Smriti Irani: 'ರಾಹುಲ್‌ ತಾಕತ್ತಿದ್ದರೆ ಗುಜರಾತ್‌ನಿಂದ ಸ್ಪರ್ಧಿಸಲಿ'

'ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ 'ತಾಕತ್ತಿದ್ದರೆ' ಗುಜರಾತ್‌ನ ಸಣ್ಣ ಚಹಾ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲಿ.

Last Updated : Feb 16, 2021, 05:56 PM IST
  • 'ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ 'ತಾಕತ್ತಿದ್ದರೆ' ಗುಜರಾತ್‌ನ ಸಣ್ಣ ಚಹಾ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲಿ.
  • ಗುಜರಾತ್‌ನಿಂದಲೇ ಚುನಾವಣೆಗೆ ಸ್ಪರ್ಧಿಸಿ ತೋರಿಸಲಿ' ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದರು.
  • ಗುಜರಾತ್ ಮತ್ತು ಅಲ್ಲಿನ ಜನರ ಬಗ್ಗೆ ಕಾಂಗ್ರೆಸ್‌ಗೆ ದ್ವೇಷ ಮತ್ತು ಪೂರ್ವಾಗ್ರಹ ಪೀಡಿತ ಭಾವನೆ ಇದೆ.
Smriti Irani: 'ರಾಹುಲ್‌ ತಾಕತ್ತಿದ್ದರೆ ಗುಜರಾತ್‌ನಿಂದ ಸ್ಪರ್ಧಿಸಲಿ' title=

ಗುಜರಾತ್: 'ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ 'ತಾಕತ್ತಿದ್ದರೆ' ಗುಜರಾತ್‌ನ ಸಣ್ಣ ಚಹಾ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲಿ. ಗುಜರಾತ್‌ನಿಂದಲೇ ಚುನಾವಣೆಗೆ ಸ್ಪರ್ಧಿಸಿ ತೋರಿಸಲಿ' ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದರು.

ಗುಜರಾತ್ ಮತ್ತು ಅಲ್ಲಿನ ಜನರ ಬಗ್ಗೆ ಕಾಂಗ್ರೆಸ್‌(Congress)ಗೆ ದ್ವೇಷ ಮತ್ತು ಪೂರ್ವಾಗ್ರಹ ಪೀಡಿತ ಭಾವನೆ ಇದೆ. ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್‌ ಅವರ ಬೃಹತ್ ಪ್ರತಿಮೆ ಸ್ಥಾಪಿಸಲೂ ಕಾಂಗ್ರೆಸ್ಸಿನವರು ವಿರೋಧಿಸಿದ್ದರು ಎಂದು ಆರೋಪಿಸಿದರು.

ವಿಚಿತ್ರ ವಂಚನೆ: ದೇವರು ತೀರಿಕೊಂಡಿದ್ದಾನೆಂದು ಹೇಳಿ ದೇವಸ್ಥಾನದ ಜಮೀನು ಕಬಳಿಸಿದ ಭೂಪರು

ಅಸ್ಸಾಂನಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ಮಿಕರ ಕೂಲಿ ಹೆಚ್ಚಿಸಲಿದ್ದು, ಗುಜರಾತ್‌(Gujarat) ಮೂಲದ ಚಹಾ ತೋಟದ ಮಾಲೀಕರು ಅದನ್ನು ಭರಿಸುವಂತೆ ಮಾಡುತ್ತೇನೆ ಎಂದಿದ್ದರು ಎಂಬುದನ್ನು ಉಲ್ಲೇಖಿಸಿ ಇರಾನಿ ಈ ಮಾತು ಹೇಳಿದರು.

ಎಚ್ಚರ..! ನಿಮ್ಮಲ್ಲಿರುವ FASTag ನಕಲಿಯಾಗಿರಬಹುದು..! NHAI ನೀಡಿದೆ ಎಚ್ಚರಿಕೆ

ಗುಜರಾತ್‌ನ ಸಣ್ಣ ಚಹಾ ವ್ಯಾಪಾರಿಗಳ ಜೇಬಿನಿಂದ ಹಣ ತರುತ್ತೇನೆ ಎಂದು ರಾಹುಲ್‌ ಹೇಳಿದ್ದಾರೆ. ಈ ಹಿಂದೆ ನರೇಂದ್ರ ಮೋದಿ(Narendra Modi) ಟೀ ಮಾರುತ್ತಿದ್ದರು ಎಂಬ ಬಗ್ಗೆಯೂ ಅವರು ತಕರಾರು ತೆಗೆದಿದ್ದರು ಎಂದೂ ಅವರು ದೂರಿದರು.

7th Pay Commission : ಹೋಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್

ರಾಹುಲ್‌ ಗಾಂಧಿ(Rahul Gandhi) ಅವರಿಗೆ ತಾಕತ್ತಿದ್ದರೆ ಈ ಬಗ್ಗೆ ಕ್ರಮಕ್ಕೆ ಮುಂದಾಗಲಿ. ಗುಜರಾತ್‌ನಿಂದಲೇ ಸ್ಪರ್ಧೆ ಮಾಡುವಂತೆಯೂ ನಾನು ಸವಾಲು ಹಾಕುತ್ತೇನೆ. ಅದು, ಎಲ್ಲ ಗೊಂದಲವನ್ನು ಬಗೆಹರಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

PM Fasal Bima Yojana: ರೈತರಿಗೆ ಸಿಗಲಿದೆ ಬೆಳೆ ವಿಮೆಯ ಗರಿಷ್ಠ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News