Indian Railways: ಇನ್ಮುಂದೆ ಕೇವಲ ಚಾಟ್ ಮಾಡಿ IRCTC ಟಿಕೆಟ್ ಕಾಯ್ದಿರಿಸಿ... ಹೇಗೆ? ಇಲ್ಲಿದೆ ವಿವರ

Indian Railwaysನಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಇದೀಗ ಮತ್ತಷ್ಟು ಸುಲಭವಾಗಲಿದೆ. ಏಕೆಂದರೆ ರೈಲು ಪ್ರಯಾಣಿಕರಿಗೆ ಆನ್ಲೈನ್ ಟಿಕೆಟ್ ಬುಕಿಂಗ್ ಸೌಕರ್ಯ ಒದಗಿಸುವ IRCTC, ತನ್ನ ಇ-ಟಿಕೆಟಿಂಗ್ ವೆಬ್ ಸೈಟ್ ಹಾಗೂ ಆಪ್ ಅನ್ನು ಉನ್ನತ ದರ್ಜೆಗೆ ಕೊಂಡೊಯ್ಯಲಿದೆ.  

Last Updated : Dec 26, 2020, 12:17 PM IST
  • ತನ್ನ ವೆಬ್ಸೈಟ್ ಹಾಗೂ ಆಪ್ ಆನ್ನು ಉನ್ನದ ದರ್ಜೆಗೆ ಏರಿಸಲು ಮುಂದಾದ Indian Railways.
  • ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಜನಪರವಾಗಿಸುವ ಉದ್ದೇಶ.
  • IRCTC ರೈಲಿನ ಮೂಲಕ ಪ್ರಯಾಣ ಬೆಳೆಸುವವರಿಗೆ ಈ ಸೌಕರ್ಯ ಒದಗಿಸುತ್ತದೆ.
Indian Railways: ಇನ್ಮುಂದೆ ಕೇವಲ ಚಾಟ್ ಮಾಡಿ IRCTC ಟಿಕೆಟ್ ಕಾಯ್ದಿರಿಸಿ... ಹೇಗೆ? ಇಲ್ಲಿದೆ ವಿವರ title=
Indian Railways (File Photo)

ನವದೆಹಲಿ: Indian Railwaysನಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಇದೀಗ ಮತ್ತಷ್ಟು ಸುಲಭವಾಗಲಿದೆ. ಏಕೆಂದರೆ ರೈಲು ಪ್ರಯಾಣಿಕರಿಗೆ ಆನ್ಲೈನ್ ಟಿಕೆಟ್ ಬುಕಿಂಗ್ ಸೌಕರ್ಯ ಒದಗಿಸುವ IRCTC, ತನ್ನ ಇ-ಟಿಕೆಟಿಂಗ್ ವೆಬ್ ಸೈಟ್ ಹಾಗೂ ಆಪ್ ಅನ್ನು ಉನ್ನತ ದರ್ಜೆಗೆ ಕೊಂಡೊಯ್ಯಲಿದೆ. ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಮಾಡುವಾಗ ಮತ್ತಷ್ಟು ಅನುಕೂಲ ಮಾಡಿಕೊಡಲು ಹಲವು ಬದಲಾವಣೆಗಳನ್ನು ಮಾಡಲು IRCTC ಮುಂದಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ರೇಲ್ವೆ ಸಚಿವಾಲಯ, IRCTC ವೆಬ್ ಸೈಟ್ ಹಾಗೂ ಆಪ್ ಅಪ್ಗ್ರೇಡ್ ಆದ ಬಳಿಕ ಯಾತ್ರಿಗಳು ಮೊದಲಿಗಿಂತಲೂ ಅಧಿಕ ವೇಗದಲ್ಲಿ ಹಾಗೂ ಯಾವುದೇ ರೀತಿಯ ಅಡೆತಡೆಗಳಿಲ್ಲದೆ ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು ಎಂದಿದೆ.

