Veda Krishnamurthy: ಮಹಿಳಾ ಕ್ರಿಕೆಟರ್ ವೇದ ಕೃಷ್ಣಮೂರ್ತಿಯವರ ತಾಯಿ ಬಲಿ ಪಡೆದ ಕೊರೋನಾ!

ವೇದಾಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬದೇವಿ (67) ಅವರು ಜ್ವರದಿಂದ ಬಳಲುತ್ತಿದ್ದ

Last Updated : Apr 24, 2021, 03:02 PM IST
  • ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ತಾಯಿ ಕೋವಿಡ್-19ಗೆ ಬಲಿ
  • ವೇದಾಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬದೇವಿ (67) ಅವರು ಜ್ವರದಿಂದ ಬಳಲುತ್ತಿದ್ದ
  • ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ
Veda Krishnamurthy: ಮಹಿಳಾ ಕ್ರಿಕೆಟರ್ ವೇದ ಕೃಷ್ಣಮೂರ್ತಿಯವರ ತಾಯಿ ಬಲಿ ಪಡೆದ ಕೊರೋನಾ! title=

ಬೆಂಗಳೂರು: ಮಹಿಳಾ ಕ್ರಿಕೆಟರ್  ವೇದಾ ಕೃಷ್ಣಮೂರ್ತಿ ಅವರ ತಾಯಿ ಕೋವಿಡ್-19ಗೆ ಬಲಿಯಾಗಿದ್ದಾರೆ.

ವೇದಾಕೃಷ್ಣಮೂರ್ತಿ(Veda Krishnamurthy) ಅವರ ತಾಯಿ ಚೆಲುವಾಂಬದೇವಿ (67) ಅವರು ಜ್ವರದಿಂದ ಬಳಲುತ್ತಿದ್ದ ಅವರನ್ನು ಕಡೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ (ಶುಕ್ರವಾರ) ನಿಧನರಾಗಿದ್ದಾರೆ. ಇದೇ ಏಪ್ರಿಲ್ 20ರಂದು ಅವರಿಗೆ ಕೊರೋನಾ ದೃಢಪಟ್ಟಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ : Sachin Tendulkar: ಜನ್ಮದಿನದ ಶುಭಾಶಯಗಳು ಕ್ರಿಕೆಟ್ ಲೆಜೆಂಡ್: ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ!

ಹೋಂ ಕ್ವಾರಂಟೈನ್ ನಲ್ಲಿದ್ದ ಚೆಲುವಾಂಬ(Cheluvamba Devi) ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದ ಹಿನ್ನಲೆಯಲ್ಲಿ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಉಸಿರಾಟದ ಸಮಸ್ಯೆಯಿಂದಾಗಿ  ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ : Sachin Tendulkar Birthday: ಸಚಿನ್ ತೆಂಡೂಲ್ಕರ್ ಅವರ 5 ಸ್ಮರಣೀಯ ಇನಿಂಗ್ಸ್ ಗಳು

ಚೆಲುವಾಂಬ ಅವರು ಪತಿ ಎಸ್ಜಿಕೆ ಮೂರ್ತಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗ(Son)ನನ್ನ ಅಗಲಿದ್ದಾರೆ. ಬೀರೂರು ಮಾರ್ಗದಲ್ಲಿನ ತೋಟದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಿದೆ ಎಂದು ಹೇಳಲಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News