ನೀವು ಕೂಡಾ ಕನಸಿನಲ್ಲಿ ಕಾಮನ ಬಿಲ್ಲು ಕಂಡಿದ್ದೀರಾ ? ಅದು ಯಾವ ಶಕುನ ಸೂಚಿಸುತ್ತದೆ ತಿಳಿಯಿರಿ..!

ಸ್ವಪ್ನ ನಮ್ಮ ಭವಿಷ್ಯದಲ್ಲಿ ಘಟಿಸಬಹುದಾದ ಕೆಲ ಘಟನೆಗಳ ಮುನ್ಸೂಚನೆಯನ್ನು ನೀಡುತ್ತದೆಯಂತೆ. 
 

ನವದೆಹಲಿ : ಸಾಮಾನ್ಯವಾಗಿ ಕನಸಲ್ಲಿ ನಾವು ಕೆಲ ವಿಚಿತ್ರ ಸನ್ನಿವೇಶಗಳನ್ನು ನೋಡುತ್ತೇವೆ ಈ ಸನ್ನಿವೇಶಕ್ಕೂ ನಮ್ಮ ಜೀವನಕ್ಕೂ ಏನು ಸಂಬಂಧ ಬುದೇ ನಮಗೆ ತಿಳಿದಿರುವುದಿಲ್ಲ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ನಮಗೆ ಬೀಳುವ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತದೆ. ಸ್ವಪ್ನ ನಮ್ಮ ಭವಿಷ್ಯದಲ್ಲಿ ಘಟಿಸಬಹುದಾದ ಕೆಲ ಘಟನೆಗಳ ಮುನ್ಸೂಚನೆಯನ್ನು ನೀಡುತ್ತದೆಯಂತೆ. ಪೌರಾಣಿಕ ಕತೆಗಳನ್ನು ನಂಬುವುದಾದರೆ ರಾಜ ದಶರಥನ ಸಾವಿನ ಸಂದರ್ಭದಲ್ಲಿ ಶ್ರೀರಾಮನಿಗೆ ಅಶುಭ ಕನಸೊಂದು ಬಿದ್ದಿತ್ತಂತೆ. ಈ ಮೂಲಕ ರಾಜಭವನದಲ್ಲಿ ಏನೋ ಅಶುಭ ಸಂಭವಿಸಿರುವ ಬಗ್ಗೆ ಶ್ರೀರಾಮನಿಗೆ ಸೂಚನೆ ಸಿಕ್ಕಿತ್ತಂತೆ. ಇನ್ನು ರಾವಣನಿಗೂ ತನ್ನ ಮೃತ್ಯುವಿನ ಮುನ್ನ ಕನಸಿನಲ್ಲಿ ಅಶುಭ ಸಂಕೇತ ಸಿಕ್ಕಿತ್ತಂತೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /4

ಕನಸಿನಲ್ಲಿ ಕೆಲವೊಂದು ವಸ್ತುಗಳು ಕಂಡರೆ ಅದು ಶುಭವಾಗಿರುತ್ತದೆಯಂತೆ. ಇನ್ನು ಕೆಲ ವಸ್ತುಗಳು ಕನಸಲ್ಲಿ ಬಂದರೆ ಅದು ಅಶುಭವಂತೆ. ಒಂದು ವೇಳೆ ನಿಮ್ಮ ಕನಸಲಲಿ ನೀವು ಕಾಮನಬಿಲ್ಲು ಕಂಡರೆ ಅದು ಶುಭ ಸಂಕೇತನಾ? ಅಥವಾ ಅಶುಭನಾ ಎಂಬುದನ್ನು ತಿಳಿಯೋಣ.. 

2 /4

ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಅದು ಶುಭವಂತೆ. ಇದರರ್ಥ ನಿಮ್ಮ ಜೀವನದಲ್ಲಿ ಸುಖ ಸಮೃದ್ಧಿ ಎದುರಾಗಲಿದೆ ಎಂದು..

3 /4

ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಆ ವ್ಯಕ್ತಿಯ ಜೀವನದಲ್ಲಿ ಸಮೃದ್ಧಿ, ಪ್ರಸಿದ್ದಿ ಪ್ರತಿಷ್ಠೆ ಹೆಚ್ಚುತ್ತದೆ ಎಂದರ್ಥ. ಉದ್ಯೋಗದಲ್ಲಿ ಸಫಲತೆ ಸಿಗುವ ಸಂಕೇತವಾಗಿರುತ್ತದೆ. ಯಾರಾದರೂ ಕೆಲಸದ ಹುಡುಕಾಟದಲ್ಲಿದ್ದು, ಅವರ ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಶೀಘ್ರವೇ ಅವರಿಗೆ ಉದ್ಯೋಗ ಸಿಗಲಿದೆ ಎಂದರ್ಥ. 

4 /4

ವಿವಾಹಿತ ಪುರುಷರ ಕನಸಲ್ಲಿ ಕಾಮನಬಿಲ್ಲು ಕಂಡರೆ, ಅದು ಶುಭವಂತೆ. ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಸಂತೋಷ ಸಿಗಲಿದೆ . ಆದರೆ ವಿವಹಿತ ಮಹಿಳೆಯ ಕನಸಲ್ಲಿ ಕಾಮನಬಿಲ್ಲು ಕಂಡರೆ ಅದು ಅಶುಭವಂತೆ. ಈ ಕನಸು ಬಂದರೆ ಮುಂಬರುವ ದಿನಗಳಲ್ಲಿ ಮಹಿಳೆ ತನ್ನ ಪತಿಯಿಂದ  ದೂರವಿರಬೇಕಾಗುತ್ತದೆಯಂತೆ,.