ಈ App ಇದ್ದರೆ ಸುಲಭವಾಗಿ ಪತ್ತೆ ಮಾಡಬಹುದು ಕಳೆದುಹೋದ Gadget

ಆಪಲ್ ಕಂಪನಿಯು   Find My Appನ ಅಪ್ಡೇಟೆಡ್ ವರ್ಷನ್  ಅನ್ನು ಬಿಡುಗಡೆ ಮಾಡಿದೆ.  ಇದು Apple  ಕಂಪನಿಯ   Find My Network ನ ಖಾಸಗಿ ಮತ್ತು ಸುರಕ್ಷಿತ ಹುಡುಕಾಟ ಸಾಮರ್ಥ್ಯಗಳನ್ನು ಬಳಸಲು ಥರ್ಡ್ ಪಾರ್ಟಿ ಉತ್ಪನ್ನಗಳಿಗೆ ಅನುಮತಿ ನೀಡುತ್ತದೆ.

Written by - Ranjitha R K | Last Updated : Apr 9, 2021, 09:42 AM IST
  • ನಿಮ್ಮ ಡಿವೈಸ್ ಗಳು ಕಳೆದುಹೋಗುವ ಚಿಂತೆಯಿಲ್ಲ
  • ಡಿವೈಸ್ ಗಳಿಗೆ ಸಿಗಲಿದೆ Apple ಭದ್ರತೆ
  • ಹೊಸ ಅಪ್ಡೇಟ್ ಯಾವುದು ತಿಳಿಯಿರಿ
ಈ App ಇದ್ದರೆ ಸುಲಭವಾಗಿ ಪತ್ತೆ ಮಾಡಬಹುದು ಕಳೆದುಹೋದ  Gadget  title=
ನಿಮ್ಮ ಡಿವೈಸ್ ಗಳು ಕಳೆದುಹೋಗುವ ಚಿಂತೆಯಿಲ್ಲ (File photo)

ನವದೆಹಲಿ : ಈ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಇಯರ್ ಬಡ್ಸ್ (Ear Buds), ಸ್ಮಾರ್ಟ್ ವಾಚ್ (Smart Watch)  ಅಥವಾ ಲ್ಯಾಪ್‌ಟಾಪ್  (Laptop) ಬಳಸುತ್ತಾರೆ. ಅನೇಕ ಬಾರಿ ಈ ಗ್ಯಾಜೆಟ್‌ಗಳನ್ನ ಮನೆಯಲ್ಲಿ ಎಲ್ಲೋ ಇಟ್ಟು ಕಳೆದುಹೋಗಿವೆ ಎಂದು ಹುಡುಕುತ್ತಿರುತ್ತೇವೆ.  ಅಲ್ಲದೆ ಗ್ಯಾಜೆಟ್‌ಗಳು ಕಳ್ಳತನವಾಗುವ ಭಯವೂ ಹೆಚ್ಚು. ಆದರೆ ಈಗ ಗ್ಯಾಜೆಟ್‌ಗಳು (Gadget) ಕಳೆದುಹೋಗುತ್ತವೆ ಅಥವಾ ಕಳ್ಳತನವಾಗುತ್ತವೆ ಎನ್ನುವ ಬಗ್ಗೆ ಚಿಂತೆ ಮಾಡಬೇಕಿಲ್ಲ. ಟೆಕ್ ದಿಗ್ಗಜ ಆಪಲ್ ಈಗ ಗ್ಯಾಜೆಟ್‌ಗಳು ಕಳೆದುಹೋಗದಂತೆ ನೋಡಿಕೊಳ್ಳುತ್ತವೆ. ಇದೀಗ ಕಂಪನಿಯು ತನ್ನ ಅತ್ಯಂತ ಜನಪ್ರಿಯ ಫೀಚರ್ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ.

ಈಗ ಎಲ್ಲರೂ ಬಳಸಬಹುದು Find My App :
ಆಪಲ್ ಕಂಪನಿಯು Find My Appನ ಅಪ್ಡೇಟೆಡ್ ವರ್ಷನ್  ಅನ್ನು ಬಿಡುಗಡೆ ಮಾಡಿದೆ.  ಇದು Apple  ಕಂಪನಿಯ   Find My Network ನ ಖಾಸಗಿ ಮತ್ತು ಸುರಕ್ಷಿತ ಹುಡುಕಾಟ ಸಾಮರ್ಥ್ಯಗಳನ್ನು ಬಳಸಲು ಥರ್ಡ್ ಪಾರ್ಟಿ(Third Party)  ಉತ್ಪನ್ನಗಳಿಗೆ ಅನುಮತಿ ನೀಡುತ್ತದೆ. ಫೈಂಡ್ ಮೈ ನೆಟ್‌ವರ್ಕ್ ಏಕ್ಸೆಸರಿ ಪ್ರೋಗ್ರಾಂ ಯುಸರ್ಸ್ ಗೆ Find My App ಮೂಲಕ ಹೊಸ ಐಟಂ ಟ್ಯಾಬ್‌ನಲ್ಲಿ ತಮ್ಮ ಸಾಮಗ್ರಿಗಳನ್ನು   ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : BSNL Plans : ಕೇವಲ 47 ಪ್ಲಾನ್ ನಲ್ಲಿ ಸಿಗಲಿದೆ unlimited calls ಜೊತೆ ಪ್ರತಿದಿನ 1 GB Data

