BCCI ಮುಖ್ಯಸ್ಥ ಸೌರವ್​ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು!

ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮುಖ್ಯಸ್ಥ ಸೌರವ್​ ಗಂಗೂಲಿ ಅವರಿಗೆ ಮತ್ತೆ ಎದೆನೋವು

Last Updated : Jan 27, 2021, 03:50 PM IST
  • ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮುಖ್ಯಸ್ಥ ಸೌರವ್​ ಗಂಗೂಲಿ ಅವರಿಗೆ ಮತ್ತೆ ಎದೆನೋವು
  • ಬುಧವಾರ (ಜ.27) ಆಸ್ಪತ್ರೆಗೆ ದಾಖಲಾದ ಸೌರವ್​ ಗಂಗೂಲಿ
  • ಶನಿವಾರ (ಜ.2) ಒಂದು ಗಂಟೆಗೆ ಆಸ್ಪತ್ರೆಗೆ ದಾಖಲಾದಾಗ ಗಂಗೂಲಿ ಅವರ ಪಲ್ಸ್‌ 70/ನಿಮಿಷ, ಬಿಪಿ 130/80 ಎಂಎಂ ಇತ್ತು ಹಾಗೂ ಇತರೆ ಕ್ಲಿನಿಕಲ್‌ ಪ್ಯಾರಾಮೀಟರ್‌ಗಳು ಸಾಮಾನ್ಯ ಸ್ಥಿತಿಯಲ್ಲಿವೆ,
BCCI ಮುಖ್ಯಸ್ಥ ಸೌರವ್​ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು! title=

ಕೋಲ್ಕತ: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮುಖ್ಯಸ್ಥ ಸೌರವ್​ ಗಂಗೂಲಿ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ (ಜ.27) ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ತಿಂಗಳ ಆರಂಭದಲ್ಲಿ ಗಂಗೂಲಿಗೆ(Sourav Ganguly) ಲಘು ಹೃದಯಾಘಾತಕ್ಕೊಳಗಾಗಿ ಕೋಲ್ಕತದ ವುಡ್​ಲ್ಯಾಂಡ್​ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದಾಗಿನಿಂದ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

Congress: ರಾಮ ಮಂದಿರ ನಿರ್ಮಾಣಕ್ಕೆ '₹ 2 ಲಕ್ಷ ದೇಣಿ'ಗೆ ನೀಡಿದ ಕಾಂಗ್ರೆಸ್ ಶಾಸಕಿ..!

ಗಂಗೂಲಿಯವರ ಕುರಿತು ಮಾತನಾಡಿದ್ದ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಯ ಎಂಡಿ ಹಾಗೂ ಸಿಇಓ ಡಾ. ರೂಪಾಲಿ ಬಸು, ಮನೆಯಲ್ಲಿಯೂ ಅವರ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದಿದ್ದರು.

B.Sriramulu: 'ರೈತರೇ, ಕಾಂಗ್ರೆಸ್ ನಿಮ್ಮ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸುತ್ತಿದೆ'

ಜನವರಿ 2 ರಂದು ತಮ್ಮ ಮನೆಯ ಜಿಮ್‌ನ ಟ್ರೆಡ್‌ ಮಿಲ್‌ನಲ್ಲಿ ಓಡುತ್ತಿದ್ದ ವೇಳೆ ಸೌರವ್‌ ಗಂಗೂಲಿ ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಶನಿವಾರ (ಜ.2) ಒಂದು ಗಂಟೆಗೆ ಆಸ್ಪತ್ರೆಗೆ ದಾಖಲಾದಾಗ ಗಂಗೂಲಿ ಅವರ ಪಲ್ಸ್‌ 70/ನಿಮಿಷ, ಬಿಪಿ 130/80 ಎಂಎಂ ಇತ್ತು ಹಾಗೂ ಇತರೆ ಕ್ಲಿನಿಕಲ್‌ ಪ್ಯಾರಾಮೀಟರ್‌ಗಳು ಸಾಮಾನ್ಯ ಸ್ಥಿತಿಯಲ್ಲಿವೆ,' ಎಂದು ವುಡ್‌ಲ್ಯಾಂಡ್ಸ್‌ ಆಸ್ಪತ್ರೆಯ ಮೆಡಿಕಲ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿತ್ತು.

Basavaraj Horatti: ಸಭಾಪತಿ ಸ್ಥಾನಕ್ಕೆ 'ಬಸವರಾಜ್ ಹೊರಟ್ಟಿ' ಹೆಸರು ಫೈನಲ್!

ಜನವರಿ 7ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು. ಕರೊನಾ ವೈರಸ್​ ಕೂಡ ನೆಗಿಟಿವ್​ ಆಗಿತ್ತು. ಮೂರರಿಂದ ನಾಲ್ಕು ವಾರಗಳ ವಿಶ್ರಾಂತಿ ಪಡೆದರೆ ಗಂಗೂಲಿ ಸಂಪೂರ್ಣ ಗುಣಮುಖರಾಗಲಿದ್ದಾರೆಂದು ವೈದ್ಯರು ತಿಳಿಸಿದ್ದರು.

Ramesh Jarkiholi: ರಾಜ್ಯ ರಾಜಕೀಯದ ಬಗ್ಗೆ ಹೊಸ ಸುಳಿವು ಕೊಟ್ಟ ಬೆಳಗಾವಿ ಸಾಹುಕಾರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News