IPPB Transaction Charge: 1 ಏಪ್ರಿಲ್ 2021 ರಿಂದ ಹಣ ಠೇವಣಿ ಅಥವಾ ಹಣ ಹಿಂಪಡೆಯುವುದರ ಜೊತೆಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AEPS)ಗೆ ಶುಲ್ಖ ವಿಧಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಿರ್ಧರಿಸಿದೆ.
ನವದೆಹಲಿ: IPPB Transaction Charge - ಒಂದು ವೇಳೆ ನೀವೂ ಕೂಡ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)ನಲ್ಲಿ ನಿಮ್ಮ ಖಾತೆ ತೆರೆದಿದ್ದರೆ, ಈ ಸುದ್ದಿಯನ್ನೊಮ್ಮೆ ತಪ್ಪದೆ ಓದಿ. 1 ಏಪ್ರಿಲ್ 2021 ರಿಂದ ಹಣ ಠೇವಣಿ ಅಥವಾ ಹಣ ಹಿಂಪಡೆಯುವುದರ ಜೊತೆಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AEPS)ಗೆ ಶುಲ್ಖ ವಿಧಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ನಿಮ್ಮ ಫ್ರೀ ಲಿಮಿಟ್ ಮುಕ್ತಾಯಗೊಂಡ ಬಳಿಕ ಮಾತ್ರ ನಿಮ್ಮಿಂದ ಈ ಶುಲ್ಕ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ, ಒಂದು ವೇಳೆ ನಿಮ್ಮ ಬಳಿ ಉಚಿತ ಟ್ರಾನ್ಸಾಕ್ಶನ್ ಲಿಮಿಟ್ ಮುಗಿದು ಹೋದರೆ ಮಾತ್ರ ನೀವು ಈ ಶುಲ್ಕ ಪಾವತಿಸಬೇಕು.
ಇದನ್ನೂ ಓದಿ- Bank Merger - ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಬೇಸಿಕ್ ಸೇವಿಂಗ್ ಅಕೌಂಟ್ - ಒಂದು ವೇಳೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ನೀವು ಬೇಸಿಕ್ ಸೇವಿಂಗ್ಸ್ ಅಕೌಂಟ್ ಹೊಂದಿದ್ದರೆ, ನೀವು ತಿಂಗಳಲ್ಲಿ 4 ಬಾರಿ ಉಚಿತ ಹಣ ಹಿಂಪಡೆಯಬಹುದು. ಅದಾದ ಬಳಿಕ ನೀವು ಪ್ರತಿ ಟ್ರಾನ್ಸಾಕ್ಶನ್ ಮೇಲೆ ರೂ.25 ಅಥವಾ ನಿಮ್ಮ ವಹಿವಾಟಿನ ಒಟ್ಟು ಮೊತ್ತದ ಶೇ.0.50ರಷ್ಟು ಶುಲ್ಕ ಪಾವತಿಸಬೇಕು. ಆದರೆ ಇದರಲ್ಲಿ ಹಣ ಠೇವಣಿ ಮಾಡಲು ಯಾವುದೇ ರೀತಿಯ ಚಾರ್ಜ್ ವಿಧಿಸಲಾಗುವುದಿಲ್ಲ.
