ನವದೆಹಲಿ: 17 ನೇ ಓವರ್ ನಲ್ಲಿ ಶಾಬಾದ್ ನದೀಮ್ ತೋರಿದ ಬೌಲಿಂಗ್ ಪ್ರದರ್ಶನದಿಂದಾಗಿ ಆರ್ಸಿಬಿ ತಂಡದ ಗೆಲುವಿನ ಲೆಕ್ಕಾಚಾರವೇ ಬದಲಾಗಿದೆ. ಹೌದು ಅರ್ಸಿಬಿ ತಂಡವು ಕೇವಲ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 149 ರನ್ ಗಳ ಸಾಧಾರಣ ಮೊತ್ತ ಗಳಿಸಿತ್ತು.ಅದಾಗ್ಯೂ ಅವರ ಬೌಲಿಂಗ್ ಮ್ಯಾಜಿಕ್ ನಿಂದಾಗಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ
ಬೆಂಗಳೂರು ತಂಡದ ಪರವಾಗಿ ಮ್ಯಾಕ್ಸ್ ವೆಲ್ ಮಾತ್ರ ಅರ್ಧಶತಕವನ್ನು ಗಳಿಸುವ ಮೂಲಕ ತಂಡಕ್ಕೆ ನೆರವಾದರು.ಕೇವಲ 41ಎಸೆತಗಳಲ್ಲಿ 59 ರನ್ ಗಳಿದರು.ಅದರಲ್ಲಿ ಐದು ಭರ್ಜರಿ ಬೌಂಡರಿ ಹಾಗೂ ಮೂರು ಸಿಕ್ಸರ್ ಗಳು ಸೇರಿದ್ದವು.ಬೆಂಗಳೂರು ನೀಡಿದ 150 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡ ಈ ಗುರಿಯನ್ನು ಸುಲಭವಾಗಿ ತಲುಪಲಿದೆ ಎನ್ನುವ ನಿರೀಕ್ಷೆ ಇತ್ತು.
Yet another sensational finish at The Chepauk as #RCB beat #SRH by 6 runs.
Scorecard - https://t.co/apVryOzIWv #SRHvRCB #VIVOIPL pic.twitter.com/G3cVkk4GJr
— IndianPremierLeague (@IPL) April 14, 2021
ಹೈದರಾಬಾದ್ ತಂಡವು ಆರಂಭದಲ್ಲಿಯೇ ತಂಡದ ಮೊತ್ತ 13 ರನ್ ಗಳಾದಾಗ ವ್ರುದ್ದಿಮಾನ್ ಸಹಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ಸಹಿತ ನಂತರ ಡೇವಿಡ್ ವಾರ್ನರ್ (54) ಮನೀಶ್ ಪಾಂಡೆ(38) ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ತಡಕ್ಕೆ ತಂದಿಟ್ಟಿದ್ದರು.ಆದರೆ ಶಾಬಾದ್ ನದೀಮ್ ಎಸೆದ 17 ನೇ ಓವರ್ ನಲ್ಲಿ ಜಾನ್ ಬೇರ್ ಸ್ಟೋ, ಮನೀಶ್ ಪಾಂಡೆ, ಅಬ್ದುಲ್ ಸಮಾದ್ ಅವರ ವಿಕೆಟ್ ಗಳನ್ನು ಕಬಳಿಸುವ ಮೂಲಕ ಗೆಲುವನ್ನು ಆರ್ಸಿಬಿಯನ್ನು ಗೆಲುವಿನ ಕಡೆ ವಾಲುವಂತೆ ಮಾಡಿದರು.
ಅಂತಿಮವಾಗಿ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
ಇದನ್ನೂ ಓದಿ: ಯಂಗ್ ಟರ್ಕ್ಸ್ ದೆಹಲಿ ಕ್ಯಾಪಿಟಲ್ಸ್ ಆರ್ಭಟಕ್ಕೆ ಮಂಕಾದ ಚೆನ್ನೈ ಸೂಪರ್ ಕಿಂಗ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.