ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ಇಬ್ಬರು ಆಮ್ ಆದ್ಮಿ ಪಕ್ಷದ ಸಂಸದರು ಇಂದು ಸಂಸತ್ತಿನ ಕೇಂದ್ರ ಸಭಾಂಗಣದೊಳಗೆ ಘೋಷಣೆಗಳನ್ನು ಕೂಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 96ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸುತ್ತಿದ್ದಾಗ ಈ ಗದ್ದಲ ಭುಗಿಲೆದ್ದಿತು.
'ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ': ರೈತರಿಗೆ ಪ್ರಧಾನಿ ಮೋದಿ ಮನವಿ
ಎಎಪಿ ಸಂಸದ ಸಂಜಯ್ ಸಿಂಗ್ ಅವರು ಮತ್ತು ಅವರ ಪಕ್ಷದ ಸಹೋದ್ಯೋಗಿ ಭಗವತ್ ಮನ್ ಅವರು ಕೃಷಿ ಕಾನೂನುಗಳ ವಿರುದ್ಧ ಸೆಂಟ್ರಲ್ ಹಾಲ್ ಒಳಗೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯಲ್ಲಿ ಪೋಸ್ಟರ್ಗಳನ್ನು ಎತ್ತಿ ಹಿಡಿದಿರುವ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.ರೈತ ವಿರೋಧಿ ಕಪ್ಪು ಕಾನೂನುಗಳನ್ನು' ಹಿಂತೆಗೆದುಕೊಳ್ಳಿ ಎಂದು ಕೂಗುತ್ತಾರೆ.
ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದ ವೇಳೆ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲು ಕರೆ
बहरे कानो को सुनाने के लिये तानाशाह सरकार को जगाने के लिये संसद में प्रधानमंत्री के सामने किसानो के हक़ में हंगामा “किसान विरोधी काला क़ानून वापस लो” अन्नदाताओं को आतंकवादी कहना बंद करो। pic.twitter.com/X8MF2pxnad
— Sanjay Singh AAP (@SanjayAzadSln) December 25, 2020
ಸಂಸತ್ತಿನ ಅಧಿವೇಶನವನ್ನು ಕರೆಯಲಾಗುತ್ತಿಲ್ಲ. ಪ್ರಧಾನ ಮಂತ್ರಿಯೊಂದಿಗೆ ಮಾತನಾಡಲು ಅಥವಾ ನಮ್ಮ ವಿಷಯಗಳನ್ನು ಅವರಿಗೆ ತಿಳಿಸಲು ನಮಗೆ ಅವಕಾಶ ನೀಡುತ್ತಿಲ್ಲ. ಇಂದು ಕೇಂದ್ರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ, ಆಮ್ ಆದ್ಮಿ ಪಕ್ಷದ ಸಂಸದ ಭಗವತ್ ಮನ್ ಮತ್ತು ನಾನು ರೈತ ವಿರೋಧಿ ಕಾನೂನು' ಹಿಂಪಡೆಯಲು ಮನವಿ ಮಾಡಿದ್ದೇವೆ.ಲಕ್ಷಾಂತರ ರೈತರು ಈ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಹೊಸ ಕೃಷಿ ಕಾನೂನುಗಳು ಕೈಗಾರಿಕೋದ್ಯಮಿಗಳ ಪರವಾಗಿವೆ ಮತ್ತು ಅವು ರೈತರ ವಿರುದ್ಧ ಇವೆ. ನಾವು ಆಂದೋಲನವನ್ನು ಬೆಂಬಲಿಸುತ್ತೇವೆ.ಈ ಮೂರು 'ಕಪ್ಪು ಕಾನೂನುಗಳನ್ನು' ಹಿಂತೆಗೆದುಕೊಳ್ಳಿ ಎಂದು ಪ್ರಧಾನಮಂತ್ರಿಯವರಿಗೆ ನಾವು ಮನವಿ ಮಾಡುತ್ತೇವೆ' ಎಂದು ಸಂಜಯ್ ಸಿಂಗ್ ತಿಳಿಸಿದರು.
'ಕೇಂದ್ರ ಸರ್ಕಾರವು ಸ್ಪಷ್ಟ ಪ್ರಸ್ತಾವನೆಯನ್ನು ಮಂಡಿಸಿದರೆ ಮಾತುಕತೆಗೆ ಸಿದ್ಧ'
ಪಂಜಾಬ್‌ನ ಸಂಗ್ರೂರ್‌ನ ಸಂಸದ ಶ್ರೀ ಮನ್ ಹಿಂದಿಯಲ್ಲಿ ಟ್ವೀಟ್ ಮಾಡಿ 'ಮೋದಿ ಸರ್ಕಾರದ ಕಣ್ಣುಗಳು ಮತ್ತು ಕಿವಿಗಳನ್ನು ತೆರೆಯಲು ರೈತ ಪರ ಘೋಷಣೆಗಳು ಕೇಂದ್ರ ಸಭಾಂಗಣದಲ್ಲಿ ಪ್ರತಿಧ್ವನಿಸಿದವು ಎಂದು ಹೇಳಿದರು.ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಕೃಷಿ ಮಸೂದೆಗಳನ್ನು ತಡೆಯಲು ಪ್ರಯತ್ನಿಸಿದ ಪ್ರತಿಪಕ್ಷಗಳು ಈ ಹಿಂದೆ ಮಸೂದೆಗಳಿಗೆ ಸಹಿ ಹಾಕದಂತೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಮನವಿ ಮಾಡಿದ್ದವು. ಮಸೂದೆಗಳನ್ನು ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ರಾಷ್ಟ್ರಪತಿಗಳು ಈ ಮೂರು ಮಸೂದೆಗಳಿಗೆ ತಮ್ಮ ಒಪ್ಪಿಗೆಯನ್ನು ನೀಡಿದ್ದರು.