಗಳನ್ನು ಹೊಂದಿದೆ ಆದರೆ ಇವು ವಾರಾಂತ್ಯದಲ್ಲಿ ಬರುತ್ತವೆ.  ಈ ತಿಂಗಳಿನಲ್ಲಿ ದೀರ್ಘ ರಜಾ ಅವಧಿಯನ್ನು ತೆಗೆದುಕೊಳ್ಳಲು ಯೋಜನೆ ರೂಪಿಸಬೇಕು.
Holidays in August 2021
15 ಆಗಸ್ಟ್-ರವಿವಾರ ಸ್ವಾತಂತ್ರ್ಯ ದಿನಾಚರಣೆ.
16 ಆಗಸ್ಟ್ - ಸೋಮವಾರ ಪಾರಸಿ ಹೊಸ ವರ್ಷಾರಂಭ
19 ಆಗಸ್ಟ್ ಗುರುವಾರ ಮೊಹರ್ರಂ
21 ಆಗಸ್ಟ್ ಶನಿವಾರ ಓಣಂ
22 ಆಗಸ್ಟ್ ರವಿವಾರ ರಕ್ಷಾಬಂಧನ್
30 ಆಗಸ್ಟ್ ಸೋಮವಾರ ಜನ್ಮಾಷ್ಟಮಿ

9.ಸೆಪ್ಟೆಂಬರ್
ಸೆಪ್ಟೆಂಬರ್ ತಿಂಗಳಿನಲ್ಲಿ ಯಾವುದೇ ಗ್ಯಾಜಿಟೆಡ್ ರಜಾದಿನಗಳಿಲ್ಲ. ಈ ತಿಂಗಳಲ್ಲಿ ಕೇವಲ ಒಂದು ರಜಾದಿನವಿದ್ದು, ಸೆಪ್ಟೆಂಬರ್ 10 ರಂದು ಶುಕ್ರವಾರ ಗಣೇಶ ಚತುರ್ಥಿ ಇದೆ.

10.ಅಕ್ಟೋಬರ್
ಅಕ್ಟೋಬರ್ ತಿಂಗಳಿನಲ್ಲಿ 02 ಅಕ್ಟೋಬರ್ ಶನಿವಾರ ಗಾಂಧಿ ಜಯಂತಿ, 7 ಅಕ್ಟೋಬರ್ ಮಹಾರಾಜ ಉಗ್ರಸೇನ್ ಜಯಂತಿ, 15 ಅಕ್ಟೋಬರ್ ಶುಕ್ರವಾರ ದಸರಾ ಹಬ್ಬ, 19 ಅಕ್ಟೋಬರ್ ಈದ್ ಮಿಲಾದ್ ಹಾಗೂ 20 ಅಕ್ಟೋಬರ್ ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿ.
Restricted  Holidays in October
12 ಅಕ್ಟೋಬರ್ ಮಂಗಳವಾರ ಮಹಾ ಸಪ್ತಮಿ
14 ಅಕ್ಟೋಬರ್ ಗುರುವಾರ ಮಹಾ ನವಮಿ
24 ಅಕ್ಟೋಬರ್ ರವಿವಾರ ಕಾರವಾ ಚೌತ್

11.ನವೆಂಬರ್ 
ನವೆಂಬರ್ ತಿಂಗಳಿನಲ್ಲಿ ಹಿಂದೂಗಳ ಅತಿ ದೊಡ್ಡ ಹಬ್ಬ ದೀಪಾವಳಿ ಬರುತ್ತದೆ. ನವೆಂಬರ್ 4 ಗುರುವಾರದಂದು ದೀಪಾವಳಿ ಹಬ್ಬವಿದೆ. ಬಳಿಕ ನವೆಂಬರ್ 10 ರಂದು ಛಟ್ ಪೂಜಾ ಆಚರಿಸಲಾಗುತ್ತದೆ. ಈ ಎರಡೂ ಹಬ್ಬಗಳಂದು ಟ್ರೈನ್ ಟಿಕೆಟ್ ಸಿಗುವುದು ಸ್ವಲ್ಪ ಕಷ್ಟ.
Restricted  Holidays in November
2 ನವೆಂಬರ್ ಬುಧವಾರ ಧನತ್ರಯೋದಶಿ 
3 ನವೆಂಬರ್ ಗುರುವಾರ ನರಕ ಚತುರ್ದಶಿ
5 ನವೆಂಬರ್ ಶುಕ್ರವಾರ ಗೋವರ್ಧನ್ ಪೂಜಾ
6 ನವೆಂಬರ್ ಶನಿವಾರ ಭಾಯಿದೂಜ್
20 ನವೆಂಬರ್ ಬುಧವಾರ ಗುರು ತೆಗ್ ಬಹಾದೂರ್ ಹುತಾತ್ಮ ದಿನ

12.ಡಿಸೆಂಬರ್
ಡಿಸೆಂಬರ್ ತಿಂಗಳಿನಲ್ಲಿ 24 ಡಿಸೆಂಬರ್ ಶನಿವಾರ ಕ್ರಿಸ್ಮಸ್ ಈವ್ ಹಾಗೂ ಡಿಸೆಂಬರ್ 25 ಭಾನುವಾರ ಮೇರಿ ಕ್ರಿಸ್ಮಸ್ ಆಚರಿಸಲಾಗುತ್ತದೆ.

Trending News