ಫೈಂಡ್ ಮೈ ಅಪ್ಲಿಕೇಶನ್‌ನೊಂದಿಗೆ ಕೆಲಸ ಮಾಡುವ ವೆನ್‌ಮೋಫ್, ಚಿಪೋಲೊ ಮತ್ತು ಬೆಲ್ಕಿನ್‌ನ ಹೊಸ ಉತ್ಪನ್ನಗಳು ಮುಂದಿನ ವಾರದಿಂದ ಲಭ್ಯವಿರುತ್ತವೆ. ಇದರಲ್ಲಿ ಬಳಕೆದಾರರಿಗೆ ತಮ್ಮ  ಇಯರ್‌ಬಡ್‌ಗಳು, ಬ್ಯಾಕ್ ಪ್ಯಾಕ್ (Backpack)ಮುಂತಾದ ಅಗತ್ಯ ವಸ್ತುಗಳನ್ನು ಎಲ್ಲಿ ಬಿಟ್ಟಿದ್ದಾರೆ ಎನ್ನುವುದನ್ನು ಕಂಡು ಹಿಡಿಯಲು ಸುಲಭವಾಗುತ್ತದೆ. 

 Find My ಮೇಲೆ ನಂಬಿಕೆಯಿಟ್ಟು, ಒಂದು ದಶಕಕ್ಕೂ ಹೆಚ್ಚು ಕಾಲ, ನಮ್ಮ ಗ್ರಾಹಕರು ತಮ್ಮ ಕಳೆದುಹೋದ ಅಥವಾ ಕದ್ದ ಆಪಲ್ ಡಿವೈಸ್ ಗಳನ್ನು ಪತ್ತೆ ಹಚ್ಚಿದ್ದಾರೆ ಎಂದು Appleನ World Wide Product Martketing ಉಪಾಧ್ಯಕ್ಷ ಬಾಬ್ ಬೊರ್ಚರ್ಸ್ ಬ್ಲಾಗ್‌ಪೋಸ್ಟ್‌ನಲ್ಲಿ, ಹೇಳಿದ್ದಾರೆ. ಇದೀಗ ಪ್ರಬಲ ಹುಡುಕಾಟ ಸಾಮರ್ಥ್ಯಗಳನ್ನು ಹೊಂದಿರುವ Find Myಯ  ಫೈಂಡ್ ಮೈ ನೆಟ್‌ವರ್ಕ್ ಏಕ್ಸೆಸರಿ ಪ್ರೋಗ್ರಾಂ ಅನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.  

ಇದನ್ನೂ ಓದಿ : WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್

Made for iPhone  ಪ್ರೊಗ್ರಾಮ್ ನ  ಭಾಗವಾಗಿ, ಫೈಂಡ್ ಮೈ ನೆಟ್‌ವರ್ಕ್ ಏಕ್ಸೆಸರಿ ಪ್ರೋಗ್ರಾಂ ಅನ್ನು ಈಗ ಅಸ್ತಿತ್ವದಲ್ಲಿರುವ ಅಥವಾ ಹೊಸ ಉತ್ಪನ್ನವನ್ನು ಫೈಂಡ್ ಮೈ ನೆಟ್‌ವರ್ಕ್‌ಗೆ ಸಂಪರ್ಕಿಸಲು ಬಯಸುವ  ಏಕ್ಸೆಸರಿ ಡೆವಲಪರ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಫೈಂಡ್ ಮೈ ನೆಟ್‌ವರ್ಕ್‌ನ ಎಲ್ಲಾ ಗೌಪ್ಯತೆ ಮತ್ತು ಸಂರಕ್ಷಣ ನಿಯಮಗಳನ್ನು ಥರ್ಡ್ ಪಾರ್ಟಿ ಪ್ರಾಡಕ್ಟ್ ಗಳು ಪಾಲಿಸಬೇಕು ಎಂದು ಕಂಪನಿ ಹೇಳಿದೆ. Find My App ಮೂಲಕ ಕಾಣೆಯಾದ ಆಪಲ್ ಡಿವೈಸ್ ಗಳನ್ನು ಅತ್ಯಂತ ಸುಲಭವಾಗಿ ಪತ್ತೆಹಚ್ಚಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News