Somavati Amavasye 2021 - 2077ರ ಸಂವತ್ಸರದ ಅಂತಿಮ ಅಮಾವಾಸ್ಯೆ ಸೋಮವಾರ ಇರಲಿದೆ. ಇದನ್ನು ಶಾಸ್ತ್ರಗಳಲ್ಲಿ ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಪೌರಾಣಿಕ ಶಾಸ್ತ್ರಗಳ ಪ್ರಕಾರ ಸೋಮವತಿ ಅಮಾವಾಸ್ಯೆಗೆ ಭಾರಿ ಮಹತ್ವವಿದೆ, ಯದ್ಯಪಿ ಈ ಅಮಾವಾಸ್ಯೆ ಭಾನುವಾರ ಏಪ್ರಿಲ್ 11 ರಂದು ಪ್ರಾತಃ ಕಾಲ 6.03ಕ್ಕೆ ಸೂರ್ಯೋದಯದಿಂದ ಆರಂಭವಾಗಲಿದೆ. ಆದರೆ ತಿಥಿ ವೃದ್ಧಿಯ ಕಾರಣ ಇದು ಸೋಮವಾರ ಬೆಳಗ್ಗೆ 8ಗಂಟೆಯವರೆಗೆ ಇರಲಿದೆ. ಉದಯ ಕಾಲದಲ್ಲಿ ಅಮಾವಾಸ್ಯೆ ಇರುವ ಕಾರಣ ಎರಡೂ ದಿನಗಳು ಅಮಾವಾಸ್ಯೆಯನ್ನು ಆಚರಿಸಲಾಗುವುದು. ಪಿತೃ ಕಾರ್ಯಗಳಿಗೆ ಅಮಾವಾಸ್ಯೆ ಸರ್ವಶ್ರೇಷ್ಠ ಎಂದು ಹೇಳಲಾಗುತ್ತದೆ. ಅಮಾವಾಸ್ಯೆಯ ದಿನ ಪಿತೃಗಳಿಗೆ ನಿಯಮಿತ ಭೋಜನ, ವಸ್ತ್ರ, ಜಲದಾನ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಆದರೆ, ಈ ಬಾರಿ ಈ ಸೌಭಾಗ್ಯ ಎರಡು ಬಾರಿ ಲಭಿಸುತ್ತಿದೆ. ಸೋಮವತಿ ಅಮಾವಾಸ್ಯೆಯ ದಿನ ಪವಿತ್ರ ನದಿಗಳಲ್ಲಿ ಸ್ನಾನಕ್ಕೂ ಕೂಡ ವಿಶೇಷ ಮಹತ್ವವಿದೆ. ಒಂದು ವೇಳೆ ನೀವು ಗಂಗಾ (Ganga Jal) ನದಿಯಂತಹ ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಅವಕಾಶ ಇಲ್ಲ ಎಂದಾದರೆ, ಮನೆಯಲ್ಲಿಯೇ ನೀರಿನಲ್ಲಿ ಸ್ವಲ್ಪ ಗಂಗಾಜಲ ಬೆರೆಸಿ ಸ್ನಾನಿ ಮಾಡಿ. ಸ್ನಾನ ಮಾಡುವಾಗ ಈ ಕೆಳಗಿನ ಮಂತ್ರ ಪಠಿಸಿ.
ಇದನ್ನೂ ಓದಿ- Vastu Tips: ನಿಮ್ಮ ಮನೆಯಲ್ಲೂ ಈ ವಸ್ತು ಇದ್ದರೆ ಆಗಲಿದೆ ಭಾರೀ ಧನ ಪ್ರಾಪ್ತಿ
'ಗಂಗೇಚ ಯಮುನೇಚ ಗೋದಾವರಿ ಸರಸ್ವತಿ, ನರ್ಮದೆ ಸಿಂಧು ಕಾವೇರಿ ಜಲೈಸ್ಮಿನ್ಸನ್ನಿಧಿಂ ಕುರು. ಈ ಮಂತ್ರದ ಅಂತಿಮ ಶಬ್ದ ಕುರು ಸ್ಥಾನದಲ್ಲಿ ಕರಿಷ್ಯೇ ಹೇಳಿ ಸ್ನಾನ ಮಾಡಿ. ನೀರಿನಲ್ಲಿ ಸ್ವಲ್ಪ ಗಂಗಾಜಲ ಹಾಗೂ ಕರಿ ಎಳ್ಳು ಬೆರೆಸಿ, ದಕ್ಷಿಣ ದಿಕ್ಕಿಗೆ ಮುಖಮಾಡಿ ಸೂರ್ಯನಿಗೆ ಅರ್ಘ್ಯ ನೀಡಿ ಹಾಗೂ ಪಿತೃರಿಗಾಗಿ ಮನೆಯಲ್ಲಿ ಭೋಜನ ತಯಾರಿಸಿ ಬ್ರಾಮ್ಹಣ ಅಥವಾ ವಿದ್ವಾನರಿಗೆ ಊಟಕ್ಕೆ ಬಡಿಸಿ. ಮನೆಯಲ್ಲಿರುವ ಹಿರಿಯ ಸದಸ್ಯರು ಹಾಗೂ ವೃದ್ಧ ತಂದೆ-ತಾಯಿಯರ ಸೇವೆಯಿಂದಲೂ ಕೂಡ ಪಿತೃರು ಪ್ರಸನ್ನರಾಗುತ್ತಾರೆ.
ಇದನ್ನೂ ಓದಿ- Venus Transit In Aris 2021: ನಾಳೆ ಮೇಷ ರಾಶಿಗೆ ಶುಕ್ರನ ಪ್ರವೇಶ, ವಿಭಿನ್ನ ಜಾತಕಗಳ ಮೇಲೆ ಏನು ಪ್ರಭಾವ?
ಸಾಮಾನ್ಯವಾಗಿ ನಮ್ಮ ಕುಲದ ಪಿತೃ ದೇವರು ಅಮಾವಾಸ್ಯಾ ಅಥವಾ ಹುಣ್ಣಿಮೆಯ ದಿನ ತಮ್ಮ ವಂಶಜರಿಗೆ ಅನ್ನ ಹಾಗೂ ಜಲ ಅರ್ಪಿಸಬೇಕು ಎಂದು ಬಯಸುತ್ತಾರೆ ಎನ್ನಲಾಗುತ್ತದೆ. 2077 ಸಂವತ್ಸರದಲ್ಲಿ ಮೂರನೇ ಬಾರಿಗೆ ಸೋಮವತಿ ಅಮಾವಾಸ್ಯೆ ಬಂದಿದೆ. ಹೀಗಾಗಿ ಇದರ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಈ ರೀತಿಯ ಎರಡು ಅಮಾವಾಸ್ಯೆಗಳ ಯೋಗ ಹಾಗೂ ಅದರಲ್ಲಿ ಒಂದು ಸೋಮವಾರ ಬಂದಿರುವುದು ಹಲವು ದಶಕಗಳ ಬಳಿಕ ಎನ್ನಲಾಗಿದೆ.
ಇದನ್ನೂ ಓದಿ- Raw Mango Benefits: ನಿತ್ಯ ಒಂದು ಗ್ಲಾಸ್ ಮಾವಿನ ಪಾನಕ ಸೇವಿಸುವಿದರಿಂದ ಹಲವು ಲಾಭಗಳಿವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.