ನವದೆಹಲಿ: ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ದೀದಿಗೆ ಮತ್ತೊಂದು ಆಘಾತ ಎದುರಾಗಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ದಿನೇಶ್ ತ್ರಿವೇದಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಹೌದು.. ತೃಣಮೂಲ ಕಾಂಗ್ರೆಸ್ ಪಕ್ಷದ (TMC) ಮಾಜಿ ಸಂಸದ ಹಾಗೂ ಹಿರಿಯ ರಾಜಕಾರಣಿ ದಿನೇಶ್ ತ್ರಿವೇದಿ ಅವರು ದೆಹಲಿಯಲ್ಲಿ ಶನಿವಾರ ಅಧಿಕೃತವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು. ನಡ್ಡಾ ಅವರು ತ್ರಿವೇದಿ ಅವರಿಗೆ ಬಿಜೆಪಿ ಪಕ್ಷದ ಶಾಲು ಹೊದಿಸಿ, ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
Delhi: Dinesh Trivedi, who had resigned as TMC MP in Rajya Sabha on February 12th, joins BJP in the presence of the party's national president JP Nadda. Union Minister Piyush Goyal also present. pic.twitter.com/wCHlDbrcAz
— ANI (@ANI) March 6, 2021
DBSE: ಇನ್ಮುಂದೆ ದೆಹಲಿಗೂ ಸಿಗಲಿದೆ ತನ್ನದೇ ಆದ ಶಿಕ್ಷಣ ಮಂಡಳಿ, ಸಿಎಂ ಕೆಜ್ರಿವಾಲ್ ಘೋಷಣೆ
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ 70 ವರ್ಷದ ತ್ರಿವೇದಿ(Dinesh Trivedi), ನಾನು ಕಾಯುತ್ತಿದ್ದ ಸುವರ್ಣ ಕ್ಷಣ ಇದಾಗಿದ್ದು, ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ನಾನು ಸ್ಪರ್ಧಿಸುತ್ತೇನೆಯೋ ಇಲ್ಲವೋ ಆದರೆ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ. ಬಂಗಾಳ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದೆ. ಅವರಿಗೆ ಅಭಿವೃದ್ಧಿ ಬೇಕೇ ಹೊರತು ಭ್ರಷ್ಟಾಚಾರ ಅಥವಾ ಗಲಭೆಗಳಲ್ಲ. ನಾನು ಯಾವುದೇ ಸವಾಲಿಗೂ ಸಿದ್ಧವಿದ್ದು, ರಾಜಕಾರಣ ಆಟವಲ್ಲ. ಇದು ನಿಜಕ್ಕೂ ಗಂಭೀರ ವಿಚಾರವಾಗಿದ್ದು, ಇದನ್ನು ಸಿಎಂ ಮಮಮತಾ ಬ್ಯಾನರ್ಜಿ ಮರೆತಿದ್ದಾರೆ ಎಂದು ಟೀಕಿಸಿದರು.
West Bengal Assembly Election 2021: ರಾಂಪುರದಲ್ಲಿ ಬಾಂಬ್ ಸ್ಫೋಟ, 6 ಬಿಜೆಪಿ ಕಾರ್ಯಕರ್ತರಿಗೆ ಗಾಯ
ಅಂತೆಯೇ ಕುಟುಂಬ ರಾಜಕಾರಣವನ್ನು ಟೀಕಿಸಿದ ಅವರು, ಕೆಲ ಪಕ್ಷಗಳಿಗೆ ಒಂದು ನಿರ್ದಿಷ್ಟ ಕುಟುಂಬಗಳೇ ಸರ್ವೋಚ್ಛವಾಗಿರುತ್ತದೆ. ಆದರೆ ಬಿಜೆಪಿ ಪಕ್ಷ(BJP Party)ದಲ್ಲಿ ಮತದಾರರೇ ಸರ್ವೋಚ್ಛರಾಗಿದ್ದಾರೆ ಎಂದು ತ್ರಿವೇದಿ ಹೇಳಿದರು. ಇದೇ ವೇಳೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೈಗೊಂಡ ಕ್ರಮಗಳ ಕುರಿತು ಶ್ಲಾಘಿಸಿದ ತ್ರಿವೇದಿ, ನೆರೆಯ ರಾಷ್ಟ್ರಗಳನ್ನೂ ಒಳಗೊಂಡಂತೆ ಪ್ರಧಾನಿ ಮೋದಿ ನೆರವಾಗುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.
Election Commission Of India:ಕೊವಿನ್ ಸರ್ಟಿಫಿಕೆಟ್ ನಿಂದ ಪ್ರಧಾನಿ ಭಾವಚಿತ್ರ ತೆಗೆದುಹಾಕಲು EC ಆದೇಶ
ಇದಕ್ಕೂ ಮೊದಲು ತ್ರಿವೇದಿ ಸೇರ್ಪಡೆ ಕುರಿತು ಮಾತನಾಡಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರು, ದಿನೇಶ್ ತ್ರಿವೇದಿ ಅವರು ಸೈದ್ಧಾಂತಿಕ ನಾಯಕ. ಅವರು ಒಬ್ಬ ಉತ್ತಮ ವ್ಯಕ್ತಿ. ಆದರೆ ಈ ಹಿಂದೆ ತಪ್ಪು ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಅವರು ಉತ್ತಮ ಪಕ್ಷಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ನಟ ಮಿಥುನ್ ಚಕ್ರವರ್ತಿ
ಇನ್ನು ಬಂಗಾಳ ಚುನಾವಣೆ ಘೋಷಣೆಯಾಗಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ(Congress)ದ 10 ವರ್ಷಗಳ ಸರ್ಕಾರವನ್ನು ಸೋಲಿಸಿ ಅಧಿಕಾರದ ಗದ್ದುಗೆ ಹಿಡಿಯಲು ಪಣತೊಟ್ಟಿ ನಿಂತಿರುವ ಬಿಜೆಪಿ ಹಲವು ಟಿಎಂಸಿ ನಾಯಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಇದಕ್ಕೆ 70 ವರ್ಷದ ದಿವೇಶ್ ತ್ರಿವೇದಿ ಹೊಸ ಸೇರ್ಪಡೆ. ದಿನೇಶ್ ತ್ರಿವೇದಿ ಬಂಗಾಳ ಸಿಎಂ ಮತ್ತು ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದರು. 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಅವರನ್ನು ರಾಜ್ಯಸಭೆಗೆ ಪಕ್ಷ ಕಳುಹಿಸಲಾಗಿತ್ತು. ಆದರೆ ಬಳಿಕ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದಾಗಿ ತ್ರಿವೇದಿ ಅವರನ್ನು ಟಿಎಂಸಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಲಡಾಖ್ನಲ್ಲಿ ರಿಕ್ಟರ್ ಮಾಪಕದಲ್ಲಿ 3.6 ರಷ್ಟು ತೀವ್ರತೆಯ ಭೂಕಂಪನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.