ಬೆಂಗಳೂರು : ಭೂಮಿ ಖರೀದಿಸುವಷ್ಟೇ ಕಷ್ಟದ ಕೆಲಸ ಭೂಮಿಯ ನಕ್ಷೆಯ ವೆರಿಫಿಕೇಶನ್ (Verification) ನಿಮಗೆ ಮೋಸ ಮಾಡಲು ಎಲ್ಲಾ ಕಡೆಯಲ್ಲೂ ಭೂಬಕಾಸುರರು ಕಾದು ಕುಳಿತಿದ್ದಾರೆ. ಒಂದು ಸೈಟ್ ಖರೀದಿಸಬೇಕಾದರೆ, ಅದನ್ನು ಸಾಕಷ್ಟು ಕಡೆಯಂದ ವೆರಿಫೈ ಮಾಡಬೇಕಾಗುತ್ತದೆ. ಸಾಲ ಸೋಲ ಮಾಡಿ ಭೂಮಿ ಖರೀದಿಸುವಾಗ ಮೋಸ ಹೋಗಿ ಬಿಟ್ಟರೆ..!? ಪರಿಣಾಮ ಊಹಿಸುವುದೂ ಕಷ್ಟ. ಇದಕ್ಕೆಲ್ಲಾ ಪರಿಹಾರ ಎನ್ನುವಂತೆ ರಾಜ್ಯ ಸರ್ಕಾರ ರೂಪಿಸಿದೆ `ದಿಶಾಂಕ್ ಆಪ್' (Dishaank App).
ಏನಿದು ದಿಶಾಂಕ್ ಆಪ್..?
ಸರಳವಾಗಿ ಹೇಳಬೇಕೆಂದರೆ ಇದು ಭೂನಕ್ಷೆ ತಿಳಿಸುವ ಸರ್ಕಾರಿ ಆಪ್. ಸರ್ವೆ ಇಲಾಖೆಯ ಅತ್ಯುತ್ತಮ ತಂತ್ರಾಂಶ. ಇದು ರಾಜ್ಯದ 30 ಜಿಲ್ಲೆಗಳ ಪ್ರತಿಭೂಭಾಗದ ಮಾಹಿತಿ, ಸರ್ವೆ ನಂಬರ್ ಒಳಗೊಂಡಿದೆ. ಇದು ಫ್ರೀ ಆಪ್ (Free App). ಮೊಬೈಲ್ ಫೋ ನಿನಲ್ಲಿ ಲೋಕೇಶನ್ ವಿವರ ಕೊಟ್ಟು ಡೌನ್ ಲೋಡ್ (Download)ಮಾಡಿ ಇಟ್ಟುಕೊಳ್ಳಬಹುದು.
ಇದನ್ನೂ ಓದಿ : ಲೇಖಕಿ ಡಾ.ಅನುಪಮಾ ಅವರಿಗೆ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ
ದಿಶಾಂಕ್ ಆಪ್ ಪ್ರಯೋಜನಗಳೇನು.?
1. ಯಾವುದಾದರೂ ಆಸ್ತಿಯ ನಿಖರ ಸರ್ವೇ ನಂಬರ್ (Survey number) ಕುಳಿತಲ್ಲೇ ಹುಡುಕಬಹುದು.
2. ಆಸ್ತಿಯ ಭೂಭಾಗದ ವಿವರ ನೀಡುತ್ತದೆ. ಕೆರೆಕುಂಟೆ, ಸುತ್ತಲಿನ ಪ್ರದೇಶ, ಅಸುಪಾಸಿನ ಆಸ್ತಿಯ ವಿವರ ನೀಡುತ್ತದೆ.
3. ಭೂಮಿ (Land) ಒತ್ತುವರಿಯಾಗಿದ್ದರೆ ಸುಲಭದಲ್ಲಿ ಪತ್ತೆ ಮಾಡಬಹುದು.
4. ಭೂಮಿಯ ಸರ್ವೇ ನಂಬರ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.
5. ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ (Real Estate)ಉದ್ಯಮಿಗಳಿಗೆ ಅತಿ ಉಪಯುಕ್ತ ಆಪ್ ಅದು.
