Covid-19 Vaccination India: ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ, ಸರ್ಕಾರದ ಮಹತ್ವದ ನಿರ್ಣಯ

Coronavirus Vaccination Program In India - ಕರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶದಲ್ಲಿ ಮುಂದುವರೆದಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕರೋನದ ವಿರುದ್ಧ ಸಾಧ್ಯವಿರುವ ಎಲ್ಲ ರಕ್ಷಣಾ ಪ್ರತಿತಂತ್ರ ರೂಪಿಸುವತ್ತ ತಮ್ಮ ಗಮನ ಕೇಂದ್ರೀಕರಿಸಿವೆ ಮತ್ತು ಇದಕ್ಕಾಗಿ ಲಸಿಕೆ ಅತ್ಯಂತ ಸೂಕ್ತವಾದ ಮಾರ್ಗವಾಗಿದೆ.  

Written by - Nitin Tabib | Last Updated : Mar 23, 2021, 07:47 PM IST
  • ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕಾರೋನಾ ವ್ಯಾಕ್ಸಿನ್,
  • ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಅವರಿಂದ ಮಾಹಿತಿ.
  • ದೇಶಾದ್ಯಂತ ವ್ಯಾಕ್ಸಿನ್ ಕೊರತೆ ಇಲ್ಲ ಎಂದ ಜಾವಡೆಕರ್.
Covid-19 Vaccination India: ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ, ಸರ್ಕಾರದ ಮಹತ್ವದ ನಿರ್ಣಯ title=
Coronavirus Vaccination In India (Photo Corutesy-ANI)

Covid-19 Vaccination India:ಕೊರೊನಾ ವ್ಯಾಕ್ಸಿನೆಶನ್ ಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು. ಈ ಕುರಿತು ಘೋಷಣೆ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ ದೇಶಾದ್ಯಂತ ಕೊರೊನಾ ವ್ಯಾಕ್ಸಿನ್ (Coronavaccine) ಸಾಕಷ್ಟು ಪ್ರಮಾಣಗಳು ಲಭ್ಯವಿದ್ದು, ವ್ಯಾಕ್ಸಿನ್ ನ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಇದುವೆರೆಗೆ 45 ರಿಂದ 60 ವರ್ಷ ವಯಸ್ಸಿನ ಮತ್ತು ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿತ್ತು. 

ಏತನ್ಮಧ್ಯೆ ಪಂಜಾಬ್ ನಿಂದ ಜಿನೋಮ್ ಸಿಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿದ್ದ 401 ಸ್ಯಾಂಪಲ್ ಗಳಲ್ಲಿ ಶೇ.81 ರಷ್ಟು ಸ್ಯಾಂಪಲ್ ಗಳಲ್ಲಿ ಬ್ರಿಟನ್ ಕೊರೊನಾ ವೇರಿಯಂಟ್ ಇರುವುದು ಪುಷ್ಟಿಯಾಗಿದೆ. ಯುವಕರು ಅತಿ ಹೆಚ್ಚಿನ ಪ್ರಮಾಣದಲ್ಲಿ ಇದಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆತಂಕಕ್ಕೊಳಗಾಗಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿರುವ ಮುಖ್ಯಮಂತ್ರಿಗಳ ಸಲಹೆಗಾರ ರವೀಲ್ ತುಕರಾಲ್, ವ್ಯಾಕ್ಸಿನೆಶನ್ ಕಾರ್ಯಕ್ರಮದಲ್ಲಿ 60ಕ್ಕಿಂತ ಕಡಿಮೆ ವಯಸ್ಸಿನವರನ್ನು ಕೂಡ ಶಾಮೀಲುಗೊಳಿಸಲು ಮನವಿ ಮಾಡಿದ್ದರು. ಪಂಜಾಬ್ ಗೂ ಮೊದಲು ದೆಹಲಿ, ಮಹಾರಾಷ್ಟ್ರ ರಾಜ್ಯಸರ್ಕಾರ ಗಳೂ ಕೂಡ ಯುವಕರ ವ್ಯಾಕ್ಸಿನೆಶನ್ (Coronavirus Vaccine In India) ಗಾಗಿ ಮನವಿ ಮಾಡಿವೆ.

ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ  ಮತ್ತೊಮ್ಮೆ ಹೆಚ್ಚುತ್ತಿವೆ. ಇದುವರೆಗೆ ದೇಶದಲ್ಲಿ 4.72 ಕೋಟಿ ಕರೋನಾ ಲಸಿಕೆ (Covaxin) ಡೋಸ್ ಗಳನ್ನೂನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಸೋಮವಾರ ಸಂಜೆ 7 ಗಂಟೆಯವರೆಗೆ ಒಟ್ಟು 4,72,07,134 ಲಸಿಕೆ ಪ್ರಮಾಣಗಳನ್ನು ನೀಡಲಾಗಿದೆ.

ಇದನ್ನೂ ಓದಿ-Covid-19 Vaccine: Covishield Vaccineನ ಎರಡು ಪ್ರಮಾಣಗಳ ನಡುವಿನ ಅಂತರ ಕೇಂದ್ರ ಸರ್ಕಾರ 8 ವಾರಕ್ಕೆ ಹೆಚ್ಚಿಸಿದ್ಯಾಕೆ ಗೊತ್ತಾ?

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, 45 ವರ್ಷಕ್ಕಿಂತ ಮೇಲ್ಪಟ್ಟ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 3,34,367 ಫಲಾನುಭವಿಗಳಿಗೆ, 60 ವರ್ಷಕ್ಕಿಂತ ಮೇಲ್ಪಟ್ಟ 13,07,614 ಫಲಾನುಭವಿಗಳಿಗೆ ಲಸಿಕೆಯ ಪ್ರಮಾಣವನ್ನು (Vaccination Program In India) ನೀಡಲಾಗಿದೆ. ಇದೇ ವೇಳೆ, 40,976 ಆರೋಗ್ಯ ಮತ್ತು 72,153 ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯ(Covishield) ಮೊದಲ ಡೋಸ್ ನೀಡಲಾಗಿದ್ದರೆ, 44,728 ಆರೋಗ್ಯ ಮತ್ತು 1,65,797 ಮುಂಚೂಣಿ ಕಾರ್ಮಿಕರಿಗೆ ಎರಡನೇ ಡೋಸ್ ಕರೋನಾ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ-ಮಹಿಳೆಯರೇ ಗಮನಿಸಿ! Corona Vaccine ನಿಮ್ಮ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರಲು ಕಾರಣ ಏನು ಗೊತ್ತೇ?

ಭಾರತದಲ್ಲಿ ವ್ಯಾಕ್ಸಿನೆಶನ್ ಅಭಿಯಾನ ಯಾವಾಗ ಆರಂಭಗೊಂಡಿದೆ?
ಭಾರತದಲ್ಲಿ ಲಸಿಕೆ ಅಭಿಯಾನದ ಮೊದಲ ಹಂತವು ಮನವರಿ 16, 2020 ರಿಂದ ಆರಂಭಗೊಂಡಿದೆ.  ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡಲಾಯಿತು, ಅಂದರೆ ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ಆರೋಗ್ಯ ಸೇವೆಗೆ ಸಂಬಂಧಿತ ಜನರಿಗೆ. ಇದಲ್ಲದೆ, ಮುಂಚೂಣಿ ಕಾರ್ಯಕರ್ತರಿಗೆ ಅಂದರೆ ಪೊಲೀಸರು, ಅರೆಸೈನಿಕ ಪಡೆಗಳು ಮತ್ತು ಮಿಲಿಟರಿ ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಗಿದೆ. ಲಸಿಕೆಯ ಎರಡನೇ ಡೋಸ್ ಅನ್ನು 14 ಲಕ್ಷ ಜನರಿಗೆ ನೀಡಲಾಗಿದೆ. ನಂತರ ಮಾರ್ಚ್ 1 ರಿಂದ ಎರಡನೇ ಹಂತದ ವ್ಯಾಕ್ಸಿನೇಷನ್ ಪ್ರಾರಂಭವಾಗಿದೆ. ಎರಡನೇ ಹಂತದಲ್ಲಿ, ಜನರು ಈಗ ಲಸಿಕೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಸಚಿವರು ಈ ಹಂತದಲ್ಲಿ ಲಸಿಕೆ ಪಡೆದಿದ್ದಾರೆ. ಜುಲೈ ವೇಳೆಗೆ 30 ಕೋಟಿ ಜನರಿಗೆ ಲಸಿಕೆಗಳನ್ನು ನೀಡುವ ಗುರಿ ಸರ್ಕಾರ ಹೊಂದಿದೆ.

ಇದನ್ನೂ ಓದಿ-AstraZeneca ವ್ಯಾಕ್ಸಿನ್ ನಿಂದ ರಕ್ತ ಹೆಪ್ಪುಗಟ್ಟುವಿಕೆಯ ದೂರು, ಈ ದೇಶಗಳಲ್ಲಿ ಲಸಿಕೆ ಬಳಕೆಗೆ ಬ್ಯಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News