ಭತ್ತದ ಕಣಜ ಗಂಗಾವತಿಗೆ ಸುರಕ್ಷಿತ ಹೆರಿಗೆ ಗರಿಮೆ

    

Last Updated : Mar 3, 2018, 01:42 PM IST
ಭತ್ತದ ಕಣಜ ಗಂಗಾವತಿಗೆ ಸುರಕ್ಷಿತ ಹೆರಿಗೆ ಗರಿಮೆ    title=
ಸಾಂದರ್ಭಿಕ ಚಿತ್ರ

ಗಂಗಾವತಿ: ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯು ಕರ್ನಾಟಕದಲ್ಲಿಯೇ ಅತ್ಯಧಿಕ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಅಗ್ರಸ್ಥಾನವನ್ನು ಅಲಂಕರಿಸಿದೆ. 2018ರ ಜನವರಿಯಲ್ಲಿ ರಾಜ್ಯದ 176 ತಾಲ್ಲೂಕು ಆಸ್ಪತ್ರೆಗಳಲ್ಲಿ  ಸುರಕ್ಷಿತ ಹೆರಿಗೆಗಳ ಕುರಿತು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

ಒಟ್ಟು ಒಂದು ತಿಂಗಳಲ್ಲಿ 374 ಹೆರಿಗೆಯಾಗಿದ್ದು, ಅವುಗಳಲ್ಲಿ 315 ಸಹಜ ಹಾಗೂ 59 ಸಿಸೇರಿಯನ್‌ ಆಗಿವೆ.ಇದುವರೆಗೂ ಆಸ್ಪತ್ರೆಯಲ್ಲಿ  ಹೆರಿಗೆ ಸಂದರ್ಭದಲ್ಲಿ ತಾಯಿ ಅಥವಾ ಮಗು ಮೃತಪಟ್ಟ ಉದಾಹರಣೆ ಕಂಡುಬಂದಿಲ್ಲ ಎಂದು ಹೇಳಲಾಗಿದೆ. ಗಂಗಾವತಿಯ ನಂತರ 348  ಸುರಕ್ಷಿತ ಹೆರಿಗೆ ಮಾಡಿಸುವುದರ ಮೂಲಕ ಗೋಕಾಕ್ ತಾಲ್ಲೂಕು ಆಸ್ಪತ್ರೆ ಎರಡನೇ ಸ್ಥಾನದಲ್ಲಿದೆ ಎಂದು ಆಸ್ಪತ್ರೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ವಿಭಾಗ ತಿಳಿಸಿದೆ.

ಹೈಟೆಕ್ ಮಾದರಿಯ ಈ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ನೀಡಲಾಗುತ್ತಿದೆ. ಇದುವರೆಗೂ ಕೇವಲ ಬಡವರಿಗಷ್ಟೇ ಸೀಮಿತ ಎನ್ನುವಂತಿದ್ದ ಸರ್ಕಾರಿ ಆಸ್ಪತ್ರೆಗಳಿಗೆ ವಿವಿಧ ವರ್ಗದ ಜನ ಬರಲು ಪ್ರಾರಂಭಿಸಿದ್ದಾರೆ . ಎರಡು ವರ್ಷದ ಹಿಂದಷ್ಟೆ ಪ್ರತಿದಿನ 150ರಿಂದ 200 ರಷ್ಟಿದ್ದ ಹೊರರೋಗಿಗಳ ಸಂಖ್ಯೆ ಈಗ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಪ್ಪಳ, ಗದಗ, ಕಂಪ್ಲಿ, ಹೊಸಪೇಟೆ, ಕುಡತನಿ, ಲಿಂಗಸಗೂರು, ಮುದಗಲ್, ಸಿಂಧನೂರು, ಮಾನ್ವಿಗಳಿಂದಲೂ ಜನ ಬರುತ್ತಿದ್ದಾರೆ ಎಂದು ಗಂಗಾವತಿ ಉಪವಿಭಾಗದ ಆಡಳಿತಾಧಿಕಾರಿಯಾಗಿರುವ  ಈಶ್ವರ ಸವಡಿ ತಿಳಿಸಿದ್ದಾರೆ. 

Trending News