6. 30 ಜಿಲ್ಲೆಗಳ ಸುಮಾರು 70 ಲಕ್ಷ ಸರ್ವೆ ನಂಬರ್ಗಗಳಿಗೆ ಸಂಬಂಧಿಸಿದ ವಿವರಗಳು ಇದರಲ್ಲಿವೆ
7. ಹೊಸ ಆಸ್ತಿ ಖರೀದಿ, ಮಾರಾಟದ ವೇಳೆ ಈ ಆಪ್ ಬಹಳ ಉಪಯುಕ್ತ ಮಾಹಿತಿ ನೀಡಲಿದೆ.
8. ಗ್ರಾಮದ ವಿಲೇಜ್ ಮ್ಯಾಪ್ ಇದರಲ್ಲಿ ಸೂಪರ್ ಇಂಪೋಸ್ ಆಗಿರತ್ತದೆ. ನೀವು ನಿಂತಿರುವ ಜಾಗದ ಸಮಗ್ರ ಮಾಹಿತಿ ಅದರಲ್ಲಿ ಲಭ್ಯವಿರುತ್ತದೆ. ಸರ್ವೇ ನಂಬರ್ ಸಹಿತ ನಿಮಗೆ ಮಾಹಿತಿ ಸಿಗುತ್ತದೆ.
9. ಆ ಸರ್ವೆ ನಂಬರ್ ಮಾಲೀಕ ಯಾರು ಅನ್ನೋ ಮಾಹಿತಿ ಕೂಡಾ ನಿಮಗೆ ಸಿಗುತ್ತದೆ. ಹಾಗಾಗಿ, ನಿಮಗೆ ಮೋಸ ಮಾಡಲು ಸಾಧ್ಯವಿಲ್ಲ.
10. ಕೊಟ್ಟಿರುವ ಸರ್ವೆ ನಂಬರಿನಲ್ಲಿ ಸರ್ಕಾರದ (Government) ಯಾವುದಾದರೂ ಆಸ್ತಿಗಳಿವೆಯಾ..? ಅಂದರೆ, ಕೆರೆ, ಕಟ್ಟೆ, ಕೊಳ್ಳ, ಜಮೀನು, ರಾಜಾಕಾಲುವೆ ಇದೆಯಾ ಅನ್ನೋ ಮಾಹಿತಿ ಕೂಡಾ ಸಿಗುತ್ತದೆ.
11. ನೀವು ಒಂದು ಸೈಟ್ ಖರೀದಿಗೆ ಹೋಗುವಾಗ ಆ ಸೈಟಿನ ಜಾಗದಲ್ಲಿ ನಿಂತು ಈ ದಿಶಾಂಕ್ ಆಪ್ ಆನ್ ಮಾಡಿ. ಅಲ್ಲೇ ನಿಮಗೆ ಆ ಜಾಗದ ಸಮಸ್ತ ಮಾಹಿತಿ ಸಿಗುತ್ತದೆ. ಸರ್ಕಾರಿ ಖರಾಬು ಇತ್ತಾ ಅನ್ನೋದು ಗೊತ್ತಾಗುತ್ತೆ. ಒತ್ತುವರಿಯಾ, ರಾಜಾಕಾಲುವೆ (raja kaluve) ಇತ್ತಾ, ರಸ್ತೆ ಇತ್ತಾ, ಅದು ಮೀಸಲಿಟ್ಟ ಜಾಗವೇ ಎಲ್ಲಾ ಮಾಹಿತಿ ಸಿಗುತ್ತದೆ.
ಇದನ್ನೂ ಓದಿ : BIG NEWS: 'SSLC' ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ!
ನಿಮಗೆ ಗೊತ್ತಿರಲಿ. ದಿಶಾಂಕ್ ಆಪ್ ನೀಡುವ ಮಾಹಿತಿ ಕಾನೂನು ಬದ್ದ ದಾಖಲೆ ಅಲ್ಲ. ಅದು ಕೇವಲ ಮಾಹಿತಿ ನೀಡುವ ಆಪ್ ಅಷ್ಟೇ ಅಲ್ಲ. ಕಾನೂನು ಬದ್ದ ದಾಖಲೆ ನೀವು ಅಧಿಕೃತ ಕಚೇರಿಗೆ ಹೋಗಿ ಪಡೆಯಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.