Good News: ಭಾರತ ತಲುಪಿದ ರಷ್ಯಾದ ಕೊರೊನಾ ಲಸಿಕೆ Sputnik V First Consignment

Sputnik V First Consignment Reaches India - ರಷ್ಯಾ ಕೊರೊನಾ ಲಸಿಕೆಯಾಗಿರುವ Sputnik V First Lot ಶನಿವಾರ ಹೈದ್ರಾಬಾದ್ ತಲುಪಿದೆ. ಈ ವ್ಯಾಕ್ಸಿನ್ ಕೊರೊನಾ ವೈರಸ್ ವಿರುದ್ಧ ಶೇ.90 ಕ್ಕಿಂತ ಅಧಿಕ ಪರಿಣಾಮಕಾರಿಯಾಗಿದೆ.

Written by - Nitin Tabib | Last Updated : May 1, 2021, 06:02 PM IST
  • ಭಾರತ ತಲುಪಿದ ರಷ್ಯಾದ ಕೊರೊನಾ ಲಸಿಕೆ Sputnik V
  • ಕೊರೊನಾ ವಿರುದ್ಧ ಶೇ.90 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ.
  • ವೈರಸ್ ನ ಹೊಸ ರೂಪಾಂತರಿಯ ಮೇಲೂ ಪ್ರಭಾವಶಾಲಿಯಾಗಿದೆ.
Good News: ಭಾರತ ತಲುಪಿದ ರಷ್ಯಾದ ಕೊರೊನಾ ಲಸಿಕೆ Sputnik V First Consignment title=
Sputnik V First Consignment Reaches India (Photo Courtesy- ANI)

ನವದೆಹಲಿ: Sputnik V First Consignment Reaches India - ಕೊರೊನಾ ಬಿಕ್ಕಟ್ಟು ಮತ್ತು ಲಸಿಕೆಯ ಕೊರತೆಯ ವಿರುದ್ಧ ಹೋರಾಡುತ್ತಿರುವ ಭಾರತದ ಪಾಲಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟಗೊಂಡಿದೆ. ರಷ್ಯಾ (Russia) ಅಭಿವೃದ್ಧಿಪಡಿಸಿರುವ Sputnik V Vaccine ಕೊರೊನಾ ಲಸಿಕೆಯ ಮೊದಲ ಕಂತು ಶನಿವಾರ ಹೈದ್ರಾಬಾದ್ (Hyderabad) ತಲುಪಿದೆ. ಈ ಲಸಿಕೆ ಕೊರೊನಾ ವೈರಸ್ ವಿರುದ್ಧ ಶೇ.90ಕ್ಕಿಂತ ಅಧಿಕ ಪರಿಣಾಮಕಾರಿಯಾಗಿದೆ. ದೇಶಾದ್ಯಂತ ನಡೆಸಲಾಗುತ್ತಿರುವ ಲಸಿಕಾಕರಣ ಅಭಿಯಾನವನ್ನು ಚುರುಕುಗೊಳಿಸಲು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಈ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು.

ಭಾರತದಲ್ಲಿ ಲಸಿಕೆಯ ಕುರಿತು ಹೇಳಿಕೆ ನೀಡಿದ್ದ ರಷ್ಯಾ ರಾಯಭಾರಿ, Sputnik V ಎಫಿಕೆಸಿ(ಪ್ರಭಾವ) ವಿಶ್ವದ ಎಲ್ಲಾ ವ್ಯಾಕ್ಸಿನ್ ಗಳ ಹೋಲಿಕೆಯಲ್ಲಿ ಹೆಚ್ಚಾಗಿದೆ ಹಾಗೂ ಇದು ಕೊರೊನಾ ವೈರಸ್ ನ ಹೊಸ ರೂಪಾಂತರಿ ವಿರುದ್ಧ ಕೂಡ ಪ್ರಭಾವಶಾಲಿಯಾಗಿದೆ ಎಂದಿದ್ದರು. ಈ ಲಸಿಕೆಯ ಸ್ಥಳೀಯ ಉತ್ಪಾದನೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಮತ್ತು ಅದನ್ನು ಕ್ರಮೇಣ 850  ಮಿಲಿಯನ್ ಡೋಸ್ ವರೆಗೆ (85 ಕೋಟಿ)  ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದರು.

ಇದನ್ನೂ ಓದಿ- BS Yediyurappa : 'ರಾಜ್ಯದ ಕೊರೋನಾ ಲಸಿಕೆ ಕೊರತೆಯನ್ನ 2-3 ದಿನಗಳಲ್ಲಿ ಬಗೆಹರಿಸಲಾಗುವುದು' 

ಲಸಿಕಾಕರಣ ಅಭಿಯಾನ ವೇಗ ಪಡೆದುಕೊಳ್ಳಲಿದೆ
ಭಾರತದಲ್ಲಿ 18 ರಿಂದ 44 ವರ್ಷ ವಯಸ್ಸಿನ ಜನರಿಗಾಗಿ ಮೂರನೇ ಹಂತದ ಲಸಿಕಾಕರಣ ಅಭಿಯಾನ ಇಂದಿನಿಂದ ಆರಂಭಗೊಂಡಿದೆ. ಮೂರನೇ ಹಂತಕ್ಕಾಗಿ ಭಾರಿ ಸಂಖ್ಯೆಯಲ್ಲಿ ಜನರು ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ. ವ್ಯಾಕ್ಸಿನ್ ಕೊರತೆ ಹಿನ್ನೆಲೆ ಹಲವು ಕಡೆಗಳಲ್ಲಿ ಲಸಿಕಾಕರಣ ಅಭಿಯಾನ ಇನ್ನೂ ಆರಂಭಗೊಂಡಿಲ್ಲ. ಆದರೆ ರಷ್ಯಾದ ವ್ಯಾಕ್ಸಿನ್ ಬರುವಿಕೆಯಿಂದ ಈ ಕಾರ್ಯಕ್ರಮ ಮತ್ತಷ್ಟು ಚುರುಕುಗೊಳ್ಳಲಿದೆ ಎಂಬ ಭರವಸೆ ವ್ಯಕ್ತಪಡಿಸಲಾಗುತ್ತಿದೆ.

ಇದನ್ನೂ ಓದಿ- BIG DECISION: EPFO ಚಂದಾದಾರರಿಗೊಂದು ನೆಮ್ಮದಿಯ ಸುದ್ದಿ

ಪ್ರಸ್ತುತ ದೇಶಾದ್ಯಂತ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್ ಆಗಿರುವ ಕೊವ್ಯಾಕ್ಸಿನ್ (Covaxin) ಹಾಗೂ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೋವಿಶೀಲ್ಡ್ (Covishield) ವ್ಯಾಕ್ಸಿನ್ ಅನ್ನು ಜನರಿಗೆ ನೀಡಲಾಗುತ್ತಿದೆ. ಇದುವರೆಗೆ 14 ಕೋಟಿಗೂ ಅಧಿಕ ಜನರಿಗೆ ವ್ಯಾಕ್ಸಿನೆಶನ್ ನಡೆಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- WhatsAppನಿಂದ ಹೊಸ ವೈಶಿಷ್ಟ್ಯ ಪರಿಚಯ, ಬಳಕೆದಾರರಿಗೇನು ಲಾಭ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News