ಕಡಪ: ಆಂಧ್ರಪ್ರದೇಶದ ಕಡಪದಲ್ಲಿ ಶನಿವಾರ ಮುಂಜಾನೆ ಸುಣ್ಣದ ಕಲ್ಲುಗಣಿಯಲ್ಲಿ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಕಾರ್ಮಿಕರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.
ಶನಿವಾರ ಬೆಳಿಗ್ಗೆ ಕಲಾಸಪಾಡು ಬ್ಲಾಕ್‌ನ ಮಾಮಿಲಪಲ್ಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಲಿಯಾದವರೆಲ್ಲರೂ ಕಲ್ಲುಗಣಿ ಕಾರ್ಮಿಕರು ಎಂದು ತಿಳಿದುಬಂದಿದೆ.
Andhra Pradesh | 5 died in an explosion due to Gelatin sticks near Mamillapalle village in Kalasapadu area of Kadapa district
This morning, Gelatin sticks at mines near Mamillapalle exploded while being unloaded. 5 labours died, 4 others missing: Gani Maddileti, Sub-Inspector pic.twitter.com/Ks8r73ZshG
— ANI (@ANI) May 8, 2021
ಪೊರುಮಾಮಿಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ರೆಡ್ಡಿ ಪ್ರಕಾರ, ಕ್ವಾರಿ ಸ್ಥಳದೊಳಗೆ ಆಸ್ಫೋಟಕಗಳನ್ನು ಸ್ಥಳಾಂತರಿಸುವಾಗ ಸ್ಫೋಟ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ - ಭಾರತದ ಸ್ಫೋಟಕ COVID-19 ಅಲೆ ಜಗತ್ತಿಗೆ ಅಪಾಯ- ರಾಹುಲ್ ಗಾಂಧಿ
ಇದು ಪರವಾನಗಿ ಪಡೆದ ಸುಣ್ಣದ ಗಣಿ ಮತ್ತು ಪ್ರಮಾಣೀಕೃತ ಆಪರೇಟರ್ ರವಾನೆಯನ್ನು ತಂದಿದ್ದರು. ಜೆಲಾಟಿನ್ ಕಡ್ಡಿಗಳನ್ನು (Gelatin Sticks) ಇಳಿಸುವಾಗ ಸ್ಫೋಟ ಸಂಭವಿಸಿದೆ ಎಂದು ಕಡಪಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅನ್ಬುರಾಜಾ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಬಲಿಯಾದವರಲ್ಲಿ ಹೆಚ್ಚಿನವರು ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸ್ಥಳೀಯ ಗ್ರಾಮವಾದ ಪುಲಿವೆಂಡುಲ ಮೂಲದವರು ಎಂದು ಹೇಳಲಾಗುತ್ತಿದೆ. ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ಅದು ಪಕ್ಕದ ಹಳ್ಳಿಗಳಲ್ಲಿ ನಡುಕವನ್ನು ಉಂಟುಮಾಡಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ - Complete Lockdown : ಮೇ 10 ರಿಂದ 24ರವರೆಗೆ 'ಸಂಪೂರ್ಣ ಲಾಕ್ ಡೌನ್' ಘೋಷಿಸಿದ ತಮಿಳುನಾಡು ಸರ್ಕಾರ!
ಏತನ್ಮಧ್ಯೆ, ಅಪಘಾತದಲ್ಲಿ ಕಾರ್ಮಿಕರ ಸಾವಿನ ಬಗ್ಗೆ ಮಾಹಿತಿ ತಿಳಿದ ಸಿಎಂ ವೈಎಸ್. ಜಗನ್ ಮೋಹನ್ ರೆಡ್ಡಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಅಪಘಾತದ ಕಾರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಇದರ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.