Petrol, Diesel rate ದುಬಾರಿ ದುನಿಯಾ..! ಶತಕ ಸಿಡಿಸಲಿದೆ ಪೆಟ್ರೋಲ್, ರಾಜಸ್ತಾನದ ಗಂಗಾನಗರದಲ್ಲಿ 99.22 ರೂ.

ಅಡುಗೆ ಅನಿಲದ ಜೊತೆ ಪೆಟ್ರೋಲ್, ಡೀಸೆಲ್ ದರ ಕೂಡಾ ವಿಪರೀತ ಹೆಚ್ಚಾಗುತ್ತಿದೆ.   

Written by - Ranjitha R K | Last Updated : Feb 15, 2021, 09:56 AM IST
  • ಪೆಟ್ರೋಲ್, ಡೀಸೆಲ್ ರೇಟ್ ಸತತ ಏಳು ದಿನಗಳಿಂದ ಏರುಮುಖವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
  • ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಈಗ 90 ರೂ. ಅಜೂಬಾಜಿನಲ್ಲಿದೆ
  • ರಾಜ್ಯದಲ್ಲಿ ಪೆಟೋಲ್ ರೇಟ್ ಎಷ್ಟು ಗೊತ್ತಾ..?
Petrol, Diesel rate ದುಬಾರಿ ದುನಿಯಾ..! ಶತಕ ಸಿಡಿಸಲಿದೆ ಪೆಟ್ರೋಲ್, ರಾಜಸ್ತಾನದ ಗಂಗಾನಗರದಲ್ಲಿ 99.22 ರೂ. title=
ರಾಜ್ಯದಲ್ಲಿ ಪೆಟೋಲ್ ರೇಟ್ ಎಷ್ಟು ಗೊತ್ತಾ..? (File photo)

ಬೆಂಗಳೂರು : ಅಡುಗೆ ಅನಿಲದ (LPG Rate) ಜೊತೆ ಪೆಟ್ರೋಲ್, ಡೀಸೆಲ್ ದರ ಕೂಡಾ ವಿಪರೀತ ಹೆಚ್ಚಾಗುತ್ತಿದೆ. ಪೆಟ್ರೋಲ್, ಡೀಸೆಲ್ ರೇಟ್ ಸತತ ಏಳು ದಿನಗಳಿಂದ ಏರುಮುಖವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. 

ಶತಕ ಸಿಡಿಸುತ್ತಾ ಪೆಟ್ರೋಲ್..?!
ದೇಶದ ಮೆಟ್ರೋ ಮಹಾನಗರಗಳಾದ (Metro Cities) ದೆಹಲಿ , ಕೊಲ್ಕತ್ತಾ, ಮುಂಬಯಿ ಮತ್ತು ಚೆನ್ನೈಯಲ್ಲಿ ಪೆಟ್ರೋಲ್ (Petrol) ದರ ಈಗಾಗಲೇ 90 ರೂಪಾಯಿ ಅಜೂಬಾಜಿನಲ್ಲಿದೆ. ಮುಂಬಯಿನಲ್ಲಿ (Mumbai)ಪೆಟ್ರೋಲ್ 95.44, ಡೀಸೆಲ್ 86.33, ಕೊಲ್ಕತ್ತಾದಲ್ಲಿ ಪೆಟ್ರೋಲ್ 90.24, ಡೀಸೆಲ್ 82.92, ಮತ್ತು ಚೆನ್ನೈಯಲ್ಲಿ ಪೆಟ್ರೋಲ್ 91.17 ಮತ್ತು ಡೀಸೆಲ್ 84.42 ರೂಪಾಯಿಗೆ ಮುಟ್ಟಿದೆ. ಹಾಗೇ ನೋಡಿದರೆ, ದೆಹಲಿಯಲ್ಲಿ (Delhi) ರೇಟ್ ಸ್ವಲ್ಪ ಕಡಿಮೆ ಇದೆ. ದೆಹಲಿಯಲ್ಲಿ ಪೆಟ್ರೋಲ್ 88.99 ರೂ. ಮತ್ತು ಡೀಸೆಲ್ 79.35 ರೂಪಾಯಿ ಆಗಿದೆ.

ಇದನ್ನೂ ಓದಿ : LPG Cylinder Price: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ದರ ಏರಿಕೆ, ಜನಸಾಮಾನ್ಯರಿಗೆ ಮತ್ತೆ ಶಾಕ್

ಬೆಂಗಳೂರಿನಲ್ಲಿ ರೇಟ್ ಎಷ್ಟು..?
ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ (Bengaluru) ಕೂಡಾ ಪೆಟ್ರೋಲ್, ಡೀಸೆಲ್ ಏರುಮುಖವಾಗಿದೆ. ಇವತ್ತಿನ ಲೇಟೆಸ್ಟ್ ಧಾರಣೆ (Today’s Rate) ಪ್ರಕಾರ, ಪೆಟ್ರೋಲ್ 91.95 ರೂ, ಮತ್ತು ಡೀಸೆಲ್ 84.10 ರೂಪಾಯಿ ಆಗಿದೆ. ಸತತ ಬೆಲೆ ಏರಿಕೆಗೆ ಜನತೆ ಹಿಡಿಶಾಪ ಹಾಕುತ್ತಿದ್ದು, ಪೆಟ್ರೋಲ್ ಖಂಡಿತಾ ಸೆಂಚುರಿ ಬಾರಿಸಲಿದೆ ಎಂದು ವ್ಯಂಗ್ಯವಾಡುತ್ತಿದ್ದಾರೆ. 

ರಾಜಾಸ್ತಾನದ ಗಂಗಾನಗರದಲ್ಲಿ ಪೆಟ್ರೋಲ್ 99.22/ಲೀಟರ್  :
ರಾಜಾಸ್ತಾನದ (Rajastan) ಗಂಗಾನಗರದಲ್ಲಿ ಶಾಕಿಂಗ್ ನ್ಯೂಸ್ ಬಂದಿದೆ. ದೇಶದಲ್ಲಿ ಪೆಟ್ರೋಲ್ ಅತ್ಯಂತ ದುಬಾರಿಯಾಗಿರುವುದು (Expensive) ಇಲ್ಲೇ. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.22 ರೂ. ನಂತರದ ಸ್ಥಾನ ಮಧ್ಯಪ್ರದೇಶದ (Madhyapradesh)ಬೋಪಾಲ್. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ರೇಟ್ 96 ರೂಪಾಯಿ.

ಇದನ್ನೂ ಓದಿ : Fastag : ಮಧ್ಯರಾತ್ರಿಯಿಂದ Fastag ಅನಿವಾರ್ಯ, ವಿಸ್ತರಣೆ ಆಗಲ್ಲ ಡೆಡ್ ಲೈನ್..! ಇಲ್ಲಿದೆ ಅಗತ್ಯ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News