ಬೆಳಗಾವಿ: ಮೈಲಾರದಿಂದ ನೇರವಾಗಿ ಬೆಳಗಾವಿಗೆ ಆಗಮಿಸಿದ್ದ ಶಿವಕುಮಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು. ಈ ಹಿಂದೆ ಮೈಲಾರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದೆ. ಆದರೆ ಅಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋಗುವುದು ತಪ್ಪು ಎಂದು ಕಾರ್ಯಕರ್ತರು ತಿಳಿಸಿದರು. ಜೊತೆಗೆ ಅವರು ಅದಕ್ಕಾಗಿ ಹರಕೆಯನ್ನೂ ಹೊತ್ತಿದ್ದರು. ಹಾಗಾಗಿ ನಾನು ಅಲ್ಲಿಗೆ ತೆರಳಿ ಮೈಲಾರ ಲಿಂಗೇಶ್ವರನಲ್ಲಿ ಕ್ಷಮೆಯಾಚಿಸಿದ್ದೇನೆ. ಜೊತೆಗೆ ರಾಜ್ಯದ ಜನರಿಗೆ ಆರೋಗ್ಯ, ಸಂಪತ್ತು ಕೊಡು ಎಂದು ಕೇಳಿದ್ದೇನೆ ಎಂದು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಉಪಚುನಾವಣೆ(Lok Sabha by Election) ಕುರಿತು ಮಾತನಾಡಿದ ಅವರು, ನಾವು ಎರಡು ಹೆಸರನ್ನು ಅಂತಿಮಗೊಳಿಸಿ ಇಟ್ಟುಕೊಂಡಿದ್ದೇವೆ. ಲೋಕಸಭಾ ಉಪಚುನಾವಣೆ ಸಂಬಂಧ ಈಗಾಗಲೆ ಸಭೆ ನಡೆಸಿ ಚರ್ಚಿಸಿದ್ದೇವೆ. ಅಗತ್ಯವಾದರೆ ಇನ್ನೂ ಒಂದೆರಡು ಸಭೆ ನಡೆಸುತ್ತೇವೆ. ಬಹಳ ಜನ ಆಕಾಂಕ್ಷಿಗಳಿದ್ದಾರೆ. ನಾವು ಎರಡು ಹೆಸರು ಅಂತಿಮಗೊಳಿಸಿ ಇಟ್ಟುಕೊಂಡಿದ್ದೇವೆ ಎಂದರು.
'ಎಚ್ಡಿಕೆಯವರನ್ನ ಸಿಎಂ ಮಾಡಿದ್ದು ಸಿದ್ದು ಅಲ್ಲ'
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಹೆಸರೂ ಕೇಳಿ ಬರುತ್ತಿರುವ ಕುರಿತು ಪ್ರಶ್ನಿಸಿದಾಗ, ಸತೀಶ್ ಜಾರಕಿಹೊಳಿ ಕೇವಲ ಬೆಳಗಾವಿ ಜಿಲ್ಲೆಗಷ್ಟೇ ಅಲ್ಲ, ಈ ಭಾಗದ ಪ್ರಮುಖ ನಾಯಕರು ಸಿಎಂಇಬ್ರಾಹಿಂ ಅವರೊಂದಿಗೆ ಈಗಾಗಲೆ ಮಾತನಾಡಿದ್ದೇನೆ. ಅವರ ನೋವುಗಳನ್ನು ತೋಡಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ನಂತರ 2 -3 ಬಾರಿ ಶಾಸಕರನ್ನಾಗಿ ಮಾಡಿದ್ದೇವೆ. ಮಂತ್ರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಡಿ.ಕೆ.ಶಿವಕುಮಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಗ್ರಾ. ಪಂ. ಚುನಾವಣೆ ಪ್ರಚಾರಕ್ಕಿಳಿದ 'ಪುಟ್ಟಗೌರಿ' ಖ್ಯಾತಿ ರಂಜನಿ ರಾಘವನ್..!