Astrology : ಮುಂಜಾನೆ ಸೂರ್ಯನಿಗೆ ನೀರು ಅರ್ಪಿಸುವುದರಿಂದ ಅದ್ಭುತ ಪ್ರಯೋಜನಗಳಿವೆ

ಸೂರ್ಯನನ್ನು (Sun) ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಎಂದು ಕರೆಯಲಾಗುತ್ತದೆ. ಅನಾದಿ ಕಾಲದಿಂದಲೂ ಸೂರ್ಯನಿಗೆ ನೀರು ಅರ್ಪಿಸುವ ಪರಂಪರೆ ನಡೆದುಕೊಂಡು ಬಂದಿದೆ. ವೇದ ಮತ್ತು ಪುರಾಣಗಳಲ್ಲಿಯೂ ಸೂರ್ಯನಿಗೆ ಜಲ (water) ಸಮರ್ಪಣೆ ಬಗ್ಗೆ ಉಲ್ಲೇಖವಿದೆ. 

Written by - Ranjitha R K | Last Updated : Mar 25, 2021, 03:28 PM IST
  • ಪ್ರತಿದಿನ ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ಅನೇಕ ಅನುಕೂಲಗಳಿವೆ
  • ಸೂರ್ಯನಿಗೆ ಅರ್ಪಿಸುವ ಒಂದು ಲೋಟ ನೀರು ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ
  • ಉತ್ತಮ ಆರೋಗ್ಯ ಮತ್ತು ಗೌರವ ಪ್ರಾಪ್ತಿಯಾಗುತ್ತದೆ
Astrology : ಮುಂಜಾನೆ ಸೂರ್ಯನಿಗೆ  ನೀರು ಅರ್ಪಿಸುವುದರಿಂದ ಅದ್ಭುತ ಪ್ರಯೋಜನಗಳಿವೆ title=
ಪ್ರತಿದಿನ ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ಅನೇಕ ಅನುಕೂಲಗಳಿವೆ (file photo)

ನವದೆಹಲಿ : ವರ್ಷಕ್ಕೂ ಹೆಚ್ಚು ಕಾಲ, ಜನರು ಕರೋನಾ ವೈರಸ್ (Coronavirus) ಭಯದಿಂದಲೇ ದಿನ ಕಳೆಯುವಂತಾಗಿದೆ. ಪ್ರತಿ ದಿನ ಪ್ರತಿ ಕ್ಷಣ ಸೋಂಕು ತಗಲದಂತೆ ಏನು ಮಾಡಬೇಕು ಎಂಬ ಬಗ್ಗೆ ಯೋಚನೆಯಲ್ಲಿ ಕಳೆಯುತ್ತಿದ್ದಾನೆ.  ಎತ್ತ ಹೋದರು ಬಂದರೂ ಸೋಂಕು ತಗಲಿರಬಹುದೇ ಎಂದು ಚಿಂತಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿಯನ್ನು (Immunity)  ಬಲಪಡಿಸುವತ್ತ ಹೆಚ್ಚಿನ ಗಮನ ಹರಿಸುತ್ತಾನೆ. ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು  ಏನು ಮಾಡಬೇಕು ಎನ್ನುವುದನ್ನು ನಮ್ಮ ಗ್ರಂಥಗಳಲ್ಲಿಯೇ ಉಲ್ಲೇಖಿಸಲಾಗಿದೆ.  ಹೌದು ಸೂರ್ಯನಿಗೆ  ಒಂದು ಲೋಟ ನೀರನ್ನು ಅರ್ಪಿಸುವುದರಿಂದ ಆರೋಗ್ಯ (Health) ವೃದ್ಧಿಯಾಗುತ್ತದೆಯಂತೆ.  

ಸೂರ್ಯನಿಗೆ ಜಲ ಸಮರ್ಪಿಸುವುದರಿಂದ ಆಗುವ ಪ್ರಯೋಜನ : 
ಸೂರ್ಯನನ್ನು (Sun) ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಎಂದು ಕರೆಯಲಾಗುತ್ತದೆ. ಅನಾದಿ ಕಾಲದಿಂದಲೂ ಸೂರ್ಯನಿಗೆ ನೀರು ಅರ್ಪಿಸುವ ಪರಂಪರೆ ನಡೆದುಕೊಂಡು ಬಂದಿದೆ. ವೇದ ಮತ್ತು ಪುರಾಣಗಳಲ್ಲಿಯೂ ಸೂರ್ಯನಿಗೆ ಜಲ (water) ಸಮರ್ಪಣೆ ಬಗ್ಗೆ ಉಲ್ಲೇಖವಿದೆ. ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ಏನು ಪ್ರಯೋಜನ ಮತ್ತು ನೀರನ್ನು ಅರ್ಪಿಸುವಾಗ ಯಾವ ಅಂಶಗಳನ್ನು ನೆನಪಿನಲ್ಲಿಡಬೇಕು ಎಂಬ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : Holi precautions: ಗರ್ಭಿಣಿ ಮಹಿಳೆಯರೇ ಹೋಳಿ ಆಡುವಾಗ ಇರಲಿ ಎಚ್ಚರ

1. ಆರೋಗ್ಯ ಭಾಗ್ಯ - ಸೂರ್ಯನನ್ನು ಪಾಸಿಟಿವ್ ಎನರ್ಜಿಯ (Positive energy) ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸೂರ್ಯನ ಕಿರಣಗಳು ದೇಹದ ಮೇಲೆ ಬಿದ್ದರೆ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು (Bacteria) ತೆಗೆದುಹಾಕುತ್ತದೆ.  ಪ್ರತಿದಿನ ಸೂರ್ಯನಿಗೆ ನೀರು ಅರ್ಪಿಸುವುದ ಆತ್ಮ ಬಳ ಹೆಚ್ಚುತ್ತದೆ. ಅಲ್ಲದೆ, ಸೂರ್ಯನಿಗೆ ಜಲ ಸಮರ್ಪಿಸುವುದರಿಂದ ಎಲ್ಲಾ ರೀತಿಯ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.  

2. ದಿನವಿಡೀ ಚೈತನ್ಯ ತುಂಬಿರುತ್ತದೆ :  ನಿಯಮಿತವಾಗಿ ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ನಮ್ಮ ದೇಹದಲ್ಲಿ ಸೂರ್ಯನ ಪ್ರಭಾವ ಹೆಚ್ಚುತ್ತದೆ. ಪರಿಣಾಮ  ನಮ್ಮ ಇಡಿ ದಿನ ಚೈತನ್ಯದಿಂದ ಕೂಡಿರುತ್ತದೆ. ಯಾವುದೇ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Vastu Tips : ದಾರಿಯಲ್ಲಿ ಹಣ ಸಿಕ್ಕಿದರೆ ಶುಭ ಫಲಾನಾ ? ಅಶುಭಾನಾ ?

3. ಗೌರವದ ಮತ್ತು ಸಾಧನೆಯ ಪ್ರತೀಕ : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಸೂರ್ಯ ವ್ಯಕ್ತಿಗೆ ಘನತೆ ಗೌರವ ಕರುಣಿಸುತ್ತಾನೆ. ಹಾಗಾಗಿ ಕೆಲಸಕ್ಕೆ ಸಂಬಂಧಪಟ್ಟಂತೆ ಯಾವುದಾದರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಪ್ರತಿ ದಿನ ಬೆಳಗ್ಗೆ ಸೂರ್ಯನಿಗೆ ನೀರು ಅರ್ಪಿಸುವ ಕೆಲಸ ಶುರು ಮಾಡಿಕೊಳ್ಳಿ. ಇದರಿಂದ ನಿಮಗೆ ಕೆಲಸದಲ್ಲಿ  ಉನ್ನತ ಅಧಿಕಾರಿಗಳ ಬೆಂಬಲ ಸಿಗುತ್ತದೆ. ಕೆಲಸದಲ್ಲಿ ಯಶಸ್ಸು, ಗೌರವ ಎಲ್ಲವೂ ಪ್ರಾಪ್ತವಾಗುತ್ತದೆ.  

4. ಜಾತಕ ದೋಷವು ಪರಿಹಾರವಾಗುತ್ತದೆ : ಜ್ಯೋತಿಷ್ಯದ ಪ್ರಕಾರ ಯಾರ ಜಾತಕದಲ್ಲಿ ಸೂರ್ಯನ ಗ್ರಹವು ದುರ್ಬಲವಾಗಿರುತ್ತದೆಯೋ ಆ ವ್ಯಕ್ತಿನಿತ್ಯವೂ ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಎದುರಾಗುವ ಸಮಸ್ಯೆ ಪರಿಹಾರವಾಗುತ್ತದೆ.  

ಸೂರ್ಯನಿಗೆ ನೀರು ಅರ್ಪಿಸುವ ಸರಿಯಾದ ಕ್ರಮ : 
ಸೂರ್ಯನಿಗೆ ನೀರನ್ನು ಅರ್ಪಿಸುವ ಮೊದಲು, ಅನುಸರಿಸಬೇಕಾದ ನಿಯಮಗಳು ಇವು : 
- ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು, ಸ್ನಾನ ಮಾಡಿ ತಾಮ್ರದ ಲೋಟದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಿ.
-ಸೂರ್ಯ ಉದಯಿಸಿದ (Sunrise)1 ಗಂಟೆಯೊಳಗೆ  ನೀರನ್ನು ಅರ್ಪಿಸುವುದು ಉತ್ತಮ ಫಲ ನೀಡುತ್ತದೆ- 
-  ಸೂರ್ಯನಿಗೆ ನೀರನ್ನು ಅರ್ಪಿಸುವ ಮೊದಲು, ನೀರಿಗೆ ಒಂದು ಚಿಟಿಕೆ ಕೆಂಪು ಶ್ರೀಗಂಧವನ್ನು ಸೇರಿಸಿ
- ಸೂರ್ಯನಿಗೆ ನೀರು ಅರ್ಪಿಸುವಾಗ ಆ ನೀರಿನಲ್ಲಿ ಕೆಂಪು ಹೂವು (Red flower)ಹಾಕುವುದನ್ನು ಮರೆಯಬೇಡಿ  
- ಸೂರ್ಯನಿಗೆ ನೀರು ಅರ್ಪಿಸುವ ವೇಳೆ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು
- ನೀರನ್ನು ಅರ್ಪಿಸುವ ವೇಳೆ ಯಾವುದೇ ಕಾರಣಕ್ಕೂ ನೀರು ನಿಮ್ಮ ಕಾಲುಗಳ ಮೇಲೆ ಚೆಲ್ಲದಂತೆ ನೋಡಿಕೊಳ್ಳಿ 

ಇದನ್ನೂ ಓದಿ Holi 2021 Skin Care Tips: ಈ ರೀತಿ ಬಣ್ಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News