ನವದೆಹಲಿ: Economic Survey 2020-21 Today - ಇಂದು ಫೆಬ್ರವರಿ 29. ಇಂದು ಮುಖ್ಯ ಆರ್ಥಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಸಾಮಾನ್ಯವಾಗಿ ಪ್ರತಿವರ್ಷ ಬಜೆಟ್ ಮಂಡನೆಯ ಒಂದು ದಿನ ಮೊದಲು ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆ. ಆದರೆ, ಈ ಬಾರಿ ಬಜೆಟ್ ಮಂಡನೆಗೂ ಎರಡು ದಿನ ಮುನ್ನ ವರ್ಷ 2020-21 ರ ಆರ್ಥಿಕ ಸಮೀಕ್ಷೆ (Economic Survey - 2020-21) ಇಂದು ಅಂದರೆ ಶುಕ್ರವಾರ ಮಂಡನೆಯಾಗುತ್ತಿದೆ. ಈ ಬಾರಿಯ ಆರ್ಥಿಕ ಸಮೀಕ್ಷೆ ಕೃಷ್ಣಮೂರ್ತಿ ಸುಬ್ರಮಣ್ಯಮ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದೆ.
ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman), ಮೋದಿ ಸರ್ಕಾರದ (Modi Government ) ಮೂರನೇ ಬಜೆಟ್ ಮಂಡಿಸಲಿದ್ದಾರೆ. ಪ್ರಸ್ತುತ ಕೊರೊನಾ ಪ್ರಕೋಪದ ಹಿನ್ನೆಲೆ ಋಣಾತ್ಮಕ ಅಭಿವೃದ್ಧಿ ಮುಂದುವರೆದಿದೆ. ಐತಿಹಾಸಿಕ ದೃಷ್ಠಿಯಿಂದ ಈ ಬಾರಿಯ ಬಜೆಟ್ ವಿಶೇಷವಾಗಿರಲಿದೆ. ಏಕೆಂದರೆ, ಇದೆ ಮೊದಲಬಾರಿಗೆ ಪೇಪರ್ ಬಜೆಟ್ ಮಂಡನೆಯಾಗುತ್ತಿದೆ. ಬಜೆಟ್ ಮುಂದಿನ ಒಂದು ವರ್ಷದ ಸರ್ಕಾರದ ಲೆಕ್ಕಪತ್ರವಾಗಿದ್ದರೆ, ಆರ್ಥಿಕ ಸಮೀಕ್ಷೆ ಹಾಲಿ ವರ್ಷದ ಅವಲೋಕನವಾಗಿರುತ್ತದೆ. ಹಾಗಾದರೆ ಬನ್ನಿ ಆರ್ಥಿಕ ಸಮೀಕ್ಷೆಯ ಮಹತ್ವವೇನು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
ಇದನ್ನು ಓದಿ- Budget 2021: ಬಜೆಟ್ ನಲ್ಲಿ ರೈತರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಕಡಿಮೆ ಬಡ್ಡಿ ದೊಡ್ಡ ಸಾಲ.? ನಿಮಗೂ ಅರ್ಹತೆ ಇದೆಯಾ ನೋಡಿ.
ಏನಿದು ಆರ್ಥಿಕ ಸಮೀಕ್ಷೆ?
