ALERT...! ನೀವೂ Income Tax Fake Noticeಗೆ ಬಲಿಯಾಗಿದ್ದೀರಾ? ಹೀಗೆ ಪರಿಶೀಲಿಸಿ

ಇತ್ತೀಚೆಗೆ ಇಂತಹ ಅನೇಕ ಪ್ರಕರಣಗಳು ನಡೆದಿದ್ದು, ಇದರಲ್ಲಿ ಕಳ್ಳರು ನಕಲಿ ನೋಟಿಸ್ ಕಳುಹಿಸುವ ಮೂಲಕ ತೆರಿಗೆದಾರರನ್ನು ವಂಚಿಸಲು ಯತ್ನಿಸಿದ್ದಾರೆ.  

Last Updated : Dec 9, 2020, 07:05 PM IST
  • ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದು ಹೊಸ ವಿಷಯವೇನಲ್ಲ.
  • ಆದರೆ, ಈ ನೋಟಿಸ್ ಗಳು ನಕಲಿ ನೋಟಿಸ್ ಗಳಾಗಿವೆಯೇ? ಅಥವಾ ಅಸಲಿ ನೋಟಿಸ್ ಗಳಾಗಿವೆ
  • ಪರಿಶೀಲಿಸಲು ಈ ವಿಧಾನ ಅನುಸರಿಸಿ
ALERT...! ನೀವೂ Income Tax Fake Noticeಗೆ ಬಲಿಯಾಗಿದ್ದೀರಾ? ಹೀಗೆ ಪರಿಶೀಲಿಸಿ title=

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದು ಹೊಸ ವಿಷಯವೇನಲ್ಲ. ಆದರೆ, ಈ ನೋಟಿಸ್ ಗಳು ನಕಲಿ ನೋಟಿಸ್ ಗಳಾಗಿವೆಯೇ? ಇತ್ತೀಚಿಗೆ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪ್ರಕರಣಗಳಲ್ಲಿ ನಕಲಿ ನೋಟಿಸ್ ಗಳನ್ನು ಕಳುಹಿಸುವ ಮೂಲಕ ವಂಚಕರು ತೆರಿಗೆದಾರರಿಗೆ ವಂಚಿಸಲು ಪ್ರಯತ್ನಿಸಿದ್ದಾರೆ. ಇಂತಹುದರಲ್ಲಿ ಒಂದು ವೇಳೆ ನಿಮಗೂ ಕೂಡ ಆದಾಯ ತೆರಿಗೆ ಇಲಾಖೆಯ ನೋಟಿಸ್ ಬಂದಿದ್ದರೆ ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ, ಈಗ ನೀವು ಸುಲಭವಾಗಿ ಮನೆಯಲ್ಲಿಯೇ ಕುಳಿತು ಈ ನೋಟಿಸ್ ಅಸಲಿಯಾಗಿದೆಯೋ ಅಧವಾ ನಕಲಿಯಗಿದೆಯೋ ಎಂಬುದನ್ನು ಪತ್ತೆಹಚ್ಚಬಹುದು.

ಐಟಿ ವಿಭಾಗದಿಂದ ನೋಟಿಸ್ ಬಂದರೆ ಹೆದರಬೇಡಿ
ಆದಾಯ ತರಿಗೆ ರಿಟರ್ನ್ ತುಂಬುವ ವೇಳೆ ತಪ್ಪುಗಳಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಆದಾಯ ತೆರಿಗೆ (Income Tax) ಇಲಾಖೆ ತೆರಿಗೆ ಪಾವತಿದಾರರಿಗೆ ಇಂಟಿಮೇಶನ್ ಕಳುಹಿಸುತ್ತದೆ. ಆದರೆ, ಕೆಲ ಜನರಿಗೆ ಆದಾಯ ತೆರಿಗೆ ಇಲಾಖೆಯ ನೋಟಿಸ್ ಕೂಡ ಬರುತ್ತದೆ. ರಿಟರ್ನ್ ದಾಖಲಿಸುವಾಗ ತಪ್ಪು ಮಾಡಿರುವ ಅಥವಾ ನಿಗದಿತ ಮೊತ್ತಕ್ಕಿಂತ ಕಡಿಮೆ ತೆರಿಗೆ ಪಾವತಿಸಿದ ಜನರಿಗೆ ಈ ನೋಟಿಸ್ ಬರುತ್ತದೆ.

ಇದನ್ನು ಓದಿ-ನೀವು ಇನ್ನೂ ಐಟಿ ರಿಟರ್ನ್ಸ ಸಲ್ಲಿಸಿಲ್ಲವೇ? ಹಾಗಿದ್ದಲ್ಲಿ ಇಲ್ಲಿದೆ ಮಹತ್ವದ ಮಾಹಿತಿ

