ಕೆಲವೊಂದು ಕಡೆಗಳಲ್ಲಿ ಲಸಿಕೆ ಹಾಕಿಸಿದ ನಂತರ ಅಡ್ಡ ಪರಿಣಾಮಗಳು ಕಂಡು ಬಂದಿವೆಯಂತೆ. ಇದಾದ ನಂತರ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಕಡೆಯಿಂದ ಫಾಕ್ಟ್ ಶೀಟನ್ನು ಜಾರಿಗೊಳಿಸಲಾಗಿದೆ.
ನವದೆಹಲಿ : ಕರೋನಾ ಮಹಾಮಾರಿಯಿಂದ (Coronavirus) ನಮ್ಮನ್ನು ಕಾಪಾಡಿಕೊಳ್ಳಲು ಸದ್ಯಕ್ಕೆ ನಮ್ಮ ಮುಂದಿರುವ ಉಪಾಯವೆಂದರೆ ಕರೋನಾ ಲಸಿಕೆ (Corona vAccine). ಇದೇ ಕಾರಣಕ್ಕಾಗಿ ಸರ್ಕಾರ ಕೂಡಾ ಲಸಿಕಾ ಅಭಿಯಾನವನ್ನು ಭರದಿಂದ ನಡೆಸುತ್ತಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುವುದು. ಈ ಮಧ್ಯೆ ಜನರಲ್ಲೂ ಲಸಿಕೆಯ ಬಗ್ಗೆ ಕೆಲ ಸಂದೇಹಗಳು ಮೂಡಲಾರಂಭಿಸಿವೆ. ಲಸಿಕೆ ಹಾಕಿಸಬಹುದೇ? ಲಸಿಕೆ (Vaccine) ಹಾಕಿಸಿದರೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗಳು ಕೂಡಾ ಜನ ಸಾಮಾನ್ಯರ ಮನಸ್ಸಿನಲ್ಲಿ ಮೂಡುತ್ತಿದೆ. ತಜ್ಞರ ಪ್ರಕಾರ ಕೆಲವೊಂದು ಕೇಸ್ ಗಳಲ್ಲಿ ಮಾತ್ರ ಲಸಿಕೆ ಹಾಕಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕೆಲವೊಂದು ಕಡೆಗಳಲ್ಲಿ ಲಸಿಕೆ ಹಾಕಿಸಿದ ನಂತರ ಅಡ್ಡ ಪರಿಣಾಮಗಳು ಕಂಡು ಬಂದಿವೆಯಂತೆ. ಇದಾದ ನಂತರ ಕೋವಿಶೀಲ್ಡ್ (Covishield) ಮತ್ತು ಕೋವಾಕ್ಸಿನ್ (Covaxin) ಕಡೆಯಿಂದ ಫಾಕ್ಟ್ ಶೀಟನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಯಾರೆಲ್ಲಾ ಕೋವಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಬಾರದು ಎನ್ನುವುದನ್ನು ತಿಳಿಸಲಾಗಿದೆ.
ಲಸಿಕೆಯ ಯಾವುದಾದರೂ ವಿಶೇಷ ಇಂಗ್ರೀಡಿಯೆಂಟ್ ನಿಂದ ಅಲರ್ಜಿ ಇದ್ದರೆ ಅಂಥವರು ಲಸಿಕೆ ಹಾಕಿಸಬಾರದು ಎಂದು ಇದೀಗ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ತನ್ನ ಫ್ಯಾಕ್ಟ್ ಶೀಟ್ ನಲ್ಲಿ ಹೇಳಿದೆ.
ಮೊದಲ ಡೋಸ್ ಪಡೆದ ಮೇಲೆ ರಿಯಾಕ್ಷನ್ ಕಂಡು ಬಂದಿದ್ದರೆ ಲಸಿಕೆ ಹಾಕದಂತೆ ಸೂಚಿಸಲಾಗಿದೆ. ಅಲ್ಲದೆ ಕರೋನಾ ಪಾಸಿಟಿವ್ ಇದ್ದರೆ ಅಥವಾ ಜ್ವರ ಇದ್ದರೆ ಅಂತವರು ಕೂಡಾ ಲಸಿಕೆ ಹಾಕದಂತೆ ಸೂಚಿಸಲಾಗಿದೆ.
ಫ್ಯಾಕ್ಟ್ ಶೀಟ್ ನಲ್ಲಿ ಗರ್ಭವತಿ ಮಹಿಳೆಯರು ಮತ್ತು ಹಾಲುಣಿಸುವ ಮಹಿಳೆಯರು ಕೂಡಾ ವಾಕ್ಸಿನ್ ಹಾಕಿಸದಂತೆ ತಿಳಿಸಲಾಗಿದೆ.
ಲಸಿಕೆ ಹಾಕಿಸಿಕೊಳ್ಳುವ ಮೊದಲು, ಹೆಲ್ತ್ ಕೇರ್ ಪ್ರೋವೈಡರ್ ಗೆ ನಿಮ್ಮ ಆರೋಗ್ಯ ಸಂಬಂಧ ಎಲ್ಲಾ ಮಾಹಿತಿ ಒದಗಿಸುವಂತೆ ಎರಡೂ ಲಸಿಕಾ ತಯಾರಕ ಕಂಪನಿಗಳು ಹೇಳಿವೆ. ನಿಮ್ಮ ಆರೋಗ್ಯ ಸ್ಥಿತಿಯನ್ನು ಸರಿಯಾಗಿ ತಿಳಿಸಿದ ನಂತರವೇ ಲಸಿಕೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.