ಆರ್ಥಿಕ ಸಮೀಕ್ಷೆ ಅರ್ಥವ್ಯವಸ್ಥೆಯ ವಾರ್ಷಿಕ ಅಧಿಕೃತ ವರದಿಯಾಗಿರುತ್ತದೆ. ಈ ವರದಿಯನ್ನು ಸಂಸತ್ತಿಯ ಉಭಯ ಸದನಗಳಲ್ಲಿ ಮಂಡಿಸಲಾಗುತ್ತದೆ. ಇದರಲ್ಲಿ ಭವಿಷ್ಯದಲ್ಲಿ ಮಾಡಲಾಗುವ ಯೋಜನೆಗಳು ಹಾಗೂ ಅರ್ಥವ್ಯವಸ್ಥೆಯಲ್ಲಿ ಬರುವ ಸವಾಲುಗಳ ಮಾಹಿತಿ ನೀಡಲಾಗುತ್ತದೆ. ಈ ವರದಿಯಲ್ಲಿ ದೇಶದ ದೇಶದ ಆರ್ಥಿಕ ಅಭಿವೃದ್ಧಿಯ ಅಂದಾಜು ವ್ಯಕ್ತಪಡಿಸಲಾಗಿರುತ್ತದೆ. ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ವೇಗ ಪಡೆದುಕೊಳ್ಳಲಿದೆಯೇ ಅಥವಾ ನಿಧಾನ ಗತಿಯಲ್ಲಿ ಸಾಗಲಿದೆಯೇ ಎಂಬುದರ ಅಂದಾಜು ವ್ಯಕ್ತಪಡಿಸಲಾಗುತ್ತದೆ. ಈ ಸಮೀಕ್ಷೆಯನ್ನಾಧರಿಸಿಯೇ ಸರ್ಕಾರದ ಆಯವ್ಯಯ ಪತ್ರ ಸಿದ್ಧಪಡಿಸಲಾಗುತ್ತದೆ. ಆದರೆ, ಆರ್ಥಿಕ ಸಮೀಕ್ಷೆಯ ಶಿಫಾರಸ್ಸುಗಳನ್ನು ಸ್ವೀಕರಿಸುವುದು ಕಾನೂನಾತ್ಮಕವಾಗಿ ಸರ್ಕಾರಕ್ಕೆ ಅನಿವಾರ್ಯವಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನು ಓದಿ- Economic Growth Rate - 2021ರಲ್ಲಿ ಭಾರತದ ಆರ್ಥಿಕ ವಿಕಾಸ ದರ ಶೇ.11.5 ರಷ್ಟು ಇರಲಿದೆ: IMF
ಆರ್ಥಿಕ ಸಮೀಕ್ಷೆ 2021(Economic Survey 2020-21)ರಿಂದ ನಿರೀಕ್ಷೆಗಳೇನು?
ಕೊರೊನಾ ದೇಶದ ಆರ್ಥಿಕತೆಯ ಮೇಲೆ ಭಾರಿ ಪೆಟ್ಟು ನೀಡಿದೆ. ಕೊವಿಡ್-19 ಕಾರಣ ಭಾರತೀಯ ಆರ್ಥಿಕತೆಗೆ ಎಷ್ಟು ಪೆಟ್ಟು ಬಿದ್ದಿದೆ ಎಂಬುದನ್ನು ಆರ್ಥಿಕ ಸಮೀಕ್ಷೆಯಿಂದ ಅಂದಾಜು ಸಿಗಲಿದೆ. ವರ್ತಮಾನದಲ್ಲಿರುವ ಆರ್ಥಿಕ ಪರಿಸ್ಥಿತಿಯ ಕುರಿತು ಚಿಂತನೆ ನಡೆಸಿ ಅವುಗಳಿಗೆ ಸಮಾಧಾನ ಇವು ಈ ಬಾರಿಯ ಸಮೀಕ್ಷೆಯಿಂದ ನಿರೀಕ್ಷಿಸಲಾಗುತ್ತಿದೆ. ಈ ಸಮೀಕ್ಷೆ 5 ಟ್ರಿಲಿಯನ್ ಡಾಲರ್ ಗುರಿಯನ್ನು ತಲುಪಲು ಸಹಕಾರಿಯಾಗಲಿದೆ. ಈ ಆರ್ಥಿಕ ಸಮೀಕ್ಷೆಯ ಆಧಾರದ ಮೇಲೆಯೇ ಬಜೆಟ್ (Budget 2021) ಸಿದ್ಧವಾಗುತ್ತದೆ ಎಂಬುದು ಜನಮಾನಸದ ನಂಬಿಕೆ. ಇದರಲ್ಲಿ ಪ್ರಧಾನಿಗಳ ಮುಖ್ಯ ಆರ್ಥಿಕ ಸಲಹೆಗಾರರ ಶಿಫಾರಸ್ಸು ಕೂಡ ಶಾಮೀಲಾಗಿರುತ್ತದೆ. ಆದರೆ, ಆರ್ಥಿಕ ಸಮೀಕ್ಷೆಯ ಚರ್ಚೆ ಬಜೆಟ್ ಮಂಡನೆಯ ವೇಳೆ ನಡೆಸುವುದು ಅನಿವಾರ್ಯವಲ್ಲ.
ಇದನ್ನು ಓದಿ-Budget 2021: ಕೇಂದ್ರ ಬಜೆಟ್‌ನಲ್ಲಿ 'ಪ್ರತ್ಯೇಕ ಬ್ಯಾಂಕ್' ಘೋಷಣೆ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.