2. ಸೇವಿಂಗ್ ಅಥವಾ ಕರೆಂಟ್ ಅಕೌಂಟ್ - ಪೋಸ್ಟ್ ಆಫೀಸ್ ನಲ್ಲಿ ಒಂದು ವೇಳೆ ನೀವು ಉಳಿತಾಯ ಖಾತೆ (ಬೇಸಿಕ್ ಸೇವಿಂಗ್ ಅಕೌಂಟ್ ಹೊರತುಪಡಿಸಿ) ಅಥವಾ ಕರೆಂಟ್ ಅಕೌಂಟ್ ಹೊಂದಿದ್ದರೆ. ನಿಮಗೆ ಒಂದು ತಿಂಗಳ ಅವಧಿಯಲ್ಲಿ ರೂ.25,000 ವರೆಗೆ ಉಚಿತವಾಗಿ ವಿಥ್ ಡ್ರಾ ಮಾಡಬಹುದು. ಈ ಲಿಮಿಟ್ ದಾಟಿದ ಬಳಿಕ ನೀವು ಹಿಂಪಡೆಯುವ ಒಟ್ಟು ಹಣದ ಶೇ.0.50 ರಷ್ಟು ಹಣವನ್ನು ಶುಲ್ಕವಾಗಿ ಪಾವತಿಸಬೇಕು ಅಥವಾ ರೂ.25 ಪ್ರತಿ ವಹಿವಾಟಿಗೆ ಪಾವತಿಸಬೇಕು. ಒಂದು ವೇಳೆ ನೀವು ಈ ಖಾತೆಯಲ್ಲಿ ನಾನಾ ಡೆಪಾಸಿಟ್ ಮಾಡಿದರೂ ಕೂಡ ಅದಕ್ಕೂ ಲಿಮಿಟ್ ಇದೆ. ಪ್ರತಿ ತಿಂಗಳು ನೀವು ಉಚಿತವಾಗಿ ರೂ.10000ವರೆಗೆ ಉಚಿತ ಡೆಪಾಸಿಟ್ ಮಾಡಬೇಕು. ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ಡಿಪಾಸಿಟ್ ಮಾಡಿದಾಗ ಅದಕ್ಕೂ ಕೂಡ ಮೇಲೆ ಸೂಚಿಸಲಾಗಿರುವಂತೆ ಶುಲ್ಕ ಪಾವತಿಸಬೇಕು
3. AEPS ವಹಿವಾಟು - ಆಧಾರ್ ಆಧಾರಿಗ AEPS ವಹಿವಾಟುಗಳನ್ನು ನೀವು ಇಂಡಿಯಾ ಪೋಸ್ಟ್ ಆಫೀಸ್ ನಲ್ಲಿ ಅನಿಯಮಿತವಾಗಿ ಉಚಿತವಾಗಿ ಮಾಡಬಹುದು. - ನಾನ್-AEPS ನೆಟ್ವರ್ಕ್ ಮೇಲೆ ತಿಂಗಳಿಗೆ 3 ಉಚಿತ ವಹಿವಾಟು ನಡೆಸಬಹುದು. ಇದರಲ್ಲಿ ಹಣ ಜಮೆ, ಹಿಂಪಡೆಯುವಿಕೆ ಮಿನಿ ಸ್ಟೇಟ್ಮೆಂಟ್ ಕೂಡ ಶಾಮೀಲಾಗಿವೆ. - ಉಚಿತ ಲಿಮಿಟ್ ದಾಟಿದ ಬಳಿಕ ಹಣ ಠೇವಣಿಗೆ ರೂ.20 ಹಾಗೂ ಹಣ ಹಿಂಪಡೆಯಲು ರೂ.20 ಪಾವತಿಸಬೇಕು. - ಮಿನಿ ಸ್ಟೇಟ್ಮೆಂಟ್ ಪಡೆಯಲು ರೂ.5 ಪಾವತಿಸಬೇಕು. ಉಚಿತ ಲಿಮಿಟ್ ದಾಟಿದ ಬಳಿಕ ಫಂಡ್ ಟ್ರಾನ್ಸ್ಫರ್ ಮಾಡಿದಾಗ ಟ್ರಾನ್ಸ್ಫರ್ ಮಾಡಲಾಗಿರುವ ಒಟ್ಟು ಮೊತ್ತದ್ದ ಶೇ.1ರಷ್ಟು ಮತ್ತು ಗರಿಷ್ಟ ರೂ.20 ಪಾವತಿಸಬೇಕು. - ಯಾವುದೇ ಶುಲ್ಕಗಳು ಜಿಎಸ್ಟಿ ಒಳಗೊಂಡಿಲ್ಲ. ಅದನ್ನು ನೀವು ಪ್ರತ್ಯೇಕ ಭರಿಸಬೇಕು.
4. ಈ ಸೌಲಭ್ಯ ಸಿಗುತ್ತದೆ - ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್ ATM ಕಾರ್ಡ್, ಫಂಡ್ ಟ್ರಾನ್ಸ್ಫರ್, ಬಿಲ್ ಪೇಮೆಂಟ್, ರಿಚಾರ್ಜ್, ನೆಟ್ ಬ್ಯಾಂಕಿಂಗ್ ಗಳಂತಹ ಆವಶ್ಯಕ ಸೌಕರ್ಯಗಳನ್ನು ಒದಗಿಸುತ್ತದೆ.