AIADMK ಮೇಡಂ ಜಯಲಲಿತಾ ಪಕ್ಷವಲ್ಲ, ಬಿಜೆಪಿ ಗುಲಾಮ: AIMIM ಮುಖ್ಯಸ್ಥ

ಎಐಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಎಐಎಡಿಎಂಕೆ ಪಕ್ಷದ ಮೇಲೆ ಆರೋಪ ಮಾಡಿದ್ದು, ಈಗ ಈ ಪಕ್ಷ ಬಿಜೆಪಿಯ ಗುಲಾಮರಾಗಿ ಮಾರ್ಪಟ್ಟಿದೆ, ಅದು ಈಗ ಮೇಡಂ ಜಯಲಲಿತಾ ಅವರ ಪಕ್ಷವಲ್ಲ ಎಂದು ಹೇಳಿದ್ದಾರೆ.

Written by - Yashaswini V | Last Updated : Mar 13, 2021, 09:40 AM IST
  • ಎಐಎಡಿಎಂಕೆ ಇನ್ನು ಮುಂದೆ ಮೇಡಂ ಜಯಲಲಿತಾ ಅವರ ಪಕ್ಷವಲ್ಲ
  • ಈಗ ಅದು ಪ್ರಧಾನಿ ನರೇಂದ್ರ ಮೋದಿಯ ಗುಲಾಮ
  • ಈ ಪಕ್ಷ ಈಗ ಬಿಜೆಪಿಯ ಗುಲಾಮರಾಗಿ ಮಾರ್ಪಟ್ಟಿದೆ-ಒವೈಸಿ ವಾಗ್ದಾಳಿ
AIADMK ಮೇಡಂ ಜಯಲಲಿತಾ ಪಕ್ಷವಲ್ಲ, ಬಿಜೆಪಿ ಗುಲಾಮ: AIMIM ಮುಖ್ಯಸ್ಥ title=
Asaduddin owaisi (Image courtesy: ANI)

Tamil nadu Election 2021: ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದ್-ಉಲ್ ಮುಸ್ಲೀಮೀನ್ (AIMIM) ಮುಖ್ಯಸ್ಥ ಅಸದುದ್ದೀನ್ ಒವೈಸಿ (Asaduddin owaisi) ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಢಗಮ್ (ಎಐಎಡಿಎಂಕೆ) ಮೇಲೆ ಶುಕ್ರವಾರ ದಾಳಿ ನಡೆಸಿದ್ದಾರೆ. ಎಐಎಡಿಎಂಕೆ ಇನ್ನು ಮುಂದೆ ಮೇಡಂ ಜಯಲಲಿತಾ ಅವರ ಪಕ್ಷವಲ್ಲ, ಈಗ ಅದು ಪ್ರಧಾನಿ ನರೇಂದ್ರ ಮೋದಿಯ ಗುಲಾಮರಾಗಿದ್ದಾರೆ. ಈ ಪಕ್ಷ ಈಗ ಬಿಜೆಪಿಯ ಗುಲಾಮರಾಗಿ ಮಾರ್ಪಟ್ಟಿದೆ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.

ಟಿವಿ ಚಾನೆಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸದುದ್ದೀನ್ ಒವೈಸಿ  (Asaduddin owaisi), ನಾನು ಭಾರತೀಯ ಪ್ರಜಾಪ್ರಭುತ್ವದ ಲೈಲಾ ಮತ್ತು ಎಲ್ಲರೂ ನನ್ನ ಮಜ್ನು ಎಂದು ಹೇಳಿದರು. ನಮ್ಮ ಪಕ್ಷ ಎಲ್ಲೆಲ್ಲಿ ಚುನಾವಣೆಗೆ ಸ್ಪರ್ಧಿಸಲು ಹೋದರೂ ನಮ್ಮ ಒಪ್ಪಂದವನ್ನು ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಹೇ ಸಹೋದರ, ನಾವು ಚುನಾವಣೆಗಳಲ್ಲಿ ಹೋರಾಡಬೇಕಾದರೆ, ನಾವು ಬಿಹಾರದ ಸೀಮಾಂಚಲ್ನಿಂದಲೂ ಹೋರಾಡುತ್ತೇವೆ, ನಾವು ಬಂಗಾಳದೊಂದಿಗೆ ಹೋರಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ - ತಮಿಳುನಾಡು ಚುನಾವಣೆ: ಕಾಂಗ್ರೆಸ್ ಗೆ ಡಿಎಂಕೆಯಿಂದ 25 ಸೀಟು ಹಂಚಿಕೆ

ಈ ಹಿಂದೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ಎನ್‌ಆರ್‌ಸಿ (NRC) ವಿಷಯವನ್ನು ಬಿಜೆಪಿ ಮರೆತಿದೆ ಎಂದು ಬಿಜೆಪಿ ವಿರುದ್ಧವೂ ವಾಗ್ಧಾಳಿ ನಡೆಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಎನ್‌ಆರ್‌ಸಿಯ ಅಂತಿಮ ಪಟ್ಟಿ ಬಿಜೆಪಿಯ ಮನಸ್ಸಿನ ಪ್ರಕಾರ ಬರದಿದ್ದರೆ ಪಕ್ಷವೂ ತನ್ನ ಹೆಸರನ್ನು ತೆಗೆದುಕೊಳ್ಳಲು ಹಿಂಜರಿಯುತ್ತದೆ ಎಂದರು.

ಇದನ್ನೂ ಓದಿ - ಹಿಂದುತ್ವದ ಕುರಿತು Asaduddin Owaisi ವಿವಾದಾತ್ಮಕ ಟಿಪ್ಪಣಿ

ಬಿಹಾರ್ ಚುನಾವಣೆಯಲ್ಲಿನ (Bihar Assembly Elections) ಯಶಸ್ಸಿನ ನಂತರ ಒವೈಸಿ ಪಕ್ಷ ಎಐಐಎಂಐಎಂ  (AIMIM) ಹೆಚ್ಚು ಉತ್ಸುಕವಾಗಿದ್ದು ದೇಶಾದ್ಯಂತ ತನ್ನ ಪಕ್ಷವನ್ನು ವಿಸ್ತರಿಸಲು ಬಯಸಿದೆ. ಗುಜರಾತ್ ನಾಗರಿಕ ಚುನಾವಣೆಯ ಯಶಸ್ಸಿನ ನಂತರ, ಈಗ ಒವೈಸಿ ಪಕ್ಷವು ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಹೆಚ್ಚು ಉತ್ಸುಕವಾಗಿದೆ ಎಂಬುದು ಗಮನಾರ್ಹವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News