Corona Vaccination : 'ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ ಇದೆ ಕೊರೋನಾ ಲಸಿಕೆ ಕೊರತೆ'

ಮೂರು ತಿಂಗಳಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಚುಚ್ಚುಮದ್ದು ನೀಡಲು ನಮಗೆ ಎಷ್ಟು ಲಸಿಕೆ ಡೋಸ್ ಗಳ ಅಗತ್ಯವಿದೆ

Last Updated : May 8, 2021, 02:19 PM IST
  • ಕೊರೊನಾ ವೈರಸ್ ಲಸಿಕೆ ಡೋಸ್ ಕೊರತೆ ಇನ್ನೂ ಇದೆ
  • ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
  • ಮೂರು ತಿಂಗಳಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಚುಚ್ಚುಮದ್ದು ನೀಡಲು
Corona Vaccination : 'ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ ಇದೆ ಕೊರೋನಾ ಲಸಿಕೆ ಕೊರತೆ' title=

ನವದೆಹಲಿ : ಕೊರೊನಾ ವೈರಸ್  ಲಸಿಕೆ ಡೋಸ್ ಕೊರತೆ ಇನ್ನೂ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ ಮತ್ತು ಕೇಂದ್ರವು ಸಾಕಷ್ಟು ಸಂಖ್ಯೆಯ ಡೋಸ್ ಗಳನ್ನು ಒದಗಿಸಿದರೆ, ಎಲ್ಲಾ ಅರ್ಹ ಫಲಾನುಭವಿಗಳಿಗೆ ಮೂರು ತಿಂಗಳೊಳಗೆ ಚುಚ್ಚುಮದ್ದು ನೀಡಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್(Arvind Kejriwal), 'ಮೂರು ತಿಂಗಳಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಚುಚ್ಚುಮದ್ದು ನೀಡಲು ನಮಗೆ ಎಷ್ಟು ಲಸಿಕೆ ಡೋಸ್ ಗಳ ಅಗತ್ಯವಿದೆ. ನಾನು ನಿಮಗೆ ಅಂದಾಜು ನೀಡಿದರೆ, ದೆಹಲಿಯ ಜನಸಂಖ್ಯೆ ೨ ಕೋಟಿ. ಇದರಲ್ಲಿ 1 ಕೋಟಿ ಜನರು 18-45 ವರ್ಷ ವಯಸ್ಸಿನವರು; 50 ಲಕ್ಷ ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 50 ಲಕ್ಷ ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರು.

ಇದನ್ನೂ ಓದಿ : ಈಗ ಪಾಸ್ವರ್ಡ್ ಇಲ್ಲದೆ Google ಲಾಗಿನ್, ಈ ವಿಧಾನ ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿಯಿರಿ

18 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 1.5 ಕೋಟಿ ಜನರಿದ್ದಾರೆ. ಈ 1.5 ಕೋಟಿ ಜನರಿಗೆ ಎರಡು ಲಸಿಕೆ(Corona Vaccination) ಡೋಸ್ ಗಳನ್ನು ನೀಡಬೇಕಾಗುತ್ತದೆ. ಆದ್ದರಿಂದ, 3 ಕೋಟಿ ಡೋಸ್ ಗಳ ಅಗತ್ಯವಿದೆ, ಅವುಗಳಲ್ಲಿ ದೆಹಲಿ ಸರ್ಕಾರವು 40 ಲಕ್ಷ ಡೋಸ್ ಗಳನ್ನು ಪಡೆದಿದೆ. ನಮಗೆ 2.6 ಕೋಟಿ ಡೋಸ್ ಗಳ ಅಗತ್ಯವಿದೆ.' ಎಂದು ಅವರು ಹೇಳಿದರು.

ಇದನ್ನೂ ಓದಿ : AP Kadapa Explosion: ಆಂಧ್ರಪ್ರದೇಶದ ಗಣಿಯೊಂದರಲ್ಲಿ ತೀವ್ರ ಸ್ಫೋಟ, 10 ಮಂದಿ ಸಾವು, ಹಲವರಿಗೆ ಗಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News