Digilocker : ಇನ್ನು ನಿಮ್ಮ ವಿಮಾ ಪಾಲಿಸಿ ಸೇಫ್..! ಸಿಗಲಿದೆ ಡಿಜಿಲಾಕರ್

ವಿಮೆ ಕೊಳ್ಳುವುದಷ್ಟೇ ಅಲ್ಲ. ವಿಮೆಯ ದಾಖಲೆಗಳನ್ನು (Insurance Documents) ಸುರಕ್ಷಿತವಾಗಿಡುವುದು ಕೂಡಾ ಅತ್ಯಂತ ಮುಖ್ಯ. ನಾವು ಸಾಮಾನ್ಯವಾಗಿ ವಿಮೆಯ ದಾಖಲೆಗಳನ್ನು ಮನೆಯ ಬೀರು, ಕಪಾಟು, ಟೇಬಲ್ ಒಳಗೆ ಇಡುತ್ತೇವೆ. ಫೈಲ್, ಫೋಲ್ಡರ್ ಗಳಲ್ಲೂ ಇಡುವ ಅಭ್ಯಾಸ ನಮಗಿದೆ.

Written by - Ranjitha R K | Last Updated : Feb 11, 2021, 01:20 PM IST
  • ವಿಮೆಯ ದಾಖಲೆಗಳನ್ನು ಸುರಕ್ಷಿತವಾಗಿಡುವುದು ಕೂಡಾ ಅತ್ಯಂತ ಮುಖ್ಯ
  • ಡಿಜಿಲಾಕರಿನಲ್ಲಿ ನೀವು ವಿಮೆಯ ಪಾಲಿಸಿಗಳನ್ನು ಇಡಬಹುದಾಗಿದೆ
  • ತಮ್ಮ ಗ್ರಾಹಕರಿಗೆ ಡಿಜಿಲಾಕರ್ ಸೌಲಭ್ಯದ ಬಗ್ಗೆ ತಿಳಿಯಹೇಳುವಂತೆ IRDAI ಎಲ್ಲಾ ವಿಮಾಕಂಪನಿಗಳಿಗೆ ಹೇಳಿದೆ
Digilocker : ಇನ್ನು ನಿಮ್ಮ ವಿಮಾ ಪಾಲಿಸಿ ಸೇಫ್..! ಸಿಗಲಿದೆ ಡಿಜಿಲಾಕರ್  title=
ಡಿಜಿಲಾಕರಿನಲ್ಲಿ ನೀವು ವಿಮೆಯ ಪಾಲಿಸಿಗಳನ್ನು ಇಡಬಹುದಾಗಿದೆ (file photo)

ನವದೆಹಲಿ : Insurance Policy Latest News: ವಿಮೆ ಕೊಳ್ಳುವುದಷ್ಟೇ ಅಲ್ಲ. ವಿಮೆಯ ದಾಖಲೆಗಳನ್ನು (Insurance Documents) ಸುರಕ್ಷಿತವಾಗಿಡುವುದು ಕೂಡಾ ಅತ್ಯಂತ ಮುಖ್ಯ. ನಾವು ಸಾಮಾನ್ಯವಾಗಿ ವಿಮೆಯ ದಾಖಲೆಗಳನ್ನು ಮನೆಯ ಬೀರು, ಕಪಾಟು, ಟೇಬಲ್ ಒಳಗೆ ಇಡುತ್ತೇವೆ. ಫೈಲ್, ಫೋಲ್ಡರ್ ಗಳಲ್ಲೂ ಇಡುವ ಅಭ್ಯಾಸ ನಮಗಿದೆ. ಆದರೆ, ಕೆಲವೊಮ್ಮೆ ಕಪಾಟು, ಬೀರಿನಲ್ಲಿಟ್ಟ ಪಾಲಿಸಿ ದಾಖಲೆಗಳು ಹಾಳಾಗಬಹುದು. ಜೀರ್ಣವಾಗಿ ಹೋಗಬಹುದು. ಬೆಂಕಿ ತಗುಲಿ ಸುಟ್ಟುಹೋಗಬಹುದು. ವಿಮೆಯ ದಾಖಲೆಗಳನ್ನು ಸುರಕ್ಷಿತವಾಗಿಡುವುದು ತುಂಬಾ ಮುಖ್ಯ.  ಇನ್ನು ನೀವು ವಿಮೆಯ ದಾಖಲೆಯನ್ನು ಸುರಕ್ಷಿತವಾಗಿಡುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಡಿಜಿಲಾಕರಿನಲ್ಲಿ (Digilocker) ನೀವು ವಿಮೆಯ ಪಾಲಿಸಿಗಳನ್ನು ಇಡಬಹುದಾಗಿದೆ.

ಏನಿದು ಡಿಜಿಲಾಕರ್.?
ಡಿಜಿಲಾಕರ್ (Digilocker) ಇದೊಂದು ಸರ್ಕಾರ ರೂಪಿಸಿರುವ ಆಪ್. ಕೆಲವೊಂದು ದಾಖಲೆಗಳನ್ನು ಇದರಲ್ಲಿ ಸುರಕ್ಷಿತವಾಗಿ ಇಡಬಹುದಾಗಿದೆ. ಈ ಆಪ್ ತುಂಬಾ ಸೇಫ್ ಎಂದೂ ಹೇಳಲಾಗಿದೆ. ಇದರಲ್ಲಿಟ್ಟ ದಾಖಲೆಗಳನ್ನು ಕದಿಯಲು ಅಥವಾ ಕದ್ದು ಓದಲು ಯಾರಿಂದಲೂ ಸಾಧ್ಯವಿಲ್ಲ.  ಇದರಲ್ಲಿನ ದಾಖಲೆಗಳು ಕ್ಲೌಡ್ ಸ್ಟೋರೇಜಿನಲ್ಲಿ (Cloud Storage) ಸಂಗ್ರಹವಾಗಿರುತ್ತದೆ. Ministry of Electronics and Information Technology ಈ ಆಪನ್ನು ರೂಪಿಸಿದೆ. 

ಇದನ್ನೂ ಓದಿ : ಕುಳಿತಲ್ಲೇ ಓಪನ್ ಮಾಡಿ Post office ಉಳಿತಾಯ ಖಾತೆ..! ಸಿಗಲಿದೆ ಉತ್ತಮ ರಿಟರ್ನ್

ಡಿಜಿಲಾಕರ್ ಬಗ್ಗೆ IRDAI ಹೇಳಿದ್ದೇನು..?
ತಮ್ಮ ಗ್ರಾಹಕರಿಗೆ ಡಿಜಿಲಾಕರ್ ಸೌಲಭ್ಯದ ಬಗ್ಗೆ ತಿಳಿಯಹೇಳುವಂತೆ IRDAI  ಎಲ್ಲಾ ವಿಮಾಕಂಪನಿಗಳಿಗೆ ಹೇಳಿದೆ. IRDAI ಪ್ರಕಾರ ಡಿಜಿಲಾಕರ್ ಸೌಲಭ್ಯ ಬಳಸುವುದರಿಂದ ವಿಮಾ ವಲಯದಲ್ಲಿ ಸಾಕಷ್ಟು ಖರ್ಚು ಉಳಿತಾಯವಾಗುತ್ತದೆ. ಗ್ರಾಹಕರ ದೂರುಗಳೂ ಕಡಿಮೆಯಾಗುತ್ತದೆ. ವಿಮಾ ಸೇವೆಗಳ (Insurance) ರೆಸ್ಪಾನ್ಸ್ ಅವಧಿ ಕೂಡಾ ಕಡಿಮೆಯಾಗಲಿದೆ.  ಪ್ರೊಸೆಸಿಂಗ್ (Processing) ಮತ್ತು ಕ್ಲೈಮ್ ಸೆಟಲ್ ಮೆಂಟ್  ಕೂಡಾ ಸುಲಭವಾಗಲಿದೆ ಎಂದು ಹೇಳುತ್ತದೆ IRDAI. ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳೂ ಇದರಿಂದ ಸಿಗಲಿವೆ.   ಈ ಸಂಬಂಧ  ಮಾಹಿತಿ ತಂತ್ರಜ್ಞಾನ ಇಲಾಖೆಯಡಿ  ಬರುವ ಇ-ಗವರ್ನೆನ್ಸ್ ಡಿವಿಜನ್ ವಿಮಾ ಕಂಪನಿಗಳಿಗೆ ಅಗತ್ಯ ಲಾಜಿಸ್ಟಿಕಲ್ ನೆರವು ನೀಡಬೇಕು ಎಂದು  IRDAI  ಹೇಳಿದೆ. 

ಇದನ್ನೂ ಓದಿ : Paytm : ಅಕೌಂಟಲ್ಲಿ ದುಡ್ಡಿಲ್ಲದಿದ್ದರೂ ಕ್ಲಪ್ತ ಸಮಯಕ್ಕೆ ಬಾಡಿಗೆ ಪಾವತಿಸಲು ಬಳಸಿ ಈ ಐಡಿಯಾ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Trending News