ಈ 10 ಸಂದರ್ಭಗಳಲ್ಲಿ ನೋಟಿಸ್ ಕಳುಹಿಸಲಾಗುತ್ತದೆ
1. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಲ್ಲಿ ವಿಳಂಬ
2. ಷೇರುಗಳಿಂದ ಎಲ್‌ಟಿಸಿಜಿಯ ತಪ್ಪಾದ ವರದಿ
3. ಫಾರ್ಮ್ 26 ಎಎಸ್‌ನೊಂದಿಗೆ ಟಿಡಿಎಸ್ ಹಕ್ಕು ಹೊಂದಿಕೆಯಾಗುವುದಿಲ್ಲ
4. ಸರಿಯಾದ ಆದಾಯವನ್ನು ಬಹಿರಂಗಪಡಿಸದಿರುವುದು
5. ಸಂಗಾತಿಯ ಹೆಸರಿನಲ್ಲಿ ಮಾಡಿದ ಹೂಡಿಕೆಯನ್ನು ಬಹಿರಂಗಪಡಿಸದಿರುವುದು.
6. ತಪ್ಪಾದ ಆದಾಯವನ್ನು ಸಲ್ಲಿಸುವುದು
7. ಅತಿ ಹೆಚ್ಚು ಮೌಲ್ಯದ ವ್ಯವಹಾರಗಳು
8. ಪರಿಶೀಲನೆಗಾಗಿ ನಿಮ್ಮ ಆದಾಯವನ್ನು ಆಯ್ದ ಸಂದರ್ಭದಲ್ಲಿ
9. ತೆರಿಗೆ ಬಾಕಿ ಉಳಿಸಿಕೊಂಡಾಗ
10. ಹಿಂದಿನ ವರ್ಷಗಳ ತೆರಿಗೆ ಮರೆಮಾಚಿದ ಸಂದರ್ಭದಲ್ಲಿ

ಆದಾಯ ತೆರಿಗೆ ಇಲಾಖೆಯ ಅಧಿಕೃತ ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿ
ಅನೇಕ ಬಾರಿ, ವಂಚಕರು ಆದಾಯ ತೆರಿಗೆ ನೋಟಿಸ್‌ನ ಜ್ಞಾನದ ಕೊರತೆಯ ಲಾಭವನ್ನು ತೆರಿಗೆದಾರರಿಂದ ಪಡೆದುಕೊಳ್ಳುತ್ತಾರೆ. ವಂಚಕರು ಸಾರ್ವಜನಿಕರಿಗೆ ಕರೆ ಮಾಡಿ ಮೇಲ್ ಮಾಡುವ ಮೂಲಕ ಮೋಸ ಮಾಡುತ್ತಾರೆ. ಆದರೆ ಈಗ ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು.

ಈ ವಿಧಾನ ಅನುಸರಿಸಿ
- ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ www.incometaxindiaefiling.gov.in ಗೆ ಭೇಟಿ ನೀಡಿ.
 - ಇದರ ನಂತರ, ನೀವು ತ್ವರಿತ ಲಿಂಕ್‌ಗಳ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ. 
-ಇಲ್ಲಿ  ‘Authenticate’ ಅಡಿಯಲ್ಲಿ, ನೀವು ‘Notice/Order Issued By ITD’ ಕ್ಲಿಕ್ ಮಾಡಿ. 
- ನೋಟಿಸ್ ನಲ್ಲಿ ಕಂಡುಬರುವ  ಮೌಲ್ಯಮಾಪನ ವರ್ಷ, ತಿಂಗಳು ಮತ್ತು ಡಾಕ್ಯುಮೆಂಟ್ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. 
- ಇದರ ನಂತರ, ‘ಕ್ಯಾಪ್ಚಾ ಕೋಡ್’ ನಮೂದಿಸಿ ಮತ್ತು ಸಲ್ಲಿಸು ಬಟನ್ ಒತ್ತಿರಿ.

ಇದನ್ನು ಓದಿ-Form 26AS ನಲ್ಲಿ ಬದಲಾವಣೆ ಮಾಡಿದ ಆದಾಯ ತೆರಿಗೆ ಇಲಾಖೆ, ತೆರಿಗೆ ಪಾವತಿದಾರರಿಗೆ ಲಾಭ

ನೋಟಿಸ್ ಅಸಲಿಯಾಗಿದ್ದರೆ ಸಂದೇಶ ಬರುತ್ತದೆ
ಸಬ್ಮಿಟ್ ಗುಂಡಿಯನ್ನು ಒತ್ತಿದ ಬಳಿಕ ಸ್ಕ್ರೀನ್ ನಲ್ಲಿ  ‘Yes, Notice is valid and issued by Income Tax Authority’ ಎಂದು ಬರೆದ ಸಂದೇಶವು ಬಿತ್ತರಗೊಳ್ಳುತ್ತದೆ. ನಿಮ್ಮ ನೋಟಿಸ್ ನಿಜವಾದಾಗ ಮಾತ್ರ ಇದು ಬರುತ್ತದೆ.

ನಕಲಿ ನೋಟಿಸ್ ಮಾಹಿತಿ ಸಿಗಲಿದೆ
ಒಂದು ವೇಳೆ ನಿಮ್ಮ ಸ್ಕ್ರೀನ್ ನಲ್ಲಿ ಈ ಸಂದೇಶ ಬಿತ್ತರಗೊಳ್ಳದೆ ಹೋದಲ್ಲಿ, ನಿಮಗೆ ಬಂದ ನೋಟಿಸ್ ನಕಲಿಯಾಗಿದೆ ಎಂದು ಭಾವಿಸಿ. ಅಂದರೆ, ನಕಲಿ ನೋಟಿಸ್ ನೀಡುವ ಮೂಲಕ ನಿಮ್ಮನ್ನು ವಂಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಭಾವಿಸಿ. ಹೀಗಾಗಿ ನೋಟಿಸ್ ಬಂದ ಬಳಿಕ ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಪರಿಶೀಲಿಸಲು ಮರೆಯದಿರಿ.

Trending News