ಬೆಂಗಳೂರು: ಗೋವಾದಲ್ಲಿ ಕನ್ನಡಿಗರ ಮನೆಗಳ ಧ್ವಂಸ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿರಾಶ್ರಿತ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಿ, ಪರಿಹಾರ ನೀಡುವಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಗೋವಾದ ಬೈನಾ ಬೀಚ್ ನಲ್ಲಿ ವಾಸವಾಗಿದ್ದ 55 ಕನ್ನಡಿಗರ ಬಡ ಕುಟುಂಬಗಳನ್ನು ತೆರವುಗೊಳಿಸಲಾಗಿದೆ. ತೆರವುಗೊಲಿಸಗಾದ ಕುಟುಂಬಗಳಿಗೆ ಗೋವಾ ಸರ್ಕಾರ ಚುನಾವಣಾ ಗುರುತಿನ ಪತ್ರ ಮತ್ತು ಆಧಾರ್ ಕಾರ್ಡ್ ನೀಡಿದೆ. ಅಲ್ಲದೆ ತೆರವುಗೊಲಿಸಲಾದ ಬಹುತೇಕ ಕುಟುಂಬಗಳು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾನವೀಯ ಆಧಾರದ ಮೇಲೆ ಅವರಿಗೆ ನೆಲೆ ಒದಗಿಸಬೇಕು ಎಂದು ಸಿಎಂ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪುನರ್ವಸತಿ ಕಲ್ಪಿಸುವ ವರೆಗೂ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಪುನರ್ವಸತಿ ಕಲ್ಪಿಸಲು ಗೋವಾ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಕರ್ನಾಟಕ ಕೊಡಲಿದೆ ಎಂದು ಪತ್ರದಲ್ಲಿ ಸಿಎಂ ಉಲ್ಲೇಖಿಸಿದ್ದಾರೆ.