ಇದನ್ನು ಓದಿ- ಈಗ ವಾಟ್ಸಾಪ್‌ನಲ್ಲೇ ಲಭ್ಯವಾಗಲಿದೆ ರೈಲಿನ PNR ಸ್ಥಿತಿ, ಟ್ರೈನ್ ಲೈವ್ ಲೋಕೇಶನ್

ಇದಕ್ಕೆ ಸಂಬಧಿಸಿದಂತೆ ಮಾತನಾಡಿರುವ ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯಲ್, ರಾಷ್ಟ್ರೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಹೆಚ್ಚಿನ ಸೌಕರ್ಯ ಹಾಗೂ ಸರಳ ಡಿಸೈನ್ ಜೊತೆಗೆ ತನ್ನ ಇ-ಟಿಕೆಟಿಂಗ್ ವೆಬ್ ಸೈಟ್ ನ ಯುಸರ್ ಪರ್ಸನಲೈಸೆಶನ್ ಹಾಗೂ ಸೌಕರ್ಯಗಳನ್ನು ಹೆಚ್ಚಿಸಲು ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ. ಇದಕ್ಕೂ ಮೊದಲು ಅವರು, ಇ-ಟಿಕೆಟಿಂಗ್ ವ್ಯವಸ್ಥೆಯಲ್ಲಿ ಮಾಡಲಾಗುತ್ತಿರುವ ಬದಲಾವಣೆಗಳ ಸಮೀಕ್ಷೆ ನಡೆಸಿದ್ದಾರೆ.

ಇದನ್ನು ಓದಿ- ಇನ್ನು ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಯಲ್ಲಿ ಮಾತ್ರ ಸಿಗಲಿದೆ ಚಹಾ

ಇ-ಟಿಕೆಟಿಂಗ್ ವೆಬ್‌ಸೈಟ್ ಪ್ರಯಾಣಿಕರಿಗೆ ಅವರ ರೈಲು ಪ್ರಯಾಣಕ್ಕೆ ಸಂಪೂರ್ಣ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸಚಿವರು ಹೇಳಿದ್ದಾರೆ. ರೈಲ್ವೆ ಟಿಕೆಟಿಂಗ್ ವೆಬ್‌ಸೈಟ್ ಇಂಡಿಯನ್ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಆನ್‌ಲೈನ್ ಕಾಯ್ದಿರಿಸುವ ಸೌಕರ್ಯವನ್ನು ಒದಗಿಸುತ್ತದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, 2014 ರಿಂದ ಟಿಕೆಟ್ ಕಾಯ್ದಿರಿಸುವಿಕೆಯೊಂದಿಗೆ ಪ್ರಯಾಣಿಕರ ಅನುಕೂಲವನ್ನು ಸುಧಾರಿಸಲು ಹೊಸದಾಗಿ ಒತ್ತು ನೀಡಲಾಗುತ್ತಿದೆ. ಐಆರ್ಸಿಟಿಸಿ ವೆಬ್‌ಸೈಟ್ ರೈಲಿನ ಮೂಲಕ ಪ್ರಯಾಣ ಬೆಳೆಸಲು ಮುಂದಾಗುವ ಯಾತ್ರಿಗಳಿಗೆ  ಮೊದಲ ಲಿಂಕ್ ಆಗಿದೆ ಮತ್ತು ಈ ಅನುಭವವು ಅನುಕೂಲಕರವಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ- ಟ್ರೇನ್ ಟಿಕೆಟ್ ಬುಕ್ಕಿಂಗ್ ಕುರಿತು ಹೊಸ ನಿಯಮ ಜಾರಿಗೊಳಿಸಿದೆ IRCTC, ತಪ್ಪದೆ ತಿಳಿದುಕೊಳ್ಳಿ

Digital Indiaಗೆ ಒತ್ತು
ಹೊಸ Digital India ಉಪಕ್ರಮದ ಅಡಿಯಲ್ಲಿ, ಹೆಚ್ಚು ಹೆಚ್ಚು ಜನರು ಇದೀಗ ಬುಕಿಂಗ್ ಕೌಂಟರ್‌ಗಳಿಗೆ ಹೋಗುವ ಬದಲು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವತ್ತ ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ತನ್ನನ್ನು ನಿರಂತರವಾಗಿ ಅಪ್‌ಗ್ರೇಡ್ ಮಾಡುವ ಪ್ರಯತ್ನ ದ್ವಿಗುಣಗೊಳಿಸುವ ಅವಶ್ಯಕತೆ ಇದೆ.

Cris ಕೂಡ ಶಾಮೀಲು
ಈ ಸಂದರ್ಭದಲ್ಲಿ ವೆಬ್ ಸೈಟ್ ಹಾಗೂ ಆಪ್ ನ ಕಾರ್ಯವಿಧಾನವನ್ನು ಇನ್ನಷ್ಟು ಉತ್ತಮಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವದು ಎಂದು ರೈಲು ಮಂಡಳಿ, IRCTC ಹಾಗೂ ಸೆಂಟರ್ ಫಾರ್ ರೇಲ್ವೆ ಇನ್ಫಾರ್ಮಶನ್ ಸಿಸ್ಟಮ್ (Cris) ಅಧಿಕಾರಿಗಳು ಪಿಯೂಷ್ ಗೋಯಲ್ ಅವರಿಗೆ ಭರವಸೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News