ಸ್ವದೇಶಿ ಅಪ್ಲಿಕೆಶನ್ Koo App ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದೆ.
ನವದೆಹಲಿ : ಸ್ವದೇಶಿ ಅಪ್ಲಿಕೆಶನ್ Koo App ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ (Piyush Goyal) ಅನೇಕ ನಾಯಕರು ಈ ಆ್ಯಪ್ ಅನ್ನು ಬಳಸುತ್ತಿದ್ದಾರೆ. ಆದರೆ Koo App ನಿಜವಾಗಿಯೂ ಸುರಕ್ಷಿತವಾಗಿದೆಯೇ (Safe) ಎಂಬ ಸಂದೇಹ ಕೇಳಿ ಬರುತ್ತಿದೆ? ಫ್ರೆಂಚ್ ಭದ್ರತಾ ಸಂಶೋಧಕರು ಈ ಅಪ್ಲಿಕೇಶನ್ ಸುರಕ್ಷಿತವಲ್ಲ ಎಂದಿದ್ದಾರೆ. ಅಲ್ಲದೆ, ಈ ಆಪ್ ನಲ್ಲಿ ಬಳಕೆದಾರರ ವೈಯಕ್ತಿಕ ಡೇಟಾ (Personal Data) ಸೋರಿಕೆಯಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಈ ಅಪ್ಲಿಕೇಶನ್‌ನಲ್ಲಿ, ಬಳಕೆದಾರರ ಇಮೇಲ್ ಐಡಿ, ಫೋನ್ ನಂಬರ್, ಹುಟ್ಟಿದ ದಿನಾಂಕದಂತಹ ಡೇಟಾ ಇರುತ್ತದೆ. ಈ ಡೇಟಾ ಸೋರಿಕೆಯಾಗುವ ಅಪಾಯವಿದೆ ಎನ್ನಲಾಗಿದೆ. ಫ್ರೆಂಚ್ ಸೈಬರ್ ಭದ್ರತಾ ಸಂಶೋಧಕ ರಾಬರ್ಟ್ ಬ್ಯಾಪ್ಟಿಸ್ಟ್ (Robert Baptiste ) ಈ ಅಪ್ಲಿಕೇಶನ್ ಬಗ್ಗೆ ಸಂಶೋಧನೆ ನಡೆಸಿದ್ದಾರೆ. Koo App ಸುರಕ್ಷಿತವಲ್ಲ ಎಂದು ರಾಬರ್ಟ್ ತನ್ನ ಸಂಶೋಧನೆಯಲ್ಲಿಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮೊದಲು, ರಾಬರ್ಟ್ ಬ್ಯಾಪ್ಟಿಸ್ಟ್ ,ಆಧಾರ್ ವ್ಯವಸ್ಥೆಯ ನ್ಯೂನತೆಗಳ ಬಗ್ಗೆಯೂ ಬಹಿರಂಗಪಡಿಸಿದ್ದರು. Koo App ಭದ್ರತೆಗೆ ಸಂಬಂಧಿಸಿದ ಅನೇಕ ನ್ಯೂನತೆಗಳನ್ನು ಹೊಂದಿದೆ ಎಂದು ರಾಬರ್ಟ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಬರ್ಟ್, 'ನಾನು ಈ ಆ್ಯಪ್‌ನ ಸಂಶೋಧನೆಗಾಗಿ 30 ನಿಮಿಷಗಳ ಸಮಯವನ್ನು ಕಳೆದಿದ್ದೇನೆ. ಈ ಅಪ್ಲಿಕೇಶನ್ ಬಳಕೆದಾರರ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡುತ್ತಿದೆ. ಇವುಗಳಲ್ಲಿ ಇಮೇಲ್, ಹುಟ್ಟಿದ ದಿನಾಂಕ, ಹೆಸರು ವೈವಾಹಿಕ ಸ್ಥಿತಿ ಮತ್ತು ಲಿಂಗ ಮುಂತಾದ ಮಾಹಿತಿಗಳು ಸೇರಿವೆ ಎಂದಿದ್ದಾರೆ.
ರಾಬರ್ಟ್ ತಮ್ಮ ಟ್ವೀಟ್‌ನಲ್ಲಿ ಹಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಸಾವಿರಾರು ಬಳಕೆದಾರರ ದತ್ತಾಂಶವು Koo App ಮೂಲಕ ಸೋರಿಕೆಯಾಗಿದೆ ಮತ್ತು ಭಾರತ ಸರ್ಕಾರದ ಕೆಲವು ಇಲಾಖೆಗಳು ಮತ್ತು ಮಂತ್ರಿಗಳ ಡೇಟಾವನ್ನು ಇದು ಒಳಗೊಂಡಿದೆ ಎಂದು ರಾಬರ್ಟ್ ಹೇಳಿದ್ದಾರೆ. Koo App ಚೀನಾದ ಕನೆಕ್ಷನ್ ಇರುವ ಸಾಧ್ಯತೆಯ ಬಗ್ಗೆಯೂ ರಾಬರ್ಟ್ ಹೇಳಿದ್ದಾರೆ. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ರೀತಿಯ ನಿಖರ ಮಾಹಿತಿ ಇಲ್ಲ. Koo App ಡೊಮೇನ್ ಚೀನಾದೊಂದಿಗೆ ಕನೆಕ್ಷನ್ ಇರುವ ಬಗ್ಗೆ ಸಂಕೇತಗಳು ಸಿಗುತ್ತಿವೆ ಎಂದು ರಾಬರ್ಟ್ ಬ್ಯಾಪ್ಟಿಸ್ಟ್ ಹೇಳಿದ್ದಾರೆ. ಈ ಡೊಮೇನ್ ಅನ್ನು ನಾಲ್ಕು ವರ್ಷಗಳ ಹಿಂದೆ ರಚಿಸಲಾಗಿದೆ. ಇದಾದ ನಂತರ ಈ ಡೊಮೆನ್ ಬಹಳಷ್ಟು ಜನರಿಗೆ ಸಿಕ್ಕಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಇದು ಚೀನಾದ ಸಂಪರ್ಕವನ್ನು ಹೊಂದಿರಬಹುದು ಏಕೆಂದರೆ Koo App, Shunwei ಹೂಡಿಕೆಯನ್ನು ಹೊಂದಿದೆ. ಈ ಹೂಡಿಕೆ ಬಹಳ ಸಣ್ಣ ಮಟ್ಟದ್ದಾಗಿದೆ. ಆದರೂ, Shunwei ಶಿಯೋಮಿ ಜೊತೆ ಕನೆಕ್ಟ್ ಆಗಿರುವ ಬಂಡವಾಳ ನಿಧಿಯಾಗಿದೆ. ಇದು ಸ್ಟಾರ್ಟ್ ಅಪ್‌ಗಳಲ್ಲಿ ಹೂಡಿಕೆ ಮಾಡುತ್ತದೆ. Koo App ಸಂಸ್ಥಾಪಕರು ಈ ಅಪ್ಲಿಕೇಶನ್ ಭಾರತದ ನೋಂದಾಯಿತ ಕಂಪನಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದರ ಸಂಸ್ಥಾಪಕರು ಕೂಡಾ ಭಾರತೀಯರೇ ಎಂದಿದ್ದಾರೆ. ಟ್ವಿಟರ್‌ನಲ್ಲಿ ಕೂ ಆ್ಯಪ್‌ನ ಅಧಿಕೃತ ಖಾತೆ @kooindia ಎಂದಿದೆ ಇದೆ ಎಂದು ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.
ಟ್ವಿಟರ್ ಮತ್ತು ಸರ್ಕಾರದ ನಡುವಿನ 257 ಖಾತೆಗಳನ್ನು ನಿರ್ಬಂಧಿಸಿದ ನಂತರ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾರತೀಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ Koo App ಬಳಸುತ್ತಿದ್ದಾರೆ. ಗೋಯಲ್ ಅವರಲ್ಲದೆ, ರವಿಶಂಕರ್ ಪ್ರಸಾದ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಕೂಡ ಕೂ ಆಪ್ ಬಳಸುತ್ತಿದ್ದಾರೆ.