Wedding Gift : ಇಷ್ಟವಾದ ಉಡುಗೊರೆ ಸಿಕ್ಕಿಲ್ಲ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

ತನಗೆ ಬೇಕಾದಂತೆ ಉಡುಗೊರೆ ಸಿಕ್ಕಿಲ್ಲ ಎಂಬ ಕಾರಣಕ್ಕೆ  ಮದುವೆಯೇ ಬೇಡ ಎಂದು ವಧು ಹೊರ ನಡೆದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

Written by - Zee Kannada News Desk | Last Updated : Jan 4, 2021, 09:29 PM IST
  • ಬೇಕಾದ ಡುಗೊರೆ ಸಿಕ್ಕಿಲ್ಲ ಎಂದು ಮದುವೆ ಮುರಿದ ವಧು
  • ನಗದುರೂಪದಲ್ಲೇ ಉಡುಗೊರೆ ನೀಡುವಂತೆ ಕೇಳಿಕೊಂಡಿದ್ದ ವಧು
  • ತಮಗೆ ಬೇಕಾದಂತೆ ಉಡುಗೊರೆ ನೀಡಿದ ಸಂಬಂಧಿಕರು, ಸ್ನೇಹಿತರು
Wedding Gift : ಇಷ್ಟವಾದ ಉಡುಗೊರೆ ಸಿಕ್ಕಿಲ್ಲ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು  title=
ಬೇಕಾದ ಡುಗೊರೆ ಸಿಕ್ಕಿಲ್ಲ ಎಂದು ಮದುವೆ ಮುರಿದ ವಧು

ನವದೆಹಲಿ: ಮದುವೆ ಅನ್ನೋದು ಏಳೇಳು ಜನ್ಮದ ಸಂಬಂಧ ಅನ್ನೋ ಮಾತನ್ನ ನಾವೆಲ್ಲ ಕೇಳಿದ್ದೇವೆ. ಮದುವೆ ನಿಶ್ಚಯವಾದ ತಕ್ಷಣ ತನ್ನ ಮದುವೆ ಹಾಗಾಗಬೇಕು ಹೀಗಾಗಬೇಕು ಎಂದು ವಧು ವರರು ಕನಸು (Dream) ಕಾಣುವುದು ಕೂಡಾ ಸಹಜ. ಇನ್ನು ಕೆಲವರು ತನಗೆ ಮದುವೆಯಲ್ಲಿ ಏನೆಲ್ಲಾ ಗಿಫ್ಟ್ (Gift)ಸಿಗಬಹುದು ಎಂದು ಯೋಚಿಸಲೂ ಬಹುದು. 

ಆದರೆ ಇಲ್ಲೊಬ್ಬಳು ತಾನು ಬಯಸಿದ್ದ ಉಡುಗೊರೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮದುವೆಯೇ ಬೇಡ ಎಂದು ಹೊರ ನಡೆದಿದ್ದಾಳೆ.
ತಾನು ಬಯಸಿದ್ದ ಗಿಫ್ಟ್ ಸಿಗದ ಮೇಲೆ ನಾನು ಮದುವೆಯಾಗುವುದಿಲ್ಲ ಎಂದು ಹೇಳಿ ಮದುವೆ (Marriage) ಮುರಿಯುತ್ತಿದ್ದಂತೆ, ವಧುವಿನ ಸಂಬಂಧಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಮದುವೆ ಮುರಿದುಬಿದ್ದ ಸುದ್ದಿ ಪೋಸ್ಟ್ ಆಗುತ್ತಿದ್ದಂತೆ ಇದು ಎಲ್ಲೆಡೆ ವೈರಲ್ ಆಗಿದೆ. 

ALSO READ : Bollywood : ಫ್ಲ್ಯಾ ಟ್ ವಿಚಾರದಲ್ಲಿ ಕಂಗನಾ – ಊರ್ಮಿಳಾ ಟ್ವೀಟ್ ಯುದ್ಧ, ಬಾಲಿವುಡ್ ನಟಿಯರ ಏಟು ಎದಿರೇಟು..!

ಕೆನಡಾದಲ್ಲಿ (Canada) ನೆಲೆಸಿರುವ ವಧು ಸುಜೇನ್ ತನಗೆ ಮದುವೆಗೆ ನಗದು ರೂಪದಲ್ಲಿಯೇ ಉಡುಗೊರೆ ನೀಡುವಂತೆ ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಕೇಳಿಕೊಂಡಿದ್ದಳು. ತನ್ನ ಮದುವೆಗೆ 60 ಸಾವಿರ ಡಾಲರ್ ಅನ್ನು ಗಿಫ್ಟ್ ರೂಪದಲ್ಲಿ ಪಡೆದು ವಿವಾಹದ (Marriage) ಖರ್ಚನ್ನು ಭರಿಸುವ ಇರಾದೆಯನ್ನು ವಧು ಸುಸೇನ್ ಹೊಂದಿದ್ದರು.  ಆದರೆ ಸಂಬಂಧಿಕರು ತಮಗೆ ಇಷ್ಟವಾಗುವಂತಹ ಉಡುಗೊರೆಗಳನ್ನು (Gift) ನೀಡಿದ್ದಾರೆ. ಇದರಿಂದ ಬೇಸರಗೊಂಡ ವಧು ತನಗೆ ಮದುವೆಯೇ ಬೇಡ, ತಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ.  

ಇನ್ನು,  ಮದುವೆ ಮುರಿದುಕೊಂಡ ಬಳಿಕ ಸುಸೇನ್ ಸಾಮಾಜಿಕ ಜಾಲತಾಣದಲ್ಲಿ ಒಂದು ಪತ್ರವನ್ನು ಬರೆದಿದ್ದಾರೆ. ಇದರಲ್ಲಿ 14 ವರ್ಷದವರಾಗಿದ್ದಾಗ ಪರಸ್ಪರ ಪ್ರೀತಿಸಿದ್ದು, 18 ವರ್ಷದಲ್ಲಿ ಇಬ್ಬರಿಗೂ ನಿಶ್ಚಿತಾರ್ಥವಾಗಿದೆ.( Engagement) 20ನೇ ವಯಸ್ಸಿಗೆ ತಾನು ತಾಯಿಯಾಗಿದ್ದು, ಇಬ್ಬರೂ ಜೊತೆಯಲ್ಲಿಯೇ ಜೀವನ ನಿರ್ವಹಿಸಲು ತೀರ್ಮಾನಿಸಿದ್ದೆವು. ನಮ್ಮಿಬ್ಬರ ಮದುವೆಗೆ 60 ಸಾವಿರ ಡಾಲರ್ ನ ಅಗತ್ಯವಿತ್ತು. ಆದರೆ ನಮ್ಮ ಬಳಿ ಕೇವಲ 15 ಸಾವಿರ ಡಾಲರ್ ಮಾತ್ರ ಇತ್ತು. ಹಾಗಾಗಿ ಸ್ನೇಹಿತರಲ್ಲಿ ನಗದು ರೂಪದಲ್ಲಿ ಉಡುಗೊರೆ ನೀಡುವಂತೆ ಕೇಳಿಕೊಂಡಿರುವುದಾಗಿ ಹೇಳಿದ್ದಾರೆ. ಸಂಬಂಧಿಕರು ನಗದಿನ ರೂಪದಲ್ಲಿ ಉಡುಗೊರೆ ನೀಡದ ಕಾರಣ ಮದುವೆ ಕ್ಯಾನ್ಸಲ್ ಮಾಡಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News