India vs England, 2nd ODI: ಬೆನ್ ಸ್ಟೋಕ್, ಬೇರ್ ಸ್ಟೋವ್ ಅಬ್ಬರಕ್ಕೆ ಭಾರತ ತತ್ತರ

ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

Last Updated : Mar 26, 2021, 10:36 PM IST
 India vs England, 2nd ODI: ಬೆನ್ ಸ್ಟೋಕ್, ಬೇರ್ ಸ್ಟೋವ್ ಅಬ್ಬರಕ್ಕೆ ಭಾರತ ತತ್ತರ  title=

ನವದೆಹಲಿ: ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

ಇಂಗ್ಲೆಂಡ್ ತಂಡದ ಪರವಾಗಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಬೆನ್ ಸ್ಟೋಕ್ (99) ಜಾನಿ ಬೇರ್ ಸ್ಟೋವ್ (124) ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ತಂಡವು 43.3 ಓವರ್ ಗಳಲ್ಲಿ 337 ರನ್ ಗಳ ಗೆಲುವಿನ ಗುರಿಯನ್ನು ತಲುಪಿತು.ಇದಕ್ಕೂ ಮೊದಲು ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದಾಗಿ ಭಾರತ ತಂಡವು 50 ಓವರ್ ಗಳಲ್ಲಿ  6 ವಿಕೆಟ್ ಗಳನ್ನು ಕಳೆದು ಕೊಂಡು 336 ರನ್ ಗಳನ್ನು ಗಳಿಸಿತು.

ಇದನ್ನೂ ಓದಿ: India vs England, 2nd ODI: ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಶತಕ, ಬೃಹತ್ ಗುರಿ ನೀಡಿದ ಭಾರತ

ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದು ಕೊಂಡ ಇಂಗ್ಲೆಂಡ್ ತಂಡದ ಲೆಕ್ಕಾಚಾರ ತಲೆಕೆಳಗಾಗುವಂತೆ ಭಾರತ ತಂಡದ ಬ್ಯಾಟ್ಸ್ಮನ್ ಗಳು ಅಬ್ಬರಿಸಿದರು. ಆರಂಭದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರ ವಿಕೆಟ್ ಗಳನ್ನು ತಂಡದ ಮೊತ್ತ 37 ಆಗುವಷ್ಟರಲ್ಲಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ (66) ಹಾಗೂ ಕೆ.ಎಲ್ ರಾಹುಲ್ (108) ನೆರವಾದರು. ತದನಂತರ ವೇಗದ ಬ್ಯಾಟಿಂಗ್ ಮಾಡಿದ ರಿಶಬ್ ಪಂತ್ ಕೇವಲ 40 ಎಸೆತಗಳಲ್ಲಿ ಭರ್ಜರಿ ಏಳು ಸಿಕ್ಸರ್ ಹಾಗೂ ಮೂರು ಬೌಂಡರಿ ಗಳ ಮೂಲಕ 77 ರನ್ ಗಳಿಸಿ ಟಾಮ್ ಕೊರಿನ್ ಅವರಿಗೆ ವಿಕೆಟ್ ಒಪ್